ತಡವಾಗಿ ಬಂದಿದ್ದಕ್ಕೆ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಯನ್ನು ವಜಾಮಾಡಿದ ಸಂಸ್ಥೆ!
ಕೆಲವು ಕಂಪನಿಗಳೇ ಹಾಗೇ, ಉದ್ಯೋಗಿ ಎಷ್ಟು ಪ್ರತಿಭಾವಂತ ಎನ್ನುವದರ ಜೊತೆಗೆ ಆತನ ಶಿಸ್ತು ಕೂಡ ಕಂಪನಿಗಳಿಗೆ ಮುಖ್ಯವಾಗಿರುತ್ತದೆ. ಕೆಲಸ ಮಾಡಲು ತಡವಾಗಿ ಬರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದನ್ನು ಕೆಲವು ಕಂಪನಿಗಳಲ್ಲಿ ನೋಡಬಹುದಾಗಿದೆ. ಆದರೆ ಇಲ್ಲೊಂದು ಸಂಸ್ಥೆ ತಡವಾಗಿ ಬಂದ ಉದ್ಯೋಗಿಯನ್ನು ಕೆಲಸದಿಂದಲೇ ವಜಾ ಮಾಡಿದೆ.
ರೆಡ್ಡಿಟ್‌ನಲ್ಲಿ ಈ ಕುರಿತು ಹಂಚಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ. ಕಳೆದ ಏಳು ವರ್ಷಗಳಿಂದ ಆತ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆತನ ಏಳು ವರ್ಷದ ಸೇವಾವಧಿಯಲ್ಲಿ ಒಮ್ಮೆಯೂ ತಡವಾಗಿ ಬಂದಿರಲಿಲ್ಲ ಎನ್ನಲಾಗಿದೆ. ಆದರೆ ಮೊದಲ ಬಾರಿಗೆ 20 ನಿಮಿಷ ತಡವಾಗಿ ಬಂದಿದ್ದಕ್ಕೆ ಕೆಲಸವನ್ನೇ ಕಳೆದುಕೊಂಡಿದ್ದಾನೆ.
ಈ ಘಟನೆಯನ್ನು ರೆಡ್ಡಿಟ್‌ನಲ್ಲಿ ಅವರ ಸಹೋದ್ಯೋಗಿಯೊಬ್ಬರು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, "7 ವರ್ಷಗಳಲ್ಲಿ ಎಂದಿಗೂ ತಡವಾಗದ ಸಹೋದ್ಯೋಗಿ, ಮೊದಲ ಬಾರಿಗೆ ತಡವಾಗಿ ಬಂದಿದ್ದಕ್ಕೆ ವಜಾಗೊಳಿಸಲಾಗಿದೆ" ಎಂದು ಹೇಳಿದ್ದಾರೆ.

ಏಳು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಒಂದು ದಿನ ತಡವಾಗಿ ಬಂದಿದ್ದಕ್ಕೆ ಉದ್ಯೋಗಿಯನ್ನು ವಜಾಗೊಳಿಸಿದ ಕಂಪವಿ ವಿರುದ್ಧ ನೌಕರರು ತಿರುಗಿಬಿದ್ದಿದ್ದಾರೆ.
ಪ್ರತಿಭಟನೆ ಮಾಡಲು ಮುಂದಾದ ಉದ್ಯೋಗಿಗಳು
ನೌಕರನನ್ನು ವಜಾಗೊಳಿಸಿದ ಕಂಪನಿಯ ನಿರ್ಧಾರವನ್ನು ವಿರೋಧಿಸಿರುವ ಸಹೋದ್ಯೋಗಿಗಳು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ವಜಾಗೊಳಿಸಿದ ನೌಕರನನ್ನು ಮರು ನೇಮಕ ಮಾಡಿಕೊಳ್ಳುವವರೆಗೆ ಎಲ್ಲಾ ಉದ್ಯೋಗಿಗಳು ಕಚೇರಿಗೆ ತಡವಾಗಿ ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಂಪನಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ.
"ನಾಳೆ, ನಾನು ಮತ್ತು ನನ್ನ ಎಲ್ಲಾ ಸಹೋದ್ಯೋಗಿಗಳು ತಡವಾಗಿ ಬರುತ್ತೇವೆ ಮತ್ತು ಅವರು ಅವನನ್ನು ಪುನಃ ನೇಮಿಸಿಕೊಳ್ಳುವವರೆಗೆ ತಡವಾಗಿ ಬರುತ್ತೇವೆ" ಎಂದು ಸಹೋದ್ಯೋಗಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಮ್ಯಾನೇಜರ್
ಅದರಂತೆ ಮರುದಿನ ಎಲ್ಲಾ ಉದ್ಯೋಗಿಗಳು ತಡವಾಗಿ ಬಂದಿದ್ದಾರೆ. "ನಾನು 22 ನಿಮಿಷ ತಡವಾಗಿ ಬಂದೆ ನಮ್ಮ ಮ್ಯಾನೇಜರ್ ಸಿಟ್ಟುಗೊಂಡಿದ್ದರು. ಎಲ್ಲರೂ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೀರಾ, ಅಥವಾ ಯಾವುದಾದರೂ ಕೆಲಸದಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರು" ಎಂದು ಬರೆದುಕೊಂಡಿದ್ದಾರೆ.
ಸಹೋದ್ಯೋಗಿಗಳ ಪ್ರತಿಭಟನೆಗೆ ಮಣಿದಿರುವ ಮ್ಯಾನೇಜರ್ ಕೆಲಸದಿಂದ ತೆಗೆದುಹಾಕಿದ ಉದ್ಯೋಗಿಯನ್ನು ವಾಪಸ್ ಕೆಲಸಕ್ಕೆ ಕರೆತರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಕೆಲಸಕ್ಕೆ ಹಾಜರಾಗುವಂತೆ ಮ್ಯಾನೇಜರ್ ಉದ್ಯೋಗಿಯನ್ನು ಸಂಪರ್ಕಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ಆ ಕಂಪನಿ ಯಾವುದು, ಘಟನೆ ಎಲ್ಲಿ ನಡೆದಿದೆ ಎನ್ನುವುದು ತಿಳಿದುಬಂದಿಲ್ಲ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications