Get Updates
Get notified of breaking news, exclusive insights, and must-see stories!

ಕಲ್ಯಾಣ ಕರ್ನಾಟಕಕ್ಕೆ ಗುಡ್‌ ನ್ಯೂಸ್: ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದೇನು?

ಬೆಂಗಳೂರು, ನವೆಂಬರ್‌ 28: ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಅನುಬಂಧದಲ್ಲಿರುವಂತೆ ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಂ, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ರೂ. 200.00 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವರಾದ ಹೆಚ್‌ ಕೆ ಪಾಟೀಲ್‌ ಅವರು ಮಾತನಾಡಿ, ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು-1977 ಅನುಸೂಚಿ-1ರಲ್ಲಿನ ಕ್ರಮ ಸಂಖ್ಯೆ-15ರನ್ವಯ ರಾಜ್ಯ ದತ್ತಾಂಶ ಕೇಂದ್ರ ಹತ್ತಿರದ ವಿಪತ್ತು ಚೇತರಿಕಾ ಕೇಂದ್ರ ಮತ್ತು ವಿಪತ್ತು ಚೇತರಿಕಾ ಕೇಂದ್ರಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಸೇವೆಯನ್ನು ಐದು ವರ್ಷಗಳ ಅವಧಿಗೆ ಒದಗಿಸಲು ಅಂದಾಜು ವೆಚ್ಚ ಒಟ್ಟು ರೂ.143.6 ಕೋಟಿ (ತೆರಿಗೆಯನ್ನು ಒಳಗೊಂಡಂತೆ) ಗಳಲ್ಲಿ ಪಡೆಯಲು ಹಾಗೂ ಸೂಕ್ತ ನಿರ್ವಹಣಾ ಸಂಸ್ಥೆಯನ್ನು ಆಯ್ಕೆ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

Siddaramaiah government gives good news to Kalyan Karnataka

ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಮೊದಲನೇ ಅನುಸೂಚಿಯ ಕ್ರಮ ಸಂಖ್ಯೆ:15(1)ರನ್ವಯ "2025-26ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ರಾಜ್ಯದಾದ್ಯಂತ 114 ಆಯುಷ್ಮಾನ್ ಆರೋಗ್ಯ ಮಂದಿರಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಅಂದಾಜು ಮೊತ್ತ ರೂ.7410.00 ಲಕ್ಷಗಳಲ್ಲಿ ಕೆ.ಟಿ.ಟಿ.ಪಿ ಕಾಯ್ದೆ ಹಾಗೂ ನಿಯಮಗಳುನುಸಾರ ಟೆಂಡರ್ ಆಹ್ವಾನಿಸಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ.

ಕರ್ನಾಟಕ ರಾಜ್ಯ ಹಜ್ ಸಮಿತಿ ನಿಯಮಾವಳಿ 2025 ಅನ್ನು ಜಾರಿಗೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮದ ರಿ.ಸ.ನಂ.189/1 ರಲ್ಲಿ 1.00 ಎಕರೆ "ಫಡಾ ಜಮೀನ"ನ್ನು ಮಾರ್ಗದರ್ಶಿ ಮೌಲ್ಯದ ಶೇ.5%ರಷ್ಟಕ್ಕೆ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್ (ರಿ) ಬೆಂಗಳೂರು ರವರಿಗೆ ಮಂಜೂರು ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನಲ್ಲಿ ನಿರ್ಮಿಸುತತಿರುವ ಪ್ರಜಾಸೌಧ ತಾಲ್ಲೂಕು ಆಡಳಿತ ಕೇಂದ್ರ ಕಟ್ಟಡದ ನಿರ್ಮಾಣ ಕಾಮಗಾರಿಗೆ ಈಗಾಗಲೇ ರೂ. 1000.00 ಲಕ್ಷಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮನೋದನೆ ನೀಡಿರುವುದನ್ನೂ ಒಳಗೊಂಡಂತೆ ಸದರಿ ಕಾಮಗಾರಿಯ ವ್ಯತ್ಯಾಸದ ಪರಿಮಾಣಗಳ ಮತ್ತು ಹೆಚ್ಚುವರಿ ಅಂಶಗಳ ಹಾಗೂ ಹೆಚ್ಚುವರಿಯಾದ ಜಿ.ಎಸ್.ಟಿ. ಯನ್ನೂ ಒಳಗೊಂಡಂತೆ ಒಟ್ಟು 12.49 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಸೆಕ್ಷನ್-3, 4, 500 ಮತ್ತು 501ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶಗಳನ್ನು ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಹಾಲಿ ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಹಾಗೂ ಒಟ್ಟಾರೆ ಪ್ರದೇಶವನ್ನು 'ಬೃಹತ್ ಮೈಸೂರು ಮಹಾನಗರ ಪಾಲಿಕೆ' ಪ್ರದೇಶವೆಂದು ಉದ್ಘೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ.

Bangalore Water Supply Regulations, 1965 ರ ನಿಯಮಾವಳೀಗಳನ್ನು ಸಡಿಲಿಸಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