• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಖ ದಾಂಪತ್ಯ ಮತ್ತು ಗಂಡನಿಗೆ ಸಿಕ್ಕ ಗೋಲಿಗುಂಡ

|

ಮಧ್ಯ ವಯಸ್ಕ ದಂಪತಿಗಳಿಬ್ಬರು ಗುಡ್ಡದ ಮೇಲಿನ ಒಂಟಿ ಮನೆಯಲ್ಲಿ ಏಕಾಂಗಿಯಾಗಿ ನೆಲೆಸುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಆದರೆ ಐಹಿಕ ಸುಖಕ್ಕೇನು ಕೊರತೆಯಿರಲಿಲ್ಲ. ಇಬ್ಬರೂ ಅನ್ಯೋನ್ಯವಾಗಿದ್ದರು. ದಂಪತಿಗಳೆಂದರೆ ಹೀಗಿರಬೇಕು ಎಂಬಂತೆ ಇಬ್ಬರೂ ಜೀವನ ಸಾಗಿಸುತ್ತಿದ್ದರು.

ಒಂದು ದಿನ ಏನಾಯಿತೆಂದರೆ, ಹೆಂಡತಿ ಕೆಳಗಿನ ಮಹಡಿಯಲ್ಲಿ ಅಡುಗೆ ಮನೆಯಲ್ಲಿ ಕೆಲಸವೇನೋ ಮಾಡುತ್ತಿದ್ದಾಗ, ಮೇಲಿನ ಮಹಡಿಯಲ್ಲಿದ್ದ ಶಯನಗೃಹದಲ್ಲಿ ಗಂಡ ಏನನ್ನೋ ಹುಡುಕುತ್ತಿದ್ದ. ಎಲ್ಲ ಕೆದಕಿ ನೋಡುವಾಗ ಹಠಾತ್ತನೆ ಆತನ ದೃಷ್ಟಿಗೆ ಬೀರುವಿನ ಹಿಂದೆ ಇದ್ದ ಒಂದು ಡಬ್ಬಿ ಸಿಕ್ಕಿತು. ಡಬ್ಬಿಯನ್ನು ತನ್ನ ದೃಷ್ಟಿಗೂ ಬೀಳಿಸದೆ ಮುಚ್ಚಿಡುವಂಥದ್ದೇನಿದೆ ಎಂದು ಅವನಿಗೆ ಆಶ್ಚರ್ಯವಾಯಿತು.

ಅದನ್ನು ತೆಗೆದು ನೋಡಿದಾಗ ಆತನಿಗೆ ಇನ್ನೂ ಆಶ್ಚರ್ಯವಾಯಿತು. ಅದರಲ್ಲಿ ಸಾವಿರ ರು. ಮೌಲ್ಯದ ನೋಟುಗಳಿದ್ದವು. ಇನ್ನೂ ಆಶ್ಚರ್ಯವಾಗಿದ್ದೇನೆಂದರೆ, ಅದರಲ್ಲಿ ನಾಲ್ಕು ಗೋಲಿಗಳಿದ್ದವು, ಮಕ್ಕಳು ಆಡುವ ಗೋಲಿಗಳು. ಮೊದಲೇ ಮಕ್ಕಳಿಲ್ಲ. ಅಂಥದ್ದರಲ್ಲಿ ಈ ಗೋಲಿಗಳಿಗೇನು ಇಲ್ಲಿ ಕೆಲಸ ಎಂದು ಗಂಡ ವಿಸ್ಮಿತನಾದ.

ಎಲ್ಲವೂ ಅವನಿಗೆ ಒಗಟಾಗಿ ಕಂಡಿತು. ಏನೇ ಆಗಲಿ ಒಂದ್ ಕಿತಾ ಹೆಂಡತಿಯನ್ನು ಕೇಳಿ ಈ ಒಗಟಿಗೆ ಪರಿಹಾರ ಕಂಡೇ ಹಿಡಿಯೋಣವೆಂದು ಡಬ್ಬಿಯನ್ನು ಕೈಯಲ್ಲಿ ಹಿಡಿದು ಕೆಳಗೆ ಬಂದ. ಲಕ್ಷಣವಾಗಿ ಸೀರೆಯನುಟ್ಟು ಅಡುಗೆ ಕೆಲಸ ಮಾಡುತ್ತಿದ್ದ ಹೆಂಡತಿಯನ್ನು ಹಿಂದಿನಿಂದ ತಬ್ಬಿಕೊಂಡು ಡಬ್ಬಿಯನ್ನು ಆಕೆಯ ಮುಂದೆ ಹಿಡಿದ. ತಬ್ಬಿಕೊಂಡಿದ್ದು ಆಕೆಗೆ ಆಶ್ಚರ್ಯವೇನೂ ತರಲಿಲ್ಲ, ಯಾಕೆಂದರೆ ಆತ ಮಾಡುತ್ತಿದ್ದುದೇ ಹಾಗೆ. ಆದರೆ, ಡಬ್ಬಿಯನ್ನು ಮುಖದ ಮುಂದೆ ಹಿಡಿದಿದ್ದು ಆಕೆಯ ಮುಖ ಕೆಂಪೇರುವಂತೆ ಮಾಡಿತು. ಇವನಿಗೆ ಇದೆಲ್ಲಿ, ಹೇಗೆ ಸಿಕ್ಕಿತು ಎಂದು ಒಂದು ಕ್ಷಣ ಆಕೆ ತಬ್ಬಿಬ್ಬಾದಳು. ಆದರೂ ಸಾವರಿಸಿಕೊಂಡು ಏನೂ ಆಗೇ ಇಲ್ಲ ಎಂಬಂತೆ ಕೆಲಸದಲ್ಲಿ ಮುಳುಗಿದಳು.

