
ಹುಡುಗಿ ವೆರಾಂಡಾದಲ್ಲಿದ್ದಾಗ, ಅವಳ ಬಾಯ್ ಫ್ರೆಂಡ್ ಬಂದು ಬಿಟ್ಟ
ಒಂದು ಸಲ ಒಬ್ಬ ಹುಡುಗಿ ವಯಸ್ಸಾದ ತನ್ನ ಅವ್ವನ ಜೊತೆ ವೆರಾಂಡಾದಲ್ಲಿ ಕುಳಿತಿದ್ದಳು. ಆವಾಗ ಅಲ್ಲಿಯೇ ಅವಳ ಬಾಯ್ ಫ್ರೆಂಡ್ ಬಂದು ಬಿಟ್ಟ.
ಆ ಹುಡುಗಿ ತನ್ನ ಬಾಯ್ ಫ್ರೆಂಡ್ ಗೆ ಹೀಗೆ ಹೇಳಿದಳು:
ಹುಡುಗಿ: "ನೀನು ರಾಮ್ ಪಾಲ್ ಯಾದವ್ ಅವರ ಪುಸ್ತಕ, Dad is at Home ತಂದಿದ್ದೀಯಾ"?
ಹುಡುಗ: "ಇಲ್ಲ ನಾನು ಕೀಮತೀ ಆನಂದ್ ಅವರ, Where should I wait for you ಪುಸ್ತಕ ಒಯ್ಯಲು ಬಂದಿರುವೆ".
ಹುಡುಗಿ: "ಆ ಪುಸ್ತಕ ನನ್ನ ಬಳಿ ಇಲ್ಲ. ನನ್ನ ಬಳಿ ಪ್ರೇಮ್ ಬಾಜ್ಪೇಯಿ ಅವರ, Under the Mango Tree ಇದೆ".
ಹುಡುಗ : "ಸರಿ. ನೀನು ಬರುವಾಗ ಆನಂದ್ ಬಕ್ಷಿ ಅವರ, Call You In Five Minutes ತೊಗೊಂಡು ಬಾ".
ಹುಡುಗಿ : Ok. ನಾನು ಜಾನ್ ಅಬ್ರಾಹಂ ಅವರ, Won't Let You Down ಪುಸ್ತಕ ತಪ್ಪದೇ ತೆಗೆದುಕೊಂಡು ಬರ್ತೀನಿ".
ಹುಡುಗ ಅವ್ವನ ಚರಣ ಸ್ಪರ್ಶ ಮಾಡಿ ಹೋಗಿಬಿಡುತ್ತಾನೆ.
ಅವ್ವ : "ಮಗಳೇ ಈ ಹುಡುಗ ಎಷ್ಟೊಂದು ಪುಸ್ತಕಗಳು ಅದು ಹೇಗೆ ಓದುತ್ತಾನೆ"?
ಹುಡುಗಿ : "ಹೌದು ಅವ್ವ. ನಮ್ಮ ಕ್ಲಾಸ್ ನಲ್ಲಿ ಇವನು ತುಂಬಾ ವಿವೇಕಿ ಹಾಗೂ ಜಾಣ".
ಅವ್ವ : "ಹೌದಾ ಮಗಳೇ! ಹಾಗಾದರೆ ಅವನಿಗೆ ಮುನ್ಶಿ ಪ್ರೇಮಚಂದ್ ಅವರ, Old people are not stupid ಪುಸ್ತಕವನ್ನು ಒಮ್ಮೆ ಓದಲು ಹೇಳು".
(ವಾಟ್ಸಾಪ್)