ನೈಋತ್ಯ ರೈಲ್ವೆಯಲ್ಲಿ ಗ್ರೂಪ್ ಡಿ ಹುದ್ದೆ, ಮಾ.6 ಕೊನೆ ದಿನ

Written By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ.13 : ನೈಋತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 'ಗ್ರೂಪ್ ಡಿ' ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಮಾರ್ಚ್ 06ರೊಳಗೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಹುದ್ದೆ: 'ಡಿ ಗ್ರೂಪ್'
ಸ್ಥಳ: ಕರ್ನಾಟಕ
ವೇತನ: 5200 ರಿಂದ 20200 ರು.(ತಿಂಗಳಿಗೆ)
ವಯೋಮಿತಿ: 18 ವರ್ಷ ಮೇಲ್ಪಟ್ಟ 29 ವರ್ಷದೊಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ[ರೈಲ್ವೇ ಇಲಾಖೆಯಿಂದ ವಿಶ್ವದ ಅತಿದೊಡ್ಡ ಆನ್ ಲೈನ್ ಪರೀಕ್ಷೆ]

South Western railway recruitment 2017 apply for group d post

ಅರ್ಜಿ ಶುಲ್ಕ: ಸಹಾಯಕ ಸಿಬ್ಬಂದಿ ಅಧಿಕಾರಿ, ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ಹೆಸರಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 500 ರು ತುಂಬಬೇಕು. ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಳಾಸ: ಅರ್ಜಿಗೆ ಸಂಬಂಧಿಸಿ ಮೂಲ ದಾಖಲಾತಿಗಳ ಮೇಲೆ ಸ್ವಯಂ ದೃಢೀಕರಣ ಮಾಡಿ ಅಭ್ಯರ್ಥಿಗಳು ತಮ್ಮ ಮೂಲಕ ದಾಖಲಾತಿಗಳನ್ನು ಮುಖ್ಯ ಸಿಬ್ಬಂದಿ ಅಧಿಕಾರಿ ದಕ್ಷಿಣ ಪಶ್ಚಿಮ ರೈಲ್ವೆ ವಲಯ, ಜನರಲ್ ಮ್ಯಾನೇಜರ್ ಬಿಲ್ಡಿಂಗ್, ಗದಗ ರಸ್ತೆ ಹುಬ್ಬಳ್ಳಿ ಈ ವಿಳಾಸಕ್ಕೆ ಕಳುಹಿಸಿತಕ್ಕದ್ದು.

ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
South Western Railway released new notification for Group D and Erstwhile group D post. Apply before 6th March 2017.
Please Wait while comments are loading...