ಟೆಕ್‌ ಮಹೀಂದ್ರಾದಿಂದ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು, ಏಪ್ರಿಲ್‌, 26: ಇದೀಗ ದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಇದರ ನಡುವೆಯೇ ಇದೀಗ ಟೆಕ್‌ ಮಹೀಂದ್ರಾ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಮಾಹಿತಿ ಇಲ್ಲಿ ತಿಳಿಯಿರಿ.

ಐಟಿ ಸೇವೆಗಳ ದೈತ್ಯ ಟೆಕ್ ಮಹೀಂದ್ರಾ 2023-24ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ 40.9% ಕುಸಿತವನ್ನು ವರದಿ ಮಾಡಿದೆ. ಇನ್ನು ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು 661 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಪಡೆದಿದೆ.

Tech Mahindra Good news for job seekers

ಆದರೂ, ವ್ಯಾಪಕ ಉದ್ಯಮದ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು, ಪುಣೆ ಪ್ರಧಾನ ಕಚೇರಿ ಹೊಂದಿರುವ ಟೆಕ್ ಮೇಜರ್ ಪ್ರಸಕ್ತ ಹಣಕಾಸು ವರ್ಷದಲ್ಲಿ 6,000 ಫ್ರೆಶರ್‌ಗಳನ್ನು ನೇಮಕ ಮಾಡಲು ಕ್ಯಾಂಪಸ್‌ಗಳಿಗೆ ಹೋಗುವುದಾಗಿ ಘೋಷಣೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾಹಿತಿ ಪ್ರಕಾರ "ನಾವು ಪ್ರತಿ ತ್ರೈಮಾಸಿಕದಲ್ಲಿ 1,500ಕ್ಕೂ ಹೆಚ್ಚು ಹೊಸ ಪದವೀಧರರನ್ನು ಸೆಳೆಯುವಲ್ಲಿ ಮುಂದುವರೆಯುತ್ತಿದ್ದೇವೆ" ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಮೋಹಿತ್ ಜೋಶಿ ಹೇಳಿದರು. ಅಲ್ಲದೆ, ಇದು ವರ್ಷದಲ್ಲಿ 50,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೃತಕ ಬುದ್ಧಿಮತ್ತೆಯ ಬಗ್ಗೆ ತರಬೇತಿ ನೀಡಲಿದೆ ಎಂದು ಹೇಳಿದರು.

ಟೆಕ್ ಮಹೀಂದ್ರಾ ರಚನಾತ್ಮಕ ಬೆಳವಣಿಗೆ, ಕಾರ್ಯಾಚರಣೆ ಮತ್ತು ಸಾಂಸ್ಥಿಕ ಬದಲಾವಣೆಗಳನ್ನು ಒಳಗೊಂಡ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರೂಪಿಸಿದೆ. ಇದು 2026-27ರ ಆರ್ಥಿಕ ವರ್ಷದ ವೇಳೆಗೆ ಕಂಪನಿಯು ತನ್ನ ಸಹವರ್ತಿಗಳ ಸರಾಸರಿ ಟಾಪ್‌ಲೈನ್ ಬೆಳವಣಿಗೆಯನ್ನು ಹೆಚ್ಚಿದಲು ಸಹಾಯ ಮಾಡುತ್ತದೆ.

ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಆದಾಯವು ಶೇಕಡಾ 6.2ರಷ್ಟು ವಾರ್ಷಿಕ ಕುಸಿತವನ್ನು ದಾಖಲಿಸಿ 12,871 ಕೋಟಿ ರೂಪಾಯಿಗೆ ತಲುಪಿದೆ. ತ್ರೈಮಾಸಿಕದಲ್ಲಿ ನಿವ್ವಳ ಹೊಸ ಒಪ್ಪಂದದ ಗೆಲುವುಗಳು $500 ಮಿಲಿಯನ್ ಆಗಿವೆ. ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ಶೇಕಡಾ 51.2ರಷ್ಟು ಕುಸಿದಿದ್ದು, 4,965 ಕೋಟಿ ರೂಪಾಯಿಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+