Jobs in Yadagiri: ನೇರ ಸಂದರ್ಶನದಲ್ಲಿ ಭಾಗಿಯಾಗಿ ಪ್ರತಿಷ್ಠಿತ ಕಂಪನಿಗಳಿಗೆ ಸ್ಥಳದಲ್ಲೇ ಕೆಲಸಕ್ಕೆ ಆಯ್ಕೆಯಾಗಿ
ಯಾದಗಿರಿ, ಜುಲೈ. 08: ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಯಾದಗಿರಿಯಲ್ಲಿ ನೇರ ಸಂದರ್ಶನಕ್ಕೆ ಕರೆ ನೀಡಲಾಗಿದೆ. ದಿನಾಂಕ: 09-07-2024 ರಂದು (ಮಂಗಳವಾರ) ಬೆಳಗ್ಗೆ 10:00 ರಿಂದ ಮಧ್ಯಾಹ್ನ 02:00 ಗಂಟೆ ವರೆಗೆ ಸಂದರ್ಶನ ನಡೆಯಲಿದೆ. 4 ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ನೇರ ಸಂದರ್ಶನದಲ್ಲಿ ಭಾಗಿಯಾಗುವ ಕಂಪನಿಗಳು
* (G4S) ಸೆಕ್ಯೂರಿಟಿ ಸೋಲುಷನ್ಸ್ ಪ್ರೈವೆಟ್ ಲಿಮಿಟೆಡ್
* ಸ್ವತಂತ್ರ ಮೈಕ್ರೋಫೀನ್ ಪ್ರೈವೆಟ್ ಲಿಮಿಟೆಡ್
* ಅನ್ನಪೂರ್ಣ ಫೈನಾನ್ಸ್ ಪ್ರೈವೆಟ್ ಲಿಮಿಟೆಡ್
* ಕಾರ್ಡ್ ಮಾರ್ಕ್ ಸೋಲುಷನ್ಸ್

ಹುದ್ದೆ ಹೆಸರು & ಹುದ್ದೆಗಳು, ವಿದ್ಯಾಹರ್ತೆ ವಿವರ
*(G4S) ಸೆಕ್ಯೂರಿಟಿ ಸೋಲುಷನ್ಸ್ ಪ್ರೈವೆಟ್ ಲಿಮಿಟೆಡ್: ಈ ಸಂಸ್ಥೆಯಲ್ಲಿ 20 ಸೆಕ್ಯೂರಿಟಿ ಗಾರ್ಡ್ ಹುದ್ದೆಗಳು ಖಾಲಿಯಿವೆ. ಯಾದಗಿರಿ ಕಲಬುರಗಿ ಜಿಲ್ಲೆಯಾದ್ಯಂತ ಕೆಲಸ ಮಾಡುವವರು ಸಂದರ್ಶನಕ್ಕೆ ಭಾಗಿಯಾಗಬಹುದು. 22 ರಿಂದ 35 ವರ್ಷದ ಪುರುಷ ಅಬ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಎಸ್‌ಐ, ಬೋನಸ್, ಇನ್ಸುರೆನ್ಸ ಮತ್ತು ಗ್ರಾಚುಟಿ ಸವಲತ್ತುಗಳಿವೆ.
* ಸ್ವತಂತ್ರ ಮೈಕ್ರೋಫೀನ್ ಪ್ರೈವೆಟ್ ಲಿಮಿಟೆಡ್: ಈ ಸಂಸ್ಥೆಯಲ್ಲಿ 50 ಫೀಲ್ಡ್ ಅಫಿಸರ್ಸ್ / ರೀಲೇಷನ್ಶಿಪ್ ಆಫೀಸರ್ ಹುದ್ದೆಗಳು ಖಾಲಿಯಿವೆ. ಯಾದಗಿರಿ ಕಲಬುರಗಿ ಜಿಲ್ಲೆಯಾದ್ಯಂತ ಕೆಲಸ ಮಾಡುವವರು ಸಂದರ್ಶನಕ್ಕೆ ಭಾಗಿಯಾಗಬಹುದು. 18 ರಿಂದ 30 ವರ್ಷದ ಪುರುಷ ಮತ್ತು ಮಹಿಳೆಯರು ಸಂದರ್ಶನಕ್ಕೆ ಹೋಗಬಹುದು. ಬೈಕ್ ಮತ್ತು ಡಿಎಲ್ ಕಡ್ಡಾಯ.
* ಅನ್ನಪೂರ್ಣ ಫೈನಾನ್ಸ್ ಪ್ರೈವೆಟ್ ಲಿಮಿಟೆಡ್: ಈ ಸಂಸ್ಥೆಯಲ್ಲಿ ಫೀಲ್ಡ್ ಕ್ರೀಡಿಟ್ ಆಫೀಸರ್, ಡೆವಲಪ್ಟೆಂಟ್ ಆಫೀಸರ್, ಅಸಿಸ್ಟಂಟ್ ಬ್ರಾಂಚ್ ಮ್ಯಾನೆಜರ್ ಹುದ್ದೆಗಳು ಸೇರಿ ಒಟ್ಟು 50 ಖಾಲಿಯಿವೆ. ಅಸೆಂಬ್ಲರ್ ಜಾಗಕ್ಕೆ 100 ಹುದ್ದೆಗಳಿವೆ. ಯಾದಗಿರಿ ಕಲಬುರಗಿ ಜಿಲ್ಲೆಯಾದ್ಯಂತ ಕೆಲಸ ಮಾಡುವವರು ಬೇಕು.ಫೀಲ್ಡ್ ಕ್ರೀಡಿಟ್ ಆಫೀಸರ್, ಡೆವಲಪ್ಟೆಂಟ್ ಆಫೀಸರ್ ಹುದ್ದೆಗೆ ಪಿಯುಸಿ ಆಗಿದ್ದರೆ ಸಾಕು, ಅಸಿಸ್ಟಂಟ್ ಬ್ರಾಂಚ್ ಮ್ಯಾನೆಜರ್ ಹುದ್ದೆಗೆ ಪದವಿ ಪಡೆದಿರಬೇಕು.
* ಕಾರ್ಡ್ ಮಾರ್ಕ್ ಸೋಲುಷನ್ಸ್: ಈ ಸಂಸ್ಥೆಯಲ್ಲಿ ಟ್ರೈನಿ ಇಂಜಿನಿಯರ್ ಹುದ್ದೆಗಳು-25, ಟೆಕ್ನಿಷಿಯನ್ ಹುದ್ದೆಗಳು-200 ಇವೆ. ಟ್ರೈನಿ ಇಂಜಿನಿಯರ್ ಹುದ್ದೆಗೆ ಡಿಪ್ಲಮೋ ಮೆಕ್ಯಾನಿಕಲ್, ಟೆಕ್ನಿಷಿಯನ್ ಹುದ್ದೆಗೆ ಐಐಟಿ ಅಲ್ ಟ್ರೆಂಡ್ ಮಾಡಿರಬೇಕು. ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. 18 ರಿಂದ 28 ವರ್ಷ ವಯಸ್ಸಿನ ಅಭ್ಯರ್ಥಿಗಳು ಸಮಂದರ್ಶನಕ್ಕೆ ಹಾಜರಾಗಬಹುದು.

