355 ಎಸ್ ಎಸ್ ಬಿ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 12 : ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದಡಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ(ಎಸ್ಎಸ್ಬಿ)ದಲ್ಲಿ ಅವಶ್ಯವಿರುವ 355 ಕಾನ್ಸ್ಟೆಬಲ್ (ಜಿಡಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ದಿನಾಂಕ 05/06/2017 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.[ಎಚ್ಎಎಲ್ ನಲ್ಲಿ 500ಕ್ಕೂ ಅಧಿಕ ಹುದ್ದೆಗಳಿವೆ ಈಗಲೇ ಅರ್ಜಿ ಹಾಕಿ!]

ಹುದ್ದೆ: ಕಾನ್ಸ್ಟೆಬಲ್ (ಜಿಡಿ)
ಒಟ್ಟು ಹುದ್ದೆ: 355
ಸಂಸ್ಥೆ: ಸಶಸ್ತ್ರ ಸೀಮಾ ಬಲ ಹುದ್ದೆಯ
ಸ್ಥಳ: ಭಾರತದಾದ್ಯಂತ
ವೇತನ: 5200 ರಿಂದ 20200 ರು. ತಿಂಗಳಿಗೆ
ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 23 ಒಬಿಸಿ ಮತ್ತು ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸರ್ಕಾರದ ನಿಯಮದಂತೆ ಸಡಿಲಿಕೆ ನೀಡಲಾಗುವುದು.
ವಿದ್ಯಾರ್ಹತೆ : ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅಥವಾ ಅದಕ್ಕೆ ಸಮಾನವಾದ ಶಿಕ್ಷಣ ಹೊಂದಿರಬೇಕು. ಯಾವುದಾದರು ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ತಂಡದ ಸದಸ್ಯರಾಗಿ ಗುರುತಿಸಿಕೊಂಡು ಭಾಗವಹಿಸಿರಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ 100 ರು. ಎಸ್.ಸಿ/ಎಸ್.ಟಿ/ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
ಶುಲ್ಕವನ್ನು PHO, SSB, MHA, New Delhi ಇವರ ಹೆಸರಿಗೆ ಎಸ್ ಬಿ ಐ ಬ್ಯಾಂಕಿನಲ್ಲಿ ಸಂದಾಯವಾಗುವಂತೆ ಪೋಸ್ಟ್ ಲ್ ಆರ್ಡರ್/ ಬ್ಯಾಂಕ್ ಡ್ರಾಫ್ಟ್/ ಚೆಕ್ ಮೂಕ ಪಾವತಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ: ಸಹಾಯಕ ನಿರ್ದೇಶಕರು (ಕ್ರೀಡೆ) ಫೋರ್ಸ್ ಮುಖ್ಯ ಕಛೇರಿ, ಎಸ್ ಎಸ್ ಬಿ ಈಸ್ಟ್ ಬ್ಲಾಕ್ V, ಆರ್.ಕೆ.ಪುರಂ ನವದೆಹಲಿ: 110066
ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ












Click it and Unblock the Notifications