ಕೊಪ್ಪಳ; ಅತಿಥಿ ಬೋಧಕರ ಹುದ್ದೆಗೆ ನೇರ ಸಂದರ್ಶನ

ಕೊಪ್ಪಳ, ಅಕ್ಟೋಬರ್ 26; ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೊಪ್ಪಳದಲ್ಲಿ ಅತಿಥಿ ಬೋಧಕರ ಹುದ್ದೆಗೆ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಅಕ್ಟೋಬರ್ 30ರಂದು ಆಸಕ್ತರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೊಪ್ಪಳ (ಟಣಕನಕಲ್ ಗ್ರಾಮ, ಕುಷ್ಟಗಿ ರಸ್ತೆ ಕೊಪ್ಪಳ) ಸಂಸ್ಥೆಗೆ ಅತಿಥಿ ಬೋಧಕರ ಹುದ್ದೆಗೆ ನೇರ ಸಂದರ್ಶನ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳು 11 ತಿಂಗಳಿಗೆ ಅತಿಥಿ ಬೋಧಕರಾಗಿ ಕೆಲಸ ಮಾಡಬೇಕು.

ಅಕ್ಟೋಬರ್ 30ರಂದು ಬೆಳಗ್ಗೆ 11ರಂದು ನೇರ ಸಂದರ್ಶನ ನಡೆಯಲಿದೆ. ಮೆಕ್ಯಾನಿಕ್ ಮೋಟಾರ್ ವೆಹಿಕಲ್ (ಎಮ್.ಎಮ್.ವಿ) ಹುದ್ದೆಗೆ (1) ಮೆಕ್ಯಾನಿಕ್ ಮೋಟಾರ್ ವೆಹಿಕಲ್ ಐ.ಟಿ.ಐ ಪಾಸಾದ ಮತ್ತು ಪ್ರಶಿಕ್ಷಣಾರ್ಥಿಯಾಗಿ ಒಂದು ವರ್ಷದ ತರಬೇತಿ ಪಡೆದ ಅಥವಾ ಡಿಪ್ಲೋಮಾ ಇನ್ ಅಟೊಮೊಬೈಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿದ ಹಾಗೂ ಎರಡು ವರ್ಷಗಳ ಬೋಧನೆ ಅನುಭವ ಹೊಂದಿದ ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

Walk In Interview For Guest Lecturer Post At Koppal

ಟರ್ನರ್ ಹುದ್ದೆಗೆ (1) ಐ.ಟಿ.ಐ ಪಾಸಾಗಿಬೇಕು ಹಾಗೂ ಒಂದು ವರ್ಷ ಪ್ರಶಿಕ್ಷಣಾರ್ಥಿಯಾಗಿ ತರಬೇತಿ ಪಡೆದ ಅಥವಾ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿದ ಹಾಗೂ ಎರಡು ವರ್ಷಗಳ ಬೋಧನೆ ಅನುಭವ ಹೊಂದಿದ ಅಭ್ಯರ್ಥಿಗಳು ಅರ್ಹರು.

ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ ಮೂಲ ಪ್ರತಿ ಹಾಗೂ 2-ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ ಎಂದು ಟಣಕನಕಲ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಕ್ಯಾಂಪಸ್ ಸಂದರ್ಶನ; ಐಟಿಐ ತರಬೇತಿ ಪಡೆದ ಅಭ್ಯರ್ಥಿಗಳಿಗಾಗಿ ಬುಹ್ಲೆರ್ ಇಂಡಿಯಾ ಪ್ರೈ. ಲಿ ಬೆಂಗಳೂರು ವತಿಯಿಂದ ಕುಕನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಕ್ಟೋಬರ್ 28 ರಂದು ಬೆಳಗ್ಗೆ 10 ಗಂಟೆಗೆ ಅಪ್ರೆಂಟಿಸ್‌ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ.

ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸುವ ಆಸಕ್ತ ಅಭ್ಯರ್ಥಿಗಳಿಗೆ 18 ರಿಂದ 24 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. 10ನೇ ತರಗತಿ ಮಾರ್ಕ್ಸ್ ಕಾರ್ಡ್, ಐಟಿಐ ಪಾಸಾದ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಮತ್ತು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋಗಳನ್ನು ಸಂದರ್ಶನಕ್ಕೆ ಬರುವಾಗ ತರಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 94495 17426, 99642 47098, 94807 15898ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ; ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲವು ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 10 ಮೇಲ್ವಿಚಾರಕರ ಸ್ಥಾನಗಳಿಗೆ ಗೌರವ ಸಂಭಾವನೆ ಆಧಾರದ ಮೇಲೆ ಹಾಗೂ ನಿಗದಿಪಡಿಸಿದ ಮೀಸಲಾತಿಗನುಸಾರ ನೇಮಕಾತಿ ಮಾಡಲಾಗುತ್ತಿದೆ.

