ಗರ್ಭಿಣಿ ಲವೀನಾ ಗುಳುಗುಳು, ಯತೀಶ ಗಳಗಳ!

ಲವೀನಾಳ ಮುಖದಲ್ಲಿ ಒಂದು ಬಗೆಯ ಕಾಂತಿ ಇದ್ದರೂ, ಸಣ್ಣ ಪ್ರಮಾಣದ ದುಗುಡ ಮನೆಮಾಡಿತ್ತು. ಆ ನಾಚಿಕೆಯ ಭಾವದಲ್ಲಿ ಆಕೆಯ ಮುಖ ಮತ್ತಷ್ಟು ಕೆಂಪೇರಿತ್ತು. ಆರಾಮ್ ಕುರ್ಚಿಯ ಮೇಲೆ ಎರಡೂ ಕಾಲುಗಳನ್ನು ತೈತಕ ಕುಣಿಸುತ್ತ ಕುಳಿತಿದ್ದ ಗಂಡ ಯತೀಶನ ಬಳಿ ವಿಪರೀತ ಹಿಂಜರಿತದಿಂದಲೇ ಲವೀನಾ ಬಂದಳು.

ಲವೀನಾ : ರೀ... ರೀ... ನಿಮಗೊಂದು ಮಾತು ಹೇಳಬೇಕು.

ಯತೀಶ : ಏನು ಅಮ್ಮಾವ್ರು ಇಷ್ಟೊಂದು ನಾಚಿಕೆ ಪಟ್ಕೊಂಡಿದ್ದಾರೆ? ಏನ್ ಸಮಾಚಾರ ಹೇಳು ಬೇಗ.

ಲವೀನಾ : ಹೇಳಿದ್ರೆ ನೀವು ನನಗೆ ಬೈಯಲ್ಲ ತಾನೆ?

ಯತೀಶ : ಬೈಬಾರದಂಥ ಸುದ್ದಿ ಇದ್ರೆ ನಾನ್ಯಾಕೆ ಬೈತೀನಿ ಹೇಳು? ಡೋಂಟ್ ವರಿ, ಬೈಯಲ್ಲ ಹೇಳು.

ಲವೀನಾ : ಕೇಳಿದ ಮೇಲೆ ಹೊಡಿಯಲ್ಲ ತಾನೆ?

ಯತೀಶ : ಛೆಛೆ ಎಂದಾದ್ರೂ ಉಂಟಾ? ಬೈಯೋದಕ್ಕೇ ಧೈರ್ಯ ಇಲ್ಲ ಅಂದ್ಮೇಲೆ ಹೊಡೆಯೋದೆಲ್ಲಾದ್ರೂ ಉಂಟಾ? ಹೆಸಿಟೇಷನ್ನೇ ಬೇಡ, ಬೇಗ ಹೇಳು.

ಲವೀನಾ : ಏನಂದ್ರೆ... ಏನಂದ್ರೆ... ನನಗೀಗ ಎರಡು ತಿಂಗಳು.

ಯತೀಶ ಹುಚ್ಚೆದ್ದು ಕುಣಿಯಲು ಪ್ರಾರಂಭಿಸಿದ. ಸೊಂಟದಿಂದ ಆಕೆಯನ್ನು ಮೆಲ್ಲಗೆ ಮೇಲೆತ್ತಿ ಮುದ್ದಾಡಿಬಿಟ್ಟ, ಲೊಚಲೊಚನೆ ಮುತ್ತಿನ ಮಳೆಸುರಿಸಿದ, ಗಾಢವಾಗಿ ಆಲಂಗಿಸಿಕೊಂಡ. ಆತನ ಆನಂದಕ್ಕೆ ಪಾರವೇ ಇರಲಿಲ್ಲ. ಲುಂಗಿ ಉದುರಿಬಿದ್ದು ಪಟ್ಟಾಪಟ್ಟಿಯ ಮೇಲೆ ನಿಂತಿದ್ದರೂ ಖಬರು ಇರಲಿಲ್ಲ. ಆಡಬೇಕೆಂದರೂ ಮಾತೇ ಹೊರಡುತ್ತಿರಲಿಲ್ಲ. ಹತ್ತು ವರ್ಷದ ತನ್ನ ಪ್ರಯತ್ನ ಸಾರ್ಥಕವಾಯ್ತು ಎಂದು ನಲಿದಾಡಿಬಿಟ್ಟ. ಕೊನೆಗೆ...

ಯತೀಶ : ಹುರ್ರೆ... ಎಂಥಾ ಸುದ್ದಿ ಹೇಳಿದೆ ಚಿನ್ನಾ... ಇಂಥ ಸಂತೋಷದ ಸುದ್ದಿಗೆ ಬೈತೀರಾ, ಹೊಡಿತೀರಾ ಅಂತೆಲ್ಲ ಕೇಳ್ತೀಯಲ್ಲ? ಐ ಆಮ್ ಸೋ ಹ್ಯಾಪಿ. ಅಲ್ಲ, ಇಂಥ ಸುದ್ದಿಗೆ ಆ ರೀತಿ ಕೇಳಿದ್ದಾದರೂ ಯಾಕೆ ಅಂತ?

ಲವೀನಾ : ಯಾಕಂದ್ರೆ ನಾನು ಮಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದಾಗ ಇದೇ ಮಾತನ್ನು ಹೇಳಿದಾಗ ಅಪ್ಪ ಸರೀ ಬಾರಿಸಿದ್ದರು.

ಗುಳುಗುಳು ನಗುತ್ತ ಲವೀನಾ ಹೇಳುತ್ತಿದ್ದರೆ, ಯತೀಶ ಗಳಗಳನೆ ಅಳಲು ಶುರುಮಾಡಿದ್ದ! [ಲವೀನಾ ಜೋಕ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+