ಹಡಗನ್ನು ಎಲ್ಲಿ ಬಚ್ಚಿಟ್ಟಿದ್ದಿಯಾ ನನಗೆ ಗೊತ್ತು!
ಸುಬ್ಬು ಒಬ್ಬ ಜಗದ್ವಿಖ್ಯಾತ ಜಾದೂಗಾರ ಎಂದು ಹೆಸರು ಪಡೆದಿರುತ್ತಾನೆ. ಆತ ಜಾದೂ ಪ್ರದರ್ಶನ ಮಾಡಿಕೊಂಡು ದೇಶವಿದೇಶ ಸುತ್ತುತ್ತಿರುತ್ತಾನೆ. ಒಂದು ಬಾರಿ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಪಯಣಿಸುತ್ತಿರುವಾಗ ಹಡಗಿನಲ್ಲಿ ಜಾದೂ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಯನ್ನು ಸುಬ್ಬು ಗಳಿಸಿರುತ್ತಾನೆ.
ಹಡಗಿನ ಕ್ಯಾಪ್ಟನ್ ಆಗಿದ್ದ ಡಿಬ್ಬಿಯ ಬಳಿ ಒಂದು ಮುದ್ದಾಗ ಗಿಳಿಯಿರುತ್ತದೆ. ಹಾಗೂ ಹೀಗೂ ಮಾತನಾಡಲು ಗಿಳಿ ಕಲಿತಿರುತ್ತದೆ. ಸುಬ್ಬು ಜಾದೂ ಮಾಡುವುದನ್ನು ನೋಡಿ ನೋಡಿ, ಆತನ ಕೆಲ ಟ್ರಿಕ್‌ಗಳನ್ನು ಕದ್ದು ನೋಡಿಬಿಟ್ಟಿರುತ್ತದೆ. ಈ ಸುಬ್ಬುವಿನ ಟ್ರಿಕ್‌ಗಳನ್ನು ಆತ ಮಾಡುತ್ತಿದ್ದಾಗಲೇ ಹೇಳಿ ಆತನನ್ನು ಬಯಲಿಗೆಳೆಯಬೇಕು ಎಂದು ಸ್ಕೆಚ್ ಹಾಕುತ್ತದೆ ಗಿಳಿ.
ಒಂದು ದಿನ ಜನರ ಭಾರೀ ಸಂಖ್ಯೆಯಲ್ಲಿ ಸುಬ್ಬುವಿನ ಮ್ಯಾಜಿಕ್ ನೋಡುತ್ತಿರುತ್ತಾರೆ. ಆತ ಮಾಡುತ್ತಿರುವಾಗಲೇ ಆ ವಸ್ತು ಅಲ್ಲಿ ಬಚ್ಚಿಟ್ಟಿದ್ದಾನೆ, ಈ ವಸ್ತು ಇಲ್ಲಿ ಬಚ್ಚಿಟ್ಟಿದ್ದಾನೆ ಎಂದು ಚೀರಲು ಪ್ರಾರಂಭಿಸುತ್ತದೆ. ಇದು ಸುಬ್ಬುವನ್ನು ಸಾಕಷ್ಟು ಮುಜುಗರಕ್ಕೆ ಈಡುಮಾಡುತ್ತದೆ. ದೊಡ್ಡ ಧ್ವನಿಯಲ್ಲಿ ಮಾತನಾಡುತ್ತ, ಜೋರಾಗಿ ಮ್ಯೂಸಿಕ್ ಹಾಕಿ ಗಿಳಿಯ ಧ್ವನಿ ಕೇಳದಂತೆ ಮಾಡುತ್ತಾನೆ.
ಇಂದು ಹೇಗೆ ಬಚಾವಾದೆ ನಾಳೆ ಹೇಗೆ ಎಂದು ಚಿಂತಿಸುತ್ತಿರುವಾಗ, ಹಡಗು ಭಾರೀ ಬಿರುಗಾಳಿಗೆ ಸಿಕ್ಕು ಡೋಲಾಯಮಾನವಾಗಿ ಮುಳುಗಿಬಿಡುತ್ತದೆ. ಕೊನೆಗೆ ಉಳಿದವರು ಜಾದೂಗಾರ ಸುಬ್ಬು ಮತ್ತು ಆತನ ಹೂರಣ ಬಯಲಿಗೆಳೆಯಬೇಕೆಂದು ಪಣ ತೊಟ್ಟಿದ್ದ ಗಿಳಿ ಮಾತ್ರ. ಅದೃಷ್ಟಶಾಲಿ ಸುಬ್ಬುವಿಗೆ ಸಮುದ್ರದಲ್ಲಿ ಮರದ ದಿಮ್ಮಿ ಆಸರೆಯಾಗಿ ಸಿಗುತ್ತದೆ. ಅಲ್ಲಿಇಲ್ಲಿ ಹಾರಾಡಿ ಕೊನೆಗೆ ಆ ದಿಮ್ಮಿಯ ಮೇಲೆ ಗಿಳಿಯೂ ಬಂದು ಕುಳಿತುಕೊಳ್ಳುತ್ತದೆ.
ಸುಬ್ಬು ಸಿಕ್ಕಾಪಟ್ಟೆ ಸುಸ್ತಾಗಿರುತ್ತಾನೆ. ಜಾದೂ ಮನೆ ಹಾಳಾಗ ಪ್ರಾಣ ಉಳಿದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುತ್ತಾನೆ. ಆತನ ಮುಂದೆ ಕುಳಿತಿದ್ದ ಗಿಳಿ ಮತ್ತೆ ಮಾತನಾಡಲು ಪ್ರಾರಂಭಿಸುತ್ತದೆ.
"ಸುಬ್ಬು, ಸುಬ್ಬು ನನಗೊತ್ತು ನೀನು ಮರದ ದಿಮ್ಮಿಯ ಕೆಳಗೆ ಹಗಡನ್ನು ಬಚ್ಚಿಟ್ಟಿದ್ದಿಯಾ ಅಂತ, ಹೊರಗೆ ತಗಿ!" [ಸುಬ್ಬು ಜೋಕ್ಸ್]












Click it and Unblock the Notifications