ಶಿವಮೊಗ್ಗದಲ್ಲಿ ಮಾರ್ಚ್ 20ರಂದು ನೇರ ಸಂದರ್ಶನ
ಶಿವಮೊಗ್ಗದಲ್ಲಿ ಎಪಿಡಮಾಲಜಿಸ್ಟ್ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶಿವಮೊಗ್ಗ, ಮಾರ್ಚ್ 17; ಸಮಗ್ರ ರೋಗಗಳ ಕಣ್ಗಾವಲು ಕಾರ್ಯಕ್ರಮ (ಐಡಿಎಸ್‌ಪಿ) ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಪಿಡಮಾಲಜಿಸ್ಟ್ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಮಾರ್ಚ್ 20ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಐಡಿಎಸ್‌ಪಿ ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ 45 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಮಾರ್ಚ್ 20ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30ರ ತನಕ ನೇರ ಸಂದರ್ಶನ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಆವರಣ, ಶಿವಮೊಗ್ಗ ಇಲ್ಲಿ ನಡೆಯಲಿದೆ.

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಮೆಡಿಕಲ್ ಗ್ರಾಜುಯೇಟ್ ಜೊತೆಗೆ ಪೋಸ್ಟ್ ಗ್ರಾಜುಯೇಟ್ ಡಿಗ್ರಿ/ ಡಿಪ್ಲೊಮಾ ಇನ್ ಪ್ರಿವೆಂಟೀವ್ ಆಂಡ್ ಸೋಷಿಯಲ್ ಮೆಡಿಸಿನ್/ ಪಬ್ಲಿಕ್ ಹೆಲ್ತ್ ಅಥವಾ ಎಪಿಡಮಾಲಜಿ (ಎಂ.ಡಿ., ಎಂ.ಪಿ.ಹೆಚ್., ಡಿ.ಪಿ.ಹೆಚ್, ಎಂ,ಎ.ಇ) ಅಥವಾ ಯಾವುದೇ ಮೆಡಿಕಲ್ ಗ್ರಾಜುಯೇಟ್ಸ್ ಪದವಿ ಪಡೆದಿರಬೇಕು. 1 ವರ್ಷದ ಪಬ್ಲಿಕ್ ಹೆಲ್ತ್ ಅಥವಾ ಎಂ.ಎಸ್.ಸಿ ಲೈಫ್ ಸೈನ್ಸ್ ಜೊತೆಗೆ 2 ವರ್ಷದ ಪಬ್ಲಿಕ್ ಹೆಲ್ತ್ ಅನುಭವ ಅಥವಾ ಎಂ.ಎಸ್.ಸಿ. (ಎಪಿಡಮಾಲಜಿ) ಜೊತೆಗೆ 2 ವರ್ಷದ ಪಬ್ಲಿಕ್ ಹೆಲ್ತ್ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾ ಘಟಕದ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-275356 ಅನ್ನು ಸಂಪರ್ಕಿಸಬಹುದು.
ಅಪ್ರೆಂಟಿಸ್ ಮೇಳ; ಧಾರವಾಡ ಜಿಲ್ಲೆಯ ಸರ್ಕಾರಿ, ಅನುದಾನಿತ, ಖಾಸಗಿ ಸಂಸ್ಥೆಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಪ್ರಶಿಕ್ಷಣಾರ್ಥಿಗಳ (ಅಪ್ರೆಂಟಿಸ್) ಮೇಳವು ಮಾರ್ಚ್ 20ರ ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನರೇಂದ್ರ, ಮುಮ್ಮಿಗಟ್ಟಿ ಹೌಸಿಂಗ್ ಲೇಔಟ್, ಪಿ. ಬಿ. ರಸ್ತೆ, ಪವರಗ್ರಿಡ್ ಎದುರು ಧಾರವಾಡ ಇಲ್ಲಿ ನಡೆಯಲಿದೆ.
ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು ಐಟಿಐ ಪಾಸಾದ ಆಸಕ್ತ ತರಬೇತಿದಾರರು ತಮ್ಮ ಹೆಸರನ್ನು ಪೋರ್ಟಲ್‍ನಲ್ಲಿ ನೋಂದಾಯಿಸಿ ತಮ್ಮ ಪ್ರೊಫೈಲ್ ಅಪ್‍ಡೇಟ್ ಮಾಡಿಕೊಂಡು ಅಗತ್ಯ ದಾಖಲೆ, ಮಾಹಿತಿಗಳೊಂದಿಗೆ ಅಪ್ರೆಂಟಿಸ್ ಮೇಳದಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತರಬೇತಿ ಅಧಿಕಾರಿ ಸಹಾಯಕ ಶಿಶಿಕ್ಷು ಸಲಹೆಗಾರರು ಜಾಕೀರ ಹುಸೇನ ಗದ್ಯಾಳ-9916561510 ಹಾಗೂ ಪ್ಲೇಸಮೆಂಟ್ ಅಧಿಕಾರಿ ಸುರೇಶಕುಮಾರ 9902609360 ಸಂಪರ್ಕಿಸಬಹುದು ಎಂದು ಧಾರವಾಡ ಜಿಲ್ಲಾ ಶಿಶಿಕ್ಷು ಮೇಳದ ನೋಡಲ್ ಅಧಿಕಾರಿಗಳು ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರವೀಂದ್ರ ದ್ಯಾಬೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications