ಚಾಮರಾಜನಗರದಲ್ಲಿ ಕೆಲಸ ಖಾಲಿ ಇದೆ; ಜು.14ಕ್ಕೆ ನೇರ ಸಂದರ್ಶನ
ಚಾಮರಾಜನಗರ, ಜುಲೈ 12 : ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಚಾಮರಾಜನಗರದಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತಿದೆ. ಜುಲೈ 14ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.
ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಮೈಕ್ರೋಬಯೋಜಿಸ್ಟ್ (1 ಹುದ್ದೆ) ಭರ್ತಿ ಮಾಡಲಾಗುತ್ತಿದ್ದು, ಮೆಡಿಕಲ್ ಗ್ರ್ಯಾಜುಯೇಟ್ ಜೊತೆ ಪೋಸ್ಟ್ ಗ್ರ್ಯಾಜುಯೇಟ್ ಡಿಗ್ರಿ ಅಥವಾ ಡಿಪ್ಲೋಮ (ಮೈಕ್ರೋಬಯೋಲಾಜಿ, ವೈರಾಲಾಜಿ, ಪೆಥಾಲಾಜಿ ಮತ್ತು ಇತರೆ ಲ್ಯಾಬ್ ಸೈನ್ಸ್) ಅಥವಾ ಮೆಡಿಕಲ್ ಗ್ರ್ಯಾಜುಯೇಟ್ ಜೊತೆ ಲ್ಯಾಬರೇಟರಿ ಸೈನ್ಸ್‌ನೊಂದಿಗೆ 2 ವರ್ಷಗಳ ಅನುಭವ ಹೊಂದಿರುವ ಅಥವಾ ಮೆಡಿಕಲ್ ಮೈಕ್ರೋಬಯೋಲಾಜಿ ವಿಷಯದಲ್ಲಿ ಎಂ.ಎಸ್ಸಿ ಜೊತೆ ಮೆಡಿಕಲ್ ಮೈಕ್ರೋಬಯೋಲಾಜಿಯಲ್ಲಿ 2 ವರ್ಷ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತದೆ. ಅಭ್ಯರ್ಥಿಯ ಗರಿಷ್ಠ ವಯೋಮಿತಿ 60 ವರ್ಷ. ವೇತನ ಮಾಸಿಕ 40ಸಾವಿರ.

ಲ್ಯಾಬ್ ಟೆಕ್ನಿಷಿಯನ್ (1 ಹುದ್ದೆ) ಎಸ್. ಎಸ್. ಎಲ್. ಸಿ. ಜೊತೆ 3 ವರ್ಷಗಳ ಡಿ. ಎಂ. ಎಲ್. ಟಿ ಅಥವಾ ದ್ವಿತೀಯ ಪಿ. ಯು. ಸಿ ಜೊತೆ 2 ವರ್ಷಗಳ ಪ್ಯಾರ ಮೆಡಿಕಲ್ ಬೋರ್ಡ್ ಲ್ಯಾಬ್ ಟೆಕ್ನಿಷಿಯನ್ ಅಥವಾ ಎಸ್. ಎಸ್. ಎಲ್. ಸಿ. ಜೊತೆ ಕರ್ನಾಟಕ ವೊಕೇಷನಲ್ ಬೋರ್ಡ್‍ನಿಂದ 2 ವರ್ಷಗಳ ಲ್ಯಾಬ್ ಟೆಕ್ನಿಷಿಯನ್ ಅರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 40 ವರ್ಷ. ಮಾಸಿಕ ವೇತನ 14 ಸಾವಿರ ರೂ.ಗಳು.
ಈ ನೇಮಕಾತಿ ತಾತ್ಕಾಲಿಕವಾಗಿದ್ದು 3 ತಿಂಗಳ ಅವಧಿಯವರೆಗೆ ಅಥವಾ ಮುಂದಿನ ಆದೇಶದ ವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ನೇಮಕಾತಿಯನ್ನು ಮೆರಿಟ್ ಹಾಗೂ ಅನುಭವವ ಆಧಾರದ ಮೇಲೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಸಂಚಿತ ವೇತನವನ್ನು ಹೊರತುಪಡಿಸಿ ಇತರೆ ಭತ್ಯಗಳಿಗೆ ಅರ್ಹರಾಗಿರುವುದಿಲ್ಲ.
ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲಾತಿಗಳು ಮತ್ತು ಅವುಗಳ ದೃಢಿಕೃತ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.












Click it and Unblock the Notifications