ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Twitter lays off : ಟ್ವಿಟರ್‌ನಿಂದ ಮತ್ತೆ 4,400 ನೌಕರರ ವಜಾ

|
Google Oneindia Kannada News

ನವದೆಹಲಿ, ನವೆಂಬರ್‌ 14: ಷೇರುಗಳ ಕುಸಿತ, ಆರ್ಥಿಕ ಹೊಡೆತ ಕಾರಣದಿಂದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್‌ ಸುಮಾರು 50 ಪ್ರತಿಶತದಷ್ಟು ಅಂದರೆ ಸುಮಾರು 3,800 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೊಮ್ಮೆ ಬರೋಬ್ಬರಿ 4,400 ಗುತ್ತಿಗೆ ನೌಕರರನ್ನು ವಜಾಗೊಳಿಸಲಾಗಿದೆ ಎಂಬ ವರದಿ ಬಂದಿದೆ.

ಪ್ಲಾಟ್‌ಫಾರ್ಮರ್ ಮತ್ತು ಆಕ್ಸಿಯೋಸ್‌ನ ವರದಿಗಳ ಪ್ರಕಾರ, ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಟ್ವಿಟ್ಟರ್‌ ಈಗ ಗುತ್ತಿಗೆಯಲ್ಲಿರುವ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎನ್ನಲಾಗಿದೆ. ಗುತ್ತಿಗೆ ನೌಕರರಿಗೆ ಯಾವುದೇ ಸೂಚನೆ ನೀಡಲಾಗುತ್ತಿಲ್ಲ. ಅವರು ಕೇವಲ ಸ್ಲಾಕ್ ಮತ್ತು ಇಮೇಲ್‌ಗಳ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಕೆಲಸಗಾರರು ಸಿಸ್ಟಮ್‌ನಿಂದ ಕಣ್ಮರೆಯಾಗುತ್ತಿದ್ದು, ನಿರ್ವಾಹಣೆ ಮಾಡುವವರು ಕೆಲಸ ಅಂತ್ಯವಾಗುವುದನ್ನು ಪತ್ತೆ ಮಾಡಿದ್ದಾರೆ ಎಂದು ಕೇಸಿ ನ್ಯೂಟನ್ ಟ್ವೀಟ್ ಮಾಡಿದ್ದಾರೆ.

ಉದ್ಯೋಗಿಗಳ ವಜಾ: ಎಲಾನ್ ಮಸ್ಕ್‌ ಹಾದಿಯಲ್ಲಿ ಮಾರ್ಕ್ ಜುಕರ್‌ಬರ್ಗ್ಉದ್ಯೋಗಿಗಳ ವಜಾ: ಎಲಾನ್ ಮಸ್ಕ್‌ ಹಾದಿಯಲ್ಲಿ ಮಾರ್ಕ್ ಜುಕರ್‌ಬರ್ಗ್

ಅವರು ತಮ್ಮ ತಂಡದ ನಾಯಕರಿಂದ ಯಾವುದೇ ಸೂಚನೆಯನ್ನು ಪಡೆಯುತ್ತಿಲ್ಲ ಎಂದು ಅವರು ಪೋಸ್ಟ್ ಮಾಡಿದ್ದಾರೆ. ವಾರಾಂತ್ಯದಲ್ಲಿ ಪ್ರಾರಂಭವಾದ ಹೊಸ ವಜಾ ಪ್ರಕಿಯೆಗಳ ಬಗ್ಗೆ ಮಸ್ಕ್ ಅಥವಾ ಟ್ವಿಟ್ಟರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಟ್ವಿಟ್ಟರ್‌ನ ಆಂತರಿಕ ವ್ಯವಸ್ಥೆಗಳ ಕೆಲಸಗಳಿಗೆ ಮುಂದಾದಾಗ ಥಟ್ಟನೆ ಕೆಲಸ ಮಾಡಲು ಆಗಲಿಲ್ಲ. ಹೀಗಾಗಿ ಅವರು ಇನ್ನು ಮುಂದೆ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹಲವರು ಭಾವಿಸಿದರು.

Twitter lays off 4,400 contract employees

ಟ್ವಿಟ್ಟರ್ ಈ ಹಿಂದೆ ಯಾವುದೇ ಸೂಚನೆ ನೀಡದೆ ಹೀಗೆ ಉದ್ಯೋಗಿಗಳ ವಜಾ ಮಾಡಲು ಮುಂದಾಗುತ್ತಿರುವುದು ಕಂಪೆನಿ ನೌಕರರಲ್ಲಿ ಆತಂಕ ಹೆಚ್ಚಿದಸಿದೆ. ಈ ಬಗ್ಗೆ ತಂಡದ ನಾಯಕರು ಈ ಬಗ್ಗೆ ಯಾವುದೇ ನೌಕರರಿಗೆ ಏನನ್ನೂ ಸೂಚಿಸುತ್ತಿಲ್ಲ. 44 ಬಿಲಿಯನ್‌ ಡಾಲರ್‌ಗೆ ಟ್ವಿಟ್ಟರ್‌ ಕಂಪೆನಿಯನ್ನು ಸ್ವಾಧೀನ ಪಡಿಸಿಕೊಂಡ ನಂತರ ಎಲಾನ್‌ ಮಸ್ಕ್‌ ಭಾರೀ ಉದ್ಯೋಗಿ ಕಡಿತವನ್ನು ಮಾಡುತ್ತಿದ್ದಾರೆ.

Twitter lays off 4,400 contract employees

ನಮ್ಮ ಗುತ್ತಿಗೆದಾರರೊಬ್ಬರು ಸೂಚನೆಯಿಲ್ಲದೆ ನಮ್ಮ ಕೆಲಸವನ್ನು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಕಂಪನಿಯ ಆಂತರಿಕ ಸ್ಲಾಕ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಒಬ್ಬ ಮ್ಯಾನೇಜರ್ ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರ್ ಹಿಂದೆ ಅನೇಕ ಗುತ್ತಿಗೆದಾರರು ಪೂರ್ಣ ಸಮಯದ ಸಿಬ್ಬಂದಿಗಳನ್ನು ತಂಡಗಳಲ್ಲಿ ಕೊನೆಗೊಳಿಸಲಾಯಿತು. ಅವರ ತಾಣದಲ್ಲಿ ಕೆಲಸಕ್ಕೆ ಸೈನ್ ಇನ್‌ ಮಾಡಲು ಯಾರನ್ನೂ ಬಿಡಲಿಲ್ಲ ಎಂದು ಹೇಳಲಾಗಿದೆ.

English summary
After Twitter laid off nearly 50 percent of its workforce, due to falling stocks and financial woes, it has been reported that 4,400 contract workers have been laid off again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X