ಕೋಟಿ ಕೋಟಿ 'ಅಭಿನಂದನ್' ಎಂದ ಮೋದಿ, ಪಾಕಿಸ್ತಾನಕ್ಕೆ ನಡುಕ!

ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದಿಂದ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆಯಂತೆ! ಹಾಗಂತ ಟ್ರೋಲ್ ಹೈಕ್ಳು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದ್ದಾರೆ.

ಅಷ್ಟಕ್ಕೂ ಮತದಾರರರಿಗೆ ಕೃತಜ್ಞತೆ ಹೇಳಿದ ಮೋದಿ ಮಾತಿಗೆ ಪಾಕಿಸ್ತಾನ ಭಯಪಡುವಂಥದ್ದು ಏನಿದೆ ಅಂತ ಯೋಚಿಸ್ತಿದ್ದೀರಾ?

ಮೋದಿ ತಮ್ಮ ಭಾಷಣದಲ್ಲಿ ಹೇಳಿದ, "ನಮ್ಮನ್ನು ಗೆಲ್ಲಿಸಿದ ಜನರಿಗೆ 'ಕೋಟಿ ಕೋಟಿ ಅಭಿನಂದನ್" ಎಂಬ ಮಾತು ಪಾಕಿಸ್ತಾನದ ನಿದ್ದೆ ಕೆಡಿಸಿದೆಯಂತೆ. ಯಾಕಂತೀರಾ? ಮೋದಿ ಮಾತಿನಲ್ಲಿದ್ದ 'ಅಭಿನಂದನ್' ಎಂಬ ಪದದಿಂದ ವಿಂಗ್ ಕಮಾಂಡರ್ 'ಅಭಿನಂದನ್ ವರ್ಧಮಾನ್' ಅವರನ್ನು ಪಾಕಿಸ್ತಾನ ನೆನಪಿಸಿಕೊಂಡಿತಂತೆ! ಒಬ್ಬ ಅಭಿನಂದನ್ ಅವರನ್ನೇ ಒಂದು ದಿನ ಸಹಿಸಿಕೊಳ್ಳಲಾಗದೆ ಭಾರತಕ್ಕೆ ಒಪ್ಪಿಸಿದ್ದೇವೆ, ಇನ್ನು ಕೋಟಿ ಕೋಟಿ ಅಭಿನಂದನ್ ಅಂದರೆ ನಮ್ಮ ಕತೆ ಏನು ಅನ್ನೋದು ಪಾಕಿಸ್ತಾನದ ಚಿಂತೆಯಂತೆ!

Pakistan worried for PM Modis Koti Koti Abhinandan remark: Social media joke

ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.

ಅಭಿನಂದನ್ ಅವರನ್ನು ವಶಕ್ಕೆ ಪಡೆದಿದ್ದ ಪಾಕಿಸ್ತಾನದ ನಡೆಯನ್ನು ಇಡೀ ವಿಶ್ವವೂ ಖಂಡಿಸುತ್ತಿದ್ದಂತೆಯೇ ಮುಜುಗರಕ್ಕೀಡಾದ ಪಾಕಿಸ್ತಾನ ಶಾಂತಿಯ ಸಲುವಾಗಿ ಅವರನ್ನು ವಾಪಸ್ ಕಳಿಸುತ್ತೇವೆ ಎಂದಿತ್ತು. ಮಾರ್ಚ್ 01 ರಂದು ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+