ಗುಂಡ ಟ್ರೈನ್ ನಲ್ಲಿ ರಾಮ ಜನ್ಮಭೂಮಿಗೆ ಹೊರಟಾಗ
ಗುಂಡ ಟ್ರೈನ್ ನಲ್ಲಿ ಪ್ರಯಾಣಿಸುತ್ತಿದ್ದ. ಟಿಸಿ ಬಂದ
ಟಿಸಿ: ಎಲ್ಲಿಗೆ ಹೋಗಬೇಕು?
ಗುಂಡ: ರಾಮನ ಜನ್ಮಭೂಮಿಗೆ
ಟಿಸಿ: ಟಿಕೆಟ್ ಇದೆಯಾ?
ಗುಂಡ: ಇಲ್ಲಾ..
ಟಿಸಿ: ನಡಿ ಮತ್ತೆ..
ಗುಂಡ: ಎಲ್ಲಿಗೆ?
ಟಿಸಿ: ಕೃಷ್ಣನ ಜನ್ಮಸ್ಥಾನಕ್ಕೆ
***
ಗುಂಡ ಪಾರ್ಕಿಂಗ್ ಲಾಟ್ ನಿಂದ ಕಾರ್ ಹೊರಗೆ ತೆಗೆಯುತ್ತಿದ್ದ. ಗುಂಡಿಗೆ ಫೋನ್ ಮಾಡಿ..
ಗುಂಡ: ನಾನು ಇವತ್ತು ಮನೆಗೆ ಬರಲಾಗುವುದಿಲ್ಲ.
ಗುಂಡಿ: ಯಾಕೆ?
ಗುಂಡ: ನನ್ನ ಕಾರಿನ ಸ್ಟೇರಿಂಗ್, ಗೇರ್, ಬ್ರೇಕ್ ಎಲ್ಲಾ ಕಳ್ಳತನವಾಗಿದೆ
ಸ್ವಲ್ಪ ಹೊತ್ತಿನ ನಂತರ ಗುಂಡ ಮತ್ತೆ ಗುಂಡಿಗೆ ಫೋನ್ ಮಾಡಿದ
ಗುಂಡ: ನಾನು ಬರ್ತಾ ಇದ್ದೀನಿ..
ಗುಂಡಿ: ಕಳ್ಳತನವಾದ ಐಟಂ ಸಿಕ್ತಾ?
ಗುಂಡ: ಇಲ್ಲಾ.. ಇಲ್ಲಾ ಕಳ್ಳತನ ಆಗಿರಲಿಲ್ಲ, ನಾನು ಬೈ ಮಿಸ್ಟೇಕ್ ಹಿಂದಿನ ಸೀಟ್ ನಲ್ಲಿ ಕೂತಿದ್ದೆ..
***
ಗುಂಡ ಎಲ್ಲರಿಗೂ ಖುಷಿಯಿಂದ ಸ್ವೀಟ್ ಹಂಚುತ್ತಿದ್ದ..
ತಿಮ್ಮ: ಏನೋ ಬಹಳ ಖುಷಿಯಾಗಿದ್ದೀಯಾ? ಸ್ವೀಟ್ ಯಾಕೆ ಹಂಚುತ್ತಿದ್ದೀಯಾಂತ ಮೊದಲು ಹೇಳು?
ಗುಂಡ: ಮೂರು ವರ್ಷಗಳ ನಂತರ ನನ್ನ ಬಕ್ರಾ ಮೊಟ್ಟೆ ಇಟ್ಟಿದೆ..
ತಿಮ್ಮ: ಏನೋ ಮೂರ್ಖನ ತರ ಮಾತನಾಡುತ್ತಿದ್ದೀಯಾ? ಬಕ್ರಾ ಯಾವಾಗಲಾದರೂ ಮೊಟ್ಟೆ ಇಡುತ್ತಾ?
ಗುಂಡ: ಮೂರ್ಖ ನೀನು, ನನ್ನ ಮನೆ ಕೋಳಿಗೆ ನಾನು ಬಕ್ರಾಂತ ಹೆಸರು ಇಟ್ಟೀದೀನಿ..











Click it and Unblock the Notifications