• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಕ್ಸ್ : ಒಂಬತ್ತು, ಎಂಟು, ಏಳು, ಆರು, ಐದು!

By Prasad
|
Google Oneindia Kannada News
ಸುಮಾರು ದಿನಗಳಿಂದ ಕಾಯಿಲೆಯಿಂದ ಬಳಲುತ್ತಿದ್ದ ತಿಮ್ಮ, ತನಗೆ ಏನಾಗಿದೆ ಸರಿಯಾಗಿ ಪರೀಕ್ಷೆಯಾದರೂ ಮಾಡಿಸಿಕೊಳ್ಳೋಣವೆಂದು, ಸರ್ಜರಿಯಲ್ಲಿ ಫೇಮಸ್ ಡಾಕ್ಟರ್ ಅನ್ನಿಸಿಕೊಂಡಿದ್ದ ಡಾ. ಗುಂಡನ ಬಳಿ ಬರುತ್ತಾನೆ.

ಅಮೂಲಾಗ್ರವಾಗಿ ಪರೀಕ್ಷೆ ಮಾಡಿದ ನಂತರ ಡಾ. ಗುಂಡ ತಿಮ್ಮನನ್ನು ಕರೆದು, ವರದಿಯನ್ನು ಮುಂದಿಟ್ಟುಕೊಂಡು, ಅಯ್ಯೋ ಪಾಪ ಅನ್ನುವ ಹಾಗೆ ನೋಡಿ...

"ಮಿಸ್ಟರ್ ತಿಮ್ಮ, ನಿಮಗೊಂದು ಕಹಿಸುದ್ದಿಯಿದೆ. ಪರೀಕ್ಷೆಗೆ ಯಾಕಿಷ್ಟು ತಡವಾಗಿ ಬಂದಿರಿ? ನೀವು ಹೆಚ್ಚು ಕಾಲ ಬದುಕುವುದಿಲ್ಲ."

"ಹೌದಾ ಡಾಕ್ಟ್ರೆ. ಇನ್ನೆಷ್ಟು ಕಾಲ ಬದುಕುತ್ತೇನೆ?" ತಿಮ್ಮನ ಕಳಾಹೀನ ಮುಖದಲ್ಲಿ ತೀವ್ರ ಆತಂಕ.

"ಹತ್ತು."

"ಹತ್ತು? ಹತ್ತಂದ್ರೆ ಏನು? ಹತ್ತು ವರ್ಷ, ಹತ್ತು ತಿಂಗಳು, ಹತ್ತು ದಿನ?"

"ಒಂಬತ್ತು, ಎಂಟು, ಏಳು...."

***

ಸರಕಾರಿ ಕಚೇರಿಯಲ್ಲಿ ಕಾರಕೂನನಾಗಿರುವ 56 ವರ್ಷದ ಗುಂಡ ತನ್ನ ವಿಚಿತ್ರ ಕಾಯಿಲೆಗೆ ಚಿಕಿತ್ಸೆ ಪಡೆಯೋಣವೆಂದು ಡಾ. ತಿಮ್ಮನ ಬಳಿ ಬರುತ್ತಾನೆ.

ಗುಂಡ : "ಡಾಕ್ಟ್ರೆ, ನನಗೊಂದು ವಿಚಿತ್ರ ತೊಂದರೆಯಿದೆ. ಯಾವಾಗಲೂ ಹೂಸು ಬಿಡುತ್ತಲೇ ಇರುತ್ತೇನೆ."

ಡಾ. ತಿಮ್ಮ : "ಇದೇನು ವಿಚಿತ್ರ ತೊಂದರೆಯಲ್ಲ. ಎಲ್ಲರಿಗೂ ಇದು ಸಾಮಾನ್ಯ." ಅಂತ ತಾನೂ ಒಂದು ಹೂಸು ಬಿಡುತ್ತಾನೆ.

ಗುಂಡ : "ಇದು ಸಾಮಾನ್ಯವೇ ಇರಬಹುದು. ನನ್ನ ಸಮಸ್ಯೆಯೆಂದರೆ, ಹೂಸು ಬಿಟ್ಟಾಗ ಶಬ್ದವೂ ಆಗುವುದಿಲ್ಲ, ವಾಸನೆಯೂ ಬರುವುದಿಲ್ಲ. ನನಗಂತೂ ತುಂಬಾ ಮುಜುಗರವಾಗುತ್ತದೆ."

ಹೀಗೋ ಸಮಾಚಾರ ಅಂದ ಡಾ. ತಿಮ್ಮ ಗುಂಡನಿಗೆ ಕೆಲ ಮಾತ್ರೆಗಳನ್ನು ನೀಡಿ, ಒಂದು ವಾರ ಬಿಟ್ಟು ಬಾ ಎಂದು ಹೇಳುತ್ತಾನೆ. ವಾರ ಬಿಟ್ಟು ಗುಂಡ ಬರುತ್ತಾನೆ. ಹೂಸಿನ ತೊಂದರೆ ಇನ್ನೂ ಜಾಸ್ತಿಯಾಗಿರುತ್ತದೆ.

ಗುಂಡ : "ಎಂಥ ಮಾತ್ರೆ ಕೊಟ್ಟಿದ್ರಿ ಡಾಕ್ಟ್ರೆ? ಇವುಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ತಡಕೊಳ್ಳಲಾಗದಷ್ಟು ಹೂಸುಗಳು ಬರುತ್ತಲೇ ಇರುತ್ತವೆ. ಇತ್ತೀಚೆಗೆ ವಾಸನೆಯೂ ಸಿಕ್ಕಾಪಟ್ಟೆ ಬರುತ್ತಿದೆ."

ಡಾ. ತಿಮ್ಮ : "ಯೋ ಗುಂಡ ತಡ್ಕಳ್ಳಯ್ಯ. ನಿನ್ನ ನೆಗಡಿ ಪ್ರಾಬ್ಲಂ ಈಗ ಸರಿಹೋಗಿದೆ. ಇನ್ನು ಕಿವಿಯ ತೊಂದರೆ ಏನಿದೆಯೆಂದು ನೋಡೋಣ ಬಾ!"

English summary
Kannada jokes for the day. Funny doctor patient jokes. Laughter is the best medicine for all ailments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X