ಅಭ್ಯರ್ಥಿಗಳಿಗೆ ಸೂಚನೆ
* 09.07.2024 ರಂದು ನೇರ ಸಂದರ್ಶನದಲ್ಲಿ ಉದ್ಯೋಗದಾತರನ್ನು ಭೇಟಿಯಾಗಿ ಸಂದರ್ಶನಕ್ಕೆ ಒಳಪಟ್ಟು ಉದ್ಯೋಗವಕಾಶ ಪಡೆದುಕೊಳ್ಳಬಹುದು.
* ನೇರ ಸಂದರ್ಶನಕ್ಕೆ ಬರುವಾಗ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ವ್ಯಕ್ತಿ ಪರಿಚಯ (ರೆಸ್ಕೊಮ್/ಬಯೋಡಾಟಾ) 04 ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು.
* ನೋಂದಣಿಯಾಗಲು ಕ್ಯೂ-ಆರ್ ಕೋಡ್ ಸ್ಥಾನ ಮಾಡುವುದರ ಮೂಲಕ ನೋಂದಾಯಿಸಬುಹುದಾಗಿದೆ. ಆಥವಾ ಕ್ಯೂ-ಆರ್ ಕೋಡ್ ಸ್ಕಾನ್ ನೋಂದಣಿ ಮಾಡದೇ ಇರುವವರು 09.07.2024 ರಂದೇ ನೇರ ಸಂದರ್ಶನದಲ್ಲಿ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು.
ನೇರ ಸಂದರ್ಶನ ನಡೆಯುವ ಸ್ಥಳ:
ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಯಾದಗಿರಿ ಚಿತ್ತಾಪೂರ ರಸ್ತೆ, ಜಿಲ್ಲಾಡಳಿತ ಭವನ.
(ಮಿನಿ ವಿಧಾನಸೌಧ) ರೂಂ ನಂ. ಬಿ1 & ಬಿ2 - 2ನೇ ಮಹಡಿ ಯಾದಗಿರಿ. ದೂರವಾಣಿ ಮತ್ತು ಮೋಬೈಲ್ ಸಂಖ್ಯೆ: 08473-253718 . 0.94485 66765.












Click it and Unblock the Notifications