TCS Layoffs: ಟಿಸಿಎಸ್‌ನಿಂದ ಬೃಹತ್ ಉದ್ಯೋಗ ವಜಾ: 12,000 ನೌಕರರು ಮನೆಗೆ..
ಬೆಂಗಳೂರು, ಜುಲೈ 28: ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ದೈತ್ಯ ಸಂಸ್ಥೆಯಾಗಿರುವ 'ಟಾಟಾ ಕನ್ಸಲ್ಟೆನ್ಸ್ ಸರ್ವಿಸಸ್ (TCS) ತನ್ನ ಕಾರ್ಯ ಚಟುವಟಿಕೆಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence -AI) ಅಳವಡಿಕೆ ಮಾಡುತ್ತಿದೆ. ಇದರಿಂದ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಿದೆ. ಇದು ಸಾಕಷ್ಟು ಹಿರಿಯ, ಅನುಭವ ನೌಕರರ ಮೇಲೆ ಪರಿಣಾಮ ಬೀರಲಿದೆ. ಇದುವರೆಗೆ ಟಿಸಿಎಸ್ ಕಂಪನಿಯಲ್ಲಿ ಬೃಹತ್ ಉದ್ಯೋಗ ವಜಾ ಇದಾಗಿದೆ.
ಹೌದು, ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಕಳೆದುಕೊಳ್ಳುತ್ತೇವೆ ಎಂಬ ಮಾತಿದೆ. ಅದಕ್ಕೆ ಪುಷ್ಠಿ ನೀಡುವಂತಹ ಬೆಳವಣಿಗೆ ಐಟಿ ವಲಯದಲ್ಲಿ ನಡೆಯುತ್ತಲೇ ಇದೆ. ಅನೇಕ ಕಂಪನಿಗಳು 2025ರ ಆರಂಭದಿಂದಲೂ ಉದ್ಯೋಗ ವಜಾ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಐಟಿ ದೈತ್ಯ ಕಂಪನಿ 'ಟಾಟಾ ಕನ್ಸಲ್ಟೆನ್ಸ್ ಸರ್ವಿಸಸ್ (TCS)' 12,000 ಉದ್ಯೋಗಿಗಳ ವಜಾಗೊಳಿಸಲು ನಿರ್ಧರಿಸಿದೆ. ಇದು ಒಟ್ಟು ನೌಕರರ ಶೇಕಡಾ 2ರಷ್ಟು ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಸಕ್ತ 2025ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಟಾಟಾ ಸಮೂಹದ ಈ ಅಂಗಸಂಸ್ಥೆಯು ಬರೋಬ್ಬರಿ 613,069 ಉದ್ಯೋಗಿಗಳ ಗುಂಪನ್ನು ಹೊಂದಿತ್ತು. ಈ ಕಂಪನಿ ಸೇರಿದಂತೆ ಜಾಗತಿಕವಾಗಿ ಉದ್ಯೋಗಿಗಳ ವಜಾಗಳು 80,000 ದಾಟಿದೆ ಎಂದು ಜಾಗತಿಕ ತಂತ್ರಜ್ಞಾನ ವಲಯದ ಉದ್ಯೋಗಿಗಳ ವಜಾ ಮೇಲ್ವಿಚಾರಣೆ ಮಾಡುವ Layoffs.fyi ತನ್ನ ದತ್ತಾಂಶದಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
2025 ರಲ್ಲಿ ಬರೋಬ್ಬರಿ ಆರು ತಿಂಗಳು ಕಳೆದಿದ್ದೇವೆ. ಈವರೆಗೆ ಐಟಿ ಸೇರಿದಂತೆ ವಿವಿಧ 169 ಕಂಪನಿಗಳಲ್ಲಿ 80,000 ಕ್ಕೂ ಹೆಚ್ಚು ತಂತ್ರಜ್ಞಾನ ವೃತ್ತಿಪರರು ಕೆಲಸದಿಂದ ಮನೆಗೆ ನಡೆದಿದ್ದಾರೆ. ಉದ್ಯೋಗ ಕಳೆದುಕೊಂಡು ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡ ಸಹ ಎದುರಿಸಿದ್ದಾರೆ ಎಂದು PTI ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಪಂಚ ಎರಡನೇ ಮೌಲ್ಯಯುತ ಕಂಪನಿಗಳಲ್ಲಿ ಮೈಕ್ರೋಸಾಫ್ಟ್ ಸಹ ಒಂದು. ಮೈಕ್ರೋಸಾಫ್ಟ್ ಸದರಿ 2025 ರಲ್ಲಿ 15,000 ಕ್ಕೂ ಹೆಚ್ಚು ಕೆಲಸಗಾರರನ್ನು ಮನೆಗೆ ಕಳುಹಿಸಿದೆ. ಇದು ಒಂದು ಕಂಪನಿ, ಶಾಖೆ ದೇಶಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಮೈಕ್ರೋಸಾಫ್ಟ್ ನ ವಿಶ್ವಾದ್ಯಂತ 7ರಷ್ಟು ಉದ್ಯೋಗಿಗಳ ಮೇಲೆ ವಜಾ ನಿರ್ಧಾರ ಪರಿಣಾಮ ಬೀರಿದೆ.
1,50,000 ನೌಕರರಿಗೆ ಉದ್ಯೊಗ ನಷ್ಟ
ಕಳೆದ ವರ್ಷದ ಮಾಹಿತಿ ನೋಡುವುದಾದರೆ, 551 ತಂತ್ರಜ್ಞಾನ ಸಂಸ್ಥೆಗಳಿಂದ 2024 ರಲ್ಲಿ ಸುಮಾರು 1,50,000 ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ಬೃಹತ್ ಉದ್ಯೋಗಿಗಳ ಸಮೂಹದ ಮೇಲೆ ಪ್ರಭಾವ ಬೀರಿದೆ. ಎಲ್ಲ ಕಂಪನಿಗಳು ಎಐ ಗೆ ಬದಲಾಗುವುದು, ಕಾರ್ಯಪಡೆ ಪುನರ್‌ರಚನೆಯ ಕಾರಣ ನೀಡಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದರೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ತಾಂತ್ರಿಕ, ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಎಷ್ಟೆಲ್ಲ ಪ್ರಭಾವ ಉಂಟು ಮಾಡಿದೆ ಎಂಬುದು ಚರ್ಚೆ ಆಗುತ್ತಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications