ಮಾರುಕಟ್ಟೆಯ ಬಂಗಾರ 'ಟೊಮೆಟೊ' ಸುತ್ತಮುತ್ತ ಜೋಕ್ಸ್, ಮೀಮ್ಸ್ ಒಂದಾ..ಎರಡಾ..

ಸಾಮಾನ್ಯವಾಗಿ ಅಡುಗೆ ಮನೆಯ ಕಂಪಲ್ಸರಿ ತರಕಾರಿಗಳಲ್ಲೊಂದಾದ ಟೊಮೆಟೋಗೆ ಇಗ ಬಂಗಾರದ ಬೆಲೆ. ಕೆಲವೇ ದಿನಗಳ ಹಿಂದೆ ಕೆಜಿಗೆ ಮೂವತ್ತು ರೂಪಾಯಿ ಇದ್ದ ಈ ತರಕಾರೀ ಬೆಲೆ ಈಗ ಕೆಲವೊಂದು ನಗರಗಳಲ್ಲಿ ಇನ್ನೂರು ರೂಪಾಯಿ ದಾಟಿದೆ.

ದರ್ಶಿನಿ ಹೋಟೆಲುಗಳಲ್ಲಿ ಟೊಮೆಟೋ ಬಾತ್ ಕ್ಯಾನ್ಸಲ್ ಆಗಿದ್ದರೆ, ಪಿಜ್ಜಾ ಬರ್ಗರ್ ನಲ್ಲೂ ಟೊಮೆಟೋ ಮಾಯವಾಗಿದೆ. ಕೆಜಿಯೊಂದಕ್ಕೆ ಹತ್ತು ರೂಪಾಯಿಯೂ ಎಪಿಎಂಸಿಯಲ್ಲಿ ಸಿಗದೇ ಇದ್ದಾಗ, ಬೇಸರದಿಂದ ಟೊಮೆಟೋವನ್ನು ಹೆದ್ದಾರಿಗೆ ಬಿಸಾಡಿ ಪ್ರತಿಭಟಿಸಿದ ದಿನವೂ ಇದೆ.

Tomato Price All Time High, Here Is Some Of The Jokes, Memes Spreading In Social Media

ಹಿಂದೊಮ್ಮೆ ಈರುಳ್ಳಿ ಬೆಲೆ ಏರಿದ್ದರಿಂದ ದೆಹಲಿ ಸರ್ಕಾರವೇ ಪತನಗೊಂಡಿದ ಉದಾಹರಣೆಗಳಿವೆ. ಟೊಮೆಟೋ ಬೆಲೆ ಗಗನಕ್ಕೆ ಏರಿದ ನಂತರ ಇದರ ಸುತ್ತಮುತ್ತ ಸಾಕಷ್ಟು ಮೀಮ್ಸ್, ಜೋಕ್ಸುಗಳು ಇಂಟರ್ನೆಟ್/ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಕೆಲವೊಂದು ಸ್ಯಾಂಪಲುಗಳು ಹೀಗಿವೆ:
--
ಮನೆಯಾಗ ಎಷ್ಟು ಬಂಗಾರ, ಹಣ ಇದ್ದರೆ ಏನು ಉಪಯೋಗ!
ನೆಟ್ಟಗೆ ಒಂದು ಕೆಜಿ ಟೊಮೆಟೋ ಇಲ್ಲ ಅಂದ ಮ್ಯಾಲಾ..
--
ಗುಂಡ: ತಳ್ಳು ಗಾಡಿಯಲ್ಲಿ ತರಕಾರೀ ಮಾರಿಕೊಂಡು ಬಂದವನ ಬಳಿ ಐದು ಕೆಜಿ ಟೊಮೆಟೋ ಕೊಡು ಅಂತ ಕೇಳಿದೆ. ಪಕ್ಕದಲ್ಲಿ ನಿಂತಿದ್ದ ಇಬ್ಬರು ಹೆಂಗಸರು ಗುಸುಗುಸು ಮಾತನಾಡಲು ಆರಂಭಿಸಿದರು.
ತಿಮ್ಮ: ಏನೂಂತ?
ಗುಂಡ: ಹುಡುಗ ತುಂಬಾ ಸಂಸ್ಕಾರಸ್ಥ ಎಂದನಿಸುತ್ತದೆ. ನಮ್ಮ ಮನೆ ಹುಡುಗಿಗೆ ಇವವೇ ಪರ್ಫೆಕ್ಟ್ ಜೋಡಿ..
--
ಗಂಡ ಹೆಂಡತಿ ಮಾತನಾಡಿಕೊಳ್ಳುತ್ತಿದ್ದರು..

ಗಂಡ: ಪ್ರಿಯೇ.. ನಿನ್ನ ಮೇಲಿನ ಪ್ರೀತಿಯ ಸಲುವಾಗಿ ಗೋಳಗುಮ್ಮಟ ಕಟ್ಟಿಸಲೋ, ತಾಜ್ ಮಹಲ್ ಕಟ್ಟಿಸಲೋ..
ಪತ್ನಿ: ಲೇ ಗಂಡಾ.. ಮನ್ಯಾಗ ಟೊಮೆಟೋ ಖಾಲಿ ಆಗ್ಯಾವ.. ಮೊದಲು ಅದನ್ನ ತಗೊಂಡು ಬಾ..

Tomato Price All Time High, Here Is Some Of The Jokes, Memes Spreading In Social Media
--

ಸುಬ್ಬ: ಲೇ.. ಸುಬ್ಬಿ, ಇವತ್ತು ನಿನ್ ಬರ್ತಡೇ ಅಲ್ವಾ.. ಏನು ಗಿಫ್ಟ್ ಬೇಕು ಕೇಳು..
ಸುಬ್ಬಿ: ಭಾಳ ಏನೂ ಬ್ಯಾಡಾ. ಒಂದೈದು ಕೆಜಿ ಟೊಮೆಟೋ ಕೊಟ್ಟು, ಪುಣ್ಯ ಕಟ್ಕೋ..
--

ಗಂಡ: ನಿನ್ನ ಜೊತೆ ಇರೋಕೆ ಆಗಲ್ಲಾ ನನಗೆ, ಸಾಯೋಕೆ ಹೊರಟಿದ್ದೀನಿ..
ಹೆಂಡತಿ: ಹೋಗುವಾಗ ಬ್ಯಾಗ್ ತಗೊಂಡು ಹೋಗಿ..
ಗಂಡ: ಬ್ಯಾಗ್ ಯಾಕೆ?
ಹೆಂಡತಿ: ಅಕಸ್ಮಾತ್ ಸಾಯಲಿಲ್ಲ ಎಂದರೆ ಒಂದು ಕೆಜಿ ಟೊಮೆಟೋ ತಗೊಂಡು ಬರ್ರೀ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+