ದಾವಣಗೆರೆ ತಾಲ್ಲೂಕಿನ ಬೇತೂರು-2ಎ (ಮಹಿಳೆ), ಗೊಲ್ಲರಹಳ್ಳಿ- 3ಬಿ (ಮಹಿಳೆ), ಕೈದಾಳೆ- ಪ.ಜಾತಿ, ಕಕ್ಕರಗೊಳ್ಳ- ಸಾಮಾನ್ಯ ಅಭ್ಯರ್ಥಿ, ಮತ್ತಿ- ಸಾಮಾನ್ಯ (ಮಹಿಳೆ). ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ- ಸಾಮಾನ್ಯ (ಗ್ರಾಮೀಣ ಅಭ್ಯರ್ಥಿ). ಚನ್ನಗಿರಿ ತಾಲ್ಲೂಕು ಹಿರೇಮಳಲಿ-ಸಾಮಾನ್ಯ (ಮಾಜಿ ಸೈನಿಕ), ಕೋಗಲೂರು- ಪ.ಪಂಗಡ, ರಾಜಗೊಂಡನಹಳ್ಳಿ-ಪ್ರವರ್ಗ-1. ನ್ಯಾಮತಿ ತಾಲ್ಲೂಕಿನ ಒಡೆಯರಹೊತ್ತೂರು ಗ್ರಾ.ಪಂ. ಗ್ರಂಥಾಲಯ- ಸಾಮಾನ್ಯ (ಗ್ರಾಮೀಣ ಅಭ್ಯರ್ಥಿ) ಮೀಸಲಾತಿ ಇದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌. ಎಸ್. ಎಲ್‌. ಸಿ. ಉತ್ತೀರ್ಣವಾಗಿರಬೇಕು. ಅಲ್ಲದೇ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದವರಾಗಿರಬೇಕು, ಈ ಕುರಿತು ತಹಸಿಲ್ದಾರರಿಂದ ಪಡೆದ ರಹವಾಸಿ ಪ್ರಮಾಣಪತ್ರ ಹಾಗೂ ಸ್ಥಳೀಯ ಮತದಾರರ ಪಟ್ಟಿಯ ಭಾಗದ ಪ್ರತಿ ಸಲ್ಲಿಸಬೇಕು.

ನಿಗದಿಪಡಿಸಿದ ಮೀಸಲಾತಿಗೆ ಅನುಗುಣವಾಗಿ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ವಯಸ್ಕರ ಶಿಕ್ಷಣದಡಿ ಮುಂದುವರಿಕಾ ಕಲಿಕಾ ಕೇಂದ್ರಗಳ ಪ್ರೇರಕ, ಉಪಪ್ರೇರಕ ಅಥವಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಸೇವಾ ಪ್ರಮಾಣಪತ್ರ ಸಲ್ಲಿಸಿದಲ್ಲಿ ಆದ್ಯತೆ ನೀಡಲಾಗುವುದು ಅಲ್ಲದೆ ಗ್ರಂಥಾಲಯ ವಿಜ್ಞಾನ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು.

ಸೇವಾ ಪ್ರಮಾಣ ಪತ್ರ ಅಥವಾ ಗ್ರಂಥಾಲಯ ವಿಜ್ಞಾನ ತರಬೇತಿ ಪಡೆಯದ ಅಭ್ಯರ್ಥಿಗಳು ಇಲ್ಲದಿದ್ದಲ್ಲಿ ಎಸ್. ಎಸ್. ಎಲ್‌. ಸಿ. ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ನಿಗದಿತ ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಪಿಡಿಒಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಂಕಪಟ್ಟಿ, ಮೀಸಲಾತಿ ಪ್ರಮಾಣ ಪತ್ರ, ರಹವಾಸಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆ ಲಗತ್ತಿಸಿ, ಆಯಾ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಅಥವಾ ಪಿಡಿಒಗೆ ನವೆಂಬರ್ 11 ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಎಸ್‍ಬಿಎಂ ಕಟ್ಟಡ, ನಿಟ್ಟುವಳ್ಳಿ ಹೊಸ ಬಡಾವಣೆ, ದಾವಣಗೆರೆ ಇವರನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+