ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್‌ಎಸ್ಸಿ) 2016-17ನೇ ಸಾಲಿನ ವಿವಿಧ ಇಲಾಖೆ, ಕಚೇರಿ ಹಾಗೂ ಸಚಿವಾಲಯಗಳಲ್ಲಿ ಅಗತ್ಯವಿರುವ ತಾಂತ್ರಿಕೇತರ(Non- Technical) ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ.

ಸರಿ ಸುಮಾರು 8300ಕ್ಕೂ ಅಧಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಪರೀಕ್ಷಾ ಪ್ರಕ್ರಿಯೆ ಮೂಲಕ SSC ಆಯ್ಕೆ ಮಾಡಲಿದೆ. ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು.10+2 ಓದಿದ್ದರೆ ಸಾಕು, ಅರ್ಜಿ ಸಲ್ಲಿಸಲು ಜನವರಿ 30, 2017 ಕೊನೆ ದಿನಾಂಕವಾಗಿದೆ.

ಹುದ್ದೆಗಳ ವಿವರ :

ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್(ಕೇಂದ್ರ ಸರ್ಕಾರಿ ಹುದ್ದೆ)

ವಿದ್ಯಾರ್ಹತೆ: 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರೈಸಿರಬೇಕು.
ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 27(01-08-2017 ರಂತೆ) ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ಸಡಿಲಿಕೆಯಿದೆ.

ಅರ್ಜಿ ಶುಲ್ಕ: 100 ರು. ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್/ಚಲನ್/ ಡೆಬಿಟ್
ಮುಖ್ಯ ದಿನಾಂಕಗಳು:
ಆನ್ ಲೈನ್ ಅರ್ಜಿ ಕೊನೆ ದಿನಾಂಕ : 30-01-2017 ಸಂಜೆ 5.
ಪರೀಕ್ಷೆ ದಿನಾಂಕ : 30-04-2017 & 07-05-2017 (ಇನ್ನೂ ಅಧಿಕೃತ ಪ್ರಕಟಣೆ ಸಿಕ್ಕಿಲ್ಲ)

ಹೆಚ್ಚಿನ ಮಾಹಿತಿಗಾಗಿ ಪಿಡಿಎಫ್ ಡೌನ್ ಲೋಡ್ ಮಾಡಿ ನೋಡಿ

ವಿವಿಧ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು, ಇನ್ನಿತರ ವಿವರಗಳನ್ನು ಈ ಲಿಂಕ್ ಮೂಲಕ ಪಡೆಯಿರಿ ಕ್ಲಿಕ್ ಮಾಡಿ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Staff Selection Commission (SSC) has published notification to conduct Multi Tasking (Non-Technical) Staff Exam 2016 for the recruitment of 8300 Multi Tasking (Non Technical) Staff vacancies in Different States and Union Territories 2016.
Please Wait while comments are loading...