1000 ಸ್ಟಾಫ್‌ನರ್ಸ್, ಆಂಬ್ಯುಲೆನ್ಸ್ ಡ್ರೈವರ್ ಹುದ್ದೆಗೆ ನೇರ ನೇಮಕಾತಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 5 : ಜಿವಿಕೆ ಇಎಂಆರ್‌ಐ ಸಂಸ್ಥೆಯ 1000 ಸ್ಟಾಫ್‌ನರ್ಸ್ ಮತ್ತು 1000 ಆಂಬ್ಯುಲೆನ್ಸ್ ಡ್ರೈವರ್ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಫೆ.6 ಮತ್ತು 8 ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ತುರ್ತು ಪ್ರತಿ ಸ್ಪಂದನಾ ಸೇವೆ ಸಲ್ಲಿಸುತ್ತಿರುವ ಜಿವಿಕೆ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಇನ್ಸಿಟಿಟ್ಯೂಟ್ (ಜಿವಿಕೆ ಇಎಂಆರ್‌ಐ) ಕರ್ನಾಟಕದಾದ್ಯಂತ ನೇರ ಸಂದರ್ಶನ ನಡೆಸುತ್ತಿದ್ದು, ನೇಮಕಾತಿ ಮಾಡಿಕೊಳ್ಳುತ್ತಿದೆ. [301 ಪೇದೆಗಳ ಹುದ್ದೆಗೆ ಅರ್ಜಿ ಆಹ್ವಾನ]

jobs

ಫೆ.6 ಮತ್ತು 8ರಂದು ರಾಜ್ಯದ ಎಲ್ಲಾ ಜಲ್ಲೆಗಳ ಜಿಲ್ಲಾ ಆರೋಗ್ಯ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ನೇರ ಸಂದರ್ಶನ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕದ ಯಾವುದೇ ಭಾಗದಲ್ಲಾದರೂ ನೇಮಕ ಮಾಡಬಹುದಾಗಿದೆ. [ಮೈಸೂರಲ್ಲಿ ಫೆ.17ರಂದು ವಾಯುದಳದ ನೇಮಕಾತಿ]

ಸ್ಟಾಫ್‌ನರ್ಸ್ : ಒಟ್ಟು ಹುದ್ದೆಗಳು 1000, ವಿದ್ಯಾರ್ಹತೆ : ಕೆಎನ್‌ಸಿ ದೃಢೀಕರಣದೊಂದಿಗೆ ಎಎನ್‌ಎಂ/ಜಿಎನ್‌ಎಂ (ಹೊಸಬರು ಸಹ ಸಂದರ್ಶನಕ್ಕೆ ಬರಬಹುದು). ವಯಸ್ಸು : 18 ರಿಂದ 28, ವೇತನ : 9840.

ಆಂಬ್ಯುಲೆನ್ಸ್ ಚಾಲಕ : ಒಟ್ಟು ಹುದ್ದೆಗಳು 1000, ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಕಲಿಕಾ ಅರ್ಹತೆ : 1 ವರ್ಷದ ಹೆವಿ ಬ್ಯಾಡ್ಜ್‌ನೊಂದಿಗೆ 5 ವರ್ಷ ಹಳೆಯದಾದ ಡಿಎಲ್‌. ವಯಸ್ಸು : 25 ರಿಂದ 35 ವರ್ಷ. ವೇತನ : 9640.

ನೇರ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ತಮ್ಮ ಜೊತೆ ಅರ್ಜಿ, ಮೂಲ ಅಂಕಪಟ್ಟಿ, ಚಾಲನಾ ಪರವಾನಗಿ ತೆಗೆದುಕೊಂಡು ಬರಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka : Walk in interview for 1000 staff nurse and 1000 ambulance driver posts on February 6 and 8, 2016 at all district health officer office between 10 am to 5 pm. GVK EMRI (Emergency Management and Research Institute) organized interview.
Please Wait while comments are loading...