
ಬ್ಲಡ್ ಟೆಸ್ಟ್ ನಂತರ ಗುಂಡ, ನರ್ಸ್ ನೋಡಿ ಮಾಡಿದ್ದೇನು ಗೊತ್ತಾ!!
ಗುಂಡ ತನ್ನ ಮನೆಯ ಹತ್ತಿರವಿರುವ ಬ್ಲಡ್ ಟೆಸ್ಟ್ ಲ್ಯಾಬ್ ಗೆ ರಕ್ತಪರೀಕ್ಷೆ ಮಾಡೋಕೆ ಹೋಗ್ತಾನೆ..
ಅಲ್ಲಿ ಸುಂದರವಾದ ನರ್ಸ್, ಗುಂಡನ ಕೈಯನ್ನು ತನ್ನ ಮುಷ್ಟಿಯಲ್ಲಿ ಹಿಡಿದು ಬ್ಲಡ್ ತೆಗೀತಾಳೆ..
ಚಿತ್ರಗುಪ್ತರೇ, ಇವನ ಜೊತೆ ತಿಲೋತ್ತಮೆಯನ್ನು ಕಳುಹಿಸಿ
ನರ್ಸ್ ಬ್ಲಡ್ ತೆಗೆದ ಮೇಲೆ ಗುಂಡ ಖುಷೀಲಿ ಒಂದೇ ಸಮನೆ ಡ್ಯಾನ್ಸ್ ಮಾಡೋಕೆ ಶುರು ಮಾಡ್ತಾನೆ..
ನರ್ಸ್: ಯಾಕ್ರೀ , ಯಾಕೆ ಡ್ಯಾನ್ಸ್ ಮಾಡ್ತಾ ಇದ್ದೀರಾ?
ಗುಂಡ: ಬ್ಲಡ್ ಟೆಸ್ಟ್ ಆಯ್ತಲ್ಲ.. ಇನ್ನು ಯುರಿನ್ ಟೆಸ್ಟ್
--
ಗುಂಡ: ಸ್ವಾಮೀ ಹೊಸ ವರ್ಷದ ಕ್ಯಾಲೆಂಡರ್ ಬಂದಿದೆಯಾ?
ಅಂಗಡಿಯವ: ಬಂದಿದೆ.
ಗುಂಡ: ಕೊಡಿ.. ಹಾಗಾದ್ರೆ..
ಅಂಗಡಿಯವ: ಯಾವ ಕ್ಯಾಲೆಂಡರ್ ಕೊಡ್ಲಿ..
ಗುಂಡ: ರಜೆ ಜಾಸ್ತಿ ಇರೋ ಕ್ಯಾಲೆಂಡರ್ ಕೊಡಿ..
---
ಬಲಗಾಲಿಟ್ಟು ಮನೆಗೆ ಬಂದ ಸೊಸೆಗೆ, ಅತ್ತೆ ತಮ್ಮ ಮನೆಯ ಬಗ್ಗೆ ವಿವರಿಸುತ್ತಾ...
ಅತ್ತೆ: ನಾನು ಈ ಮನೆಯ ಗೃಹ ಸಚಿವೆ, ನಿನ್ನ ಮಾವ ಹಣಕಾಸು ಸಚಿವ, ನನ್ನ ಮಗಳು ಸಾಮಾಜಿಕ ಅಭಿವೃದ್ದಿ ಸಚಿವೆ,
ನನ್ನ ಮಗ ಅಂದರೆ ನಿನ್ನ ಗಂಡ ನಾಗರಿಕ ಪೂರೈಕೆ ಅಥವಾ ಮನೆ ಅಗತ್ಯ ಪೂರೈಕೆ ಸಚಿವ..
ಈಗ ಹೇಳು.. ನೀನು ಯಾವ ಖಾತೆಯನ್ನು ಹೊರುತ್ತೀಯಾ.. ಎಂದಾಗ..
ಸೊಸೆ: ಮಂದಹಾಸ ಬೀರುತ್ತಾ.. ನಾನು ವಿರೋಧ ಪಕ್ಷದ ನಾಯಕಿಯಾಗುತ್ತೇನೆ.