Govt Job Alert 2026: ಎಸ್‌ಎಸ್‌ಸಿ ಜಿಡಿ 25,487 ಹುದ್ದೆಗಳ ನೇಮಕಾತಿ, SSLC ಪಾಸಾದವರಿಗೂ ಅವಕಾಶ

Govt Recruitment 2026: ಸರ್ಕಾರಿ ಉದ್ಯೋಗ ಪಡೆಯಲು ಮಹದಾಸೆ ಹೊಂದಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಕರ್ನಾಟಕ ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಖಾಲಿ ಇರುವ ಒಟ್ಟು 25,487 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ 2026 ಜನವರಿ 01 ಕೊನೆಯ ದಿನವಾಗಿದೆ.

ಎಸ್‌ಎಸ್‌ಎಲ್‌ಸಿ ಪಾಸಾದವರು ಸಹ ಈ ಹುದ್ದೆಗಳಿಗೆ ಸೇರಿ ಕೈ ತುಂಬ ಸಂಪಾದನೆ ಮಾಡಬಹುದಾಗಿದೆ. ಏಳನೇ ವೇತನ ಆಯೋಗದ ಮೂರನೇ ಹಂತದ ವೇತನ ಶ್ರೇಣಿ ಈ ಹುದ್ದೆಗಳಿಗೆ ನಿಗದಿಪಡಿಸಲಾಗಿದೆ. ವಿದ್ಯಾರ್ಹತೆ, ಮಾಸಿಕ ವೇತನ, ಆಯ್ಕೆ ಇತರ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ.

SSC GD Constable Recruitment 2026 Application Invited for 25 487 Vacancies in CAPFs

ಹುದ್ದೆಗಳ ಇತರ ವಿವರ

ಬಿಎಸ್‌ಎಫ್ : 524 (ಪುರುಷ ಹುದ್ದೆ), 92 (ಮಹಿಳೆ ಹುದ್ದೆ)

ಸಿಐಎಸ್‌ಎಫ್ : 13,135 (ಪುರುಷ), 627 (ಮಹಿಳೆ)

ಸಿಆರ್‌ಪಿಎಫ್: 5366 (ಪುರುಷ), 5490 (ಮಹಿಳೆ)

ಎಸ್‌ಎಸ್‌ಬಿ : 1764 (ಪುರುಷ), 00 (ಮಹಿಳೆ)

ಐಟಿಬಿಪಿ: 1099 (ಪುರುಷ), 194 (ಮಹಿಳೆ)

ಅಸ್ಸಾಂ ರೈಫಲ್ಸ್ (ಎಂಆರ್‌) : 1556 (ಪುರುಷ), 150 (ಮಹಿಳೆ)

ವಿಶೇಷ ಭದ್ರತಾ ಪಡೆ (ಎಸ್‌ಎಸ್‌ಎಫ್) : 23,00 (ಪುರುಷ), 00 (ಮಹಿಳೆ)

ಲಿಂಗವಾರು ಹುದ್ದೆಗಳು : 23,467 (ಪುರುಷ), 2020 (ಮಹಿಳೆ)

ಒಟ್ಟು ಹುದ್ದೆಗಳು 25,487

ವಿದ್ಯಾರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗಿರಬೇಕು.

ಲಿಖಿತ ಪರೀಕ್ಷೆ ಮೂಲಕ ಆಯ್ಕೆ

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಕೈಗೊಳ್ಳಲಾಗುತ್ತದೆ. ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲೂ ಲಿಖಿತ ಪರೀಕ್ಷೆ ಬರೆಯಲು ಅವಕಾಶ ಇದೆ. ಅಲ್ಲಿ ಆಯ್ಕೆ ಆದವರು ಮುಂದಿನ ಹಂತಕ್ಕೆ ತಲುಪುತ್ತಾರೆ.

ಮಾಸಿಕ ವೇತನ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಳಿಕ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕ 21,700 ರೂಪಾಯಿಯಿಂದ 69,100 ರೂಪಾಯಿ ಸಿಗಲಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಎಸ್‌ಎಸ್‌ಸಿ ಪೋರ್ಟ್‌ಲ್‌ನಲ್ಲಿ ಒಂದು ಬಾರಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆನ್‌ಲೈನ್ (https://ssc.gov.in/) ಮೂಲಕವೇ ಅರ್ಜಿ ಭರ್ತಿ ಮಾಡಬೇಕು. ಆಧಾರ್ ಸಂಖ್ಯೆ ಬಳಸಿ ಅರ್ಜಿ ಸಲ್ಲಿಸಿದಲ್ಲಿ ಫೋಟೋ ಕಾರಣಕ್ಕೆ ಅರ್ಜಿ ತಿರಸ್ಕೃತಗೊಳ್ಳುವ ಹಾಗು ಪರೀಕ್ಷಾ ಕೇಂದ್ರಕ್ಕೆ ಭಾವಚಿತ್ರದ ಗುರುತಿನ ಚೀಟಿ ಹಾಜರುಪಡಿಸುವ ಅಗತ್ಯವಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಮಾಹಿತಿ

ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಶಿವಮೊಗ್ಗ ಮತ್ತು ಉಡುಪಿ ಕೇಂದ್ರಗಳಲ್ಲಿ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಗಳು ನಡೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+