"ಏನ್ ಚಿನ್ನಾ ಇದು ಡಬ್ಬಿ, ಬೀರುವಿನ ಹಿಂದೆ ಮುಚ್ಚಿಟ್ಟಿದ್ದೆಯಲ್ಲ. ತುಂಬಾ ಜಾಣೆ ಕಣೆ ನೀನು. ನನಗೆ ಹೇಳದೆ ಕೇಳದೆ ದುಡ್ಡು ಉಳಿಸಿದ್ದೀಯಲ್ಲ. ಆದರೆ, ಇದೇನಿದು ಗೋಲಿಗುಂಡಗಳು?" ಎಂದು ಗಂಡ ಪ್ರಶ್ನಿಸಿದ.

"ಹೇಹೇ ಏನೂ ಇಲ್ಲ. ದುಡ್ಡು ಎಲ್ಲಾ ಹೆಂಗಸರೂ ಹೀಗೆ ಉಳಿಸೇ ಉಳಿಸ್ತಾರೆ, ನಾನೂ ಹಾಗೆ" ಎಂದು ನುಣುಚಿಕೊಳ್ಳಲು ಯತ್ನಿಸಿದಳು. ಪಟ್ಟು ಬಿಡದ ಗಂಡ ಆಕೆಯನ್ನು ಇನ್ನಷ್ಟು ಗಟ್ಟಿಯಾಗಿ ತಬ್ಬಿಕೊಂಡು.

"ಹಣವೇನೋ ಸರಿ. ಆದರೆ ಈ ಗೋಲಿಗಳೇಕೆ. ನನಗೆ ಇದರಲ್ಲೇನೋ ಸೋಜಿಗ ಇದೆ ಅಂತ ಅನಿಸ್ತಿದೆ. ಅರ್ಥವಾಗ್ತಿಲ್ಲ, ಎಲ್ಲ ಒಗಟು ಒಗಟು. ಉತ್ತರ ನೀನು ಹೇಳಲೇಬೇಕು, ನನ್ನಾಣೆ" ಎಂದು ಇನ್ನಷ್ಟು ಬರಸೆಳೆದ.

ಹೆಂಡತಿಗೆ ಬೇರೆ ದಾರಿಯೇ ಇರಲಿಲ್ಲ, ಗಂಡ ಆಣೆ ಬೇರೆ ತೆಗೆದುಕೊಂಡಿದ್ದಾನೆ. "ಏನೂ ಇಲ್ಲರಿ, ರಾತ್ರಿ ನೀವು ನನಗೆ ಸುಖ ಕೊಡಲು ಸೋತಾಗಲೆಲ್ಲ, ಬೇಜಾರಾದಾಗಲೆಲ್ಲ ಪ್ರತಿಬಾರಿ ಎರಡೆರಡು ಗೋಲಿ ತಂದು ಡಬ್ಬಿಯಲ್ಲಿ ಇಡುವ ಹ್ಯಾಬಿಟ್ ಶುರುಮಾಡಿದೆ" ಎಂದು ರಹಸ್ಯವನ್ನು ಬರಿದು ಮಾಡಿದಳು.

"ನಾಲ್ಕೇ ಗೋಲಿಗಳಿವೆಯಲ್ಲ? ಪರವಾಗಿಲ್ಲ, ಇಷ್ಟು ವರ್ಷಗಳ ದಾಂಪತ್ಯದಲ್ಲಿ ಎರಡು ಬಾರಿ ಮಾತ್ರ ನಿನಗೆ ಸುಖ ನೀಡಲು ನಾನು ಸೋತಿದ್ದು ಅಂತಹ ದೊಡ್ಡದೇನಲ್ಲ" ಎಂದು ಒಂದು ಕೈಯಿಂದ ಹೆಂಡತಿಯ ಬೆನ್ನು ಸವರುತ್ತ, ಮತ್ತೊಂದು ಕೈಯಿಂದ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳಲು ಆರಂಭಿಸಿದ.

"ಅಯ್ಯ, ಈಗಿರುವುದು ನಾಲ್ಕು ಮಾತ್ರ. ಈಹಿಂದೆ ನಾನು ಸಾವಿರಕ್ಕೂ ಹೆಚ್ಚು ಗೋಲಿಗಳನ್ನು ಸಂಗ್ರಹಿಸಿದ್ದೆ. ಎಲ್ಲವನ್ನೂ ಗುಡ್ಡದ ಕೆಳಗಿನ ಕಿರಾಣಿ ಅಂಗಡಿಯವನಿಗೆ ಮಾರಿಬಿಟ್ಟೆ!"

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jokes for the day : Adult jokes only for you. One day husband was searching for something in his home. Suddenly he comes across a box with few marbles and thousand rupee. The mystery of rupee and marbles baffles him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more