ಕವಿತಾ ವಿನುತಾ ಸರಿತಾ ಬೇಕಿತ್ತಾ!

***
ತುಂಬಾ ಹಸಿದಿದ್ದ ಗುಂಡ ಹೋಟೆಲ್ ಗೆ ಹೋಗಿ ಪಿಜ್ಜಾ ಆರ್ಡರ್ ಮಾಡಿದ. ಬಿಸಿಬಿಸಿ ಪಿಜ್ಜಾ ತೆಗೆದುಕೊಂಡು ಬಂದ ಮಾಣಿ.
ಮಾಣಿ : ಸಾರ್, ಇದನ್ನು ಎಷ್ಟು ಪೀಸ್ ಕಟ್ ಮಾಡ್ಲೀ.. ಆರು ಪೀಸ್ ಮಾಡ್ಲಾ.. ಹನ್ನೆರಡು ಮಾಡ್ಲಾ?
ಗುಂಡ : ಆರು ಪೀಸ್ ಮಾಡಪ್ಪಾ. ಹನ್ನೆರಡು ಪೀಸ್ ನಂಗೆ ತಿನ್ನೋಕ್ಕಾಗಲ್ಲಾ!
***
ಗುಂಡ ಮಗ ಪುಂಡನಿಗೆ ಬೆಂಕಿ ಪೆಟ್ಟಿಗೆ ತರಲು ಹೇಳುತ್ತಾನೆ. ಕಡ್ಡಿ ಹಚ್ಚಿದಾಗ ಒಂದು ಹತ್ತುತ್ತಿರಲಿಲ್ಲ.
ಗುಂಡ : ಥೂ. ಎಂಥಾ ಬೆಂಕಿ ಪೆಟ್ಟಿಗೆ ತಂದಿದ್ದೀಯಾ? ಒಂದು ಹತ್ತುತ್ತಿಲ್ಲಾ.
ಪುಂಡ : ಸುಮ್ನಿರಪ್ಪಾ. ಅಂಗಡಿಯಲ್ಲಿ ಎಲ್ಲಾ ಕಡ್ಡಿಯನ್ನು ಟೆಸ್ಟ್ ಮಾಡಿಯೇ ತೆಗೆದುಕೊಂಡು ಬಂದಿರೋದು!
***
ಗುಂಡ ಓಡೋಡಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ. ಸಾರ್ ಸಾರ್ ನಮ್ಮ ಮನೇಲಿ ಎಲ್ಲಾ ವಸ್ತುಗಳು ಕಳ್ಳತನವಾಗಿದೆ, ಟಿವಿ ಒಂದನ್ನು ಬಿಟ್ಟು. ಪೊಲೀಸಪ್ಪನಿಗೆ ಆಶ್ಚರ್ಯವೋ ಆಶ್ಚರ್ಯ.
ಪೋಲಿಸ್ : ಆ ಮಹಾನ್ ಕಳ್ಳ ಟಿವಿ ಒಂದನ್ನು ಯಾಕೆ ಬಿಟ್ಟ?
ಗುಂಡ : ನಾನು ಟಿವಿ ನೋಡುತ್ತಿದ್ದೆ ಸಾರ್!












Click it and Unblock the Notifications