ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಸುಂದರ ಸಾಂಸಾರಿಕ ಜೋಕು ಜೋಕಾಲಿಗಳು
ಮೊನ್ನೆ ನಮ್ಮ ತಿಂಮನ ಮನೆಗೆ ಐದು ಜನ ಬಾಲ್ಯದ ಗೆಳೆಯರು ಬಂದರು ...
ಚಹಾ ಮಾಡಲು ತಿಂಮ ತನ್ನ ಹೆಂಡತಿಗೆ ಹೇಳಿದ.
ಹೆಂಡತಿ ಹೇಳಿದ್ಳು ಮನೇಲಿ ಸಕ್ಕರೆ ಇಲ್ಲ ತಗೊಂಡು ಬನ್ನಿ ಅಂತ....
ತಿಂಮ ಹೇಳಿದ ಪರವಾಗಿಲ್ಲ ಸಕ್ಕರೆ ಇಲ್ಲದೇ ಮಾಡು ನಾನು ಸಂಭಾಳಿಸಿಕೊಳ್ತೇನೆ ಅಂದ
ಸರಿ, ಒಂದು ಐದಾರು ಕಪ್ಪು ಚಹಾ ಮಾಡಿ ಗೆಳೆಯರಿಗೆ ಕೊಡ್ತಾ ತಿಂಮ ಹೇಳಿದ
ಇದರಲ್ಲಿ ಒಂದು ಕಪ್ ನಲ್ಲಿ ಸಕ್ಕರೆ ಹಾಕಿಲ್ಲ ಅದು ಯಾರಿಗೆ ಬರುತ್ತೊ ಅವರ ಮನೆಗೆ ಮುಂದಿನ ಭಾನುವಾರ ಎಲ್ಲರೂ ಊಟಕ್ಕೆ ಹೋಗೊಣ ಅಂದ.....
ಚಹಾ ಕುಡಿದಾದ ಮೇಲೆ ತಿಂಮ ಕೇಳಿದ ಯಾರದು ....?
ಎಲ್ಲರೂ ಹೇಳಿದರು ನನಗೆ ಸಕ್ಕರೆ ಸ್ವಲ್ಪ ಜಾಸ್ತಿಯಾಗಿತ್ತು.....!!
😀😀😀
****
ಸಂಸಾರವೆಂದರೆ #ಜಂಡೂಬಾಮ್ ಇದ್ದ ಹಾಗೆ..
ಬೇರೆಯವರಿಗೆ ಘಮ-ಘಮ
ಹಚ್ಚಿಕೊಂಡವರಿಗೆ ಉರಿ-ಉರಿ
***
ಗಂಡ: ತರಕಾರಿಗೆ ಅಂತ 1000 ರೂಪಾಯಿ ತಗೊಂಡಲ್ಲ ಏನಾಯ್ತು?
ಹೆಂಡತಿ: ಅಯ್ಯೊ ನಿಮ್ಮಮ್ಮ ಹೇಳಿದಾರೆ ಸಂಸಾರ ಅಂದ್ಮೇಲೆ ಸಾವಿರ ಬರತ್ತೆ ಹೋಗತ್ತೆ ಅದೆಲ್ಲ ಲೆಕ್ಕ ಇಡಬಾರದು ಅಂತ.
😂😂😂😂😂
Comments
English summary
Jokes for the day: Here is Husband and wife chit chat and family latest jokes and popular jokes shared on whats app.
Story first published: Monday, January 22, 2018, 11:28 [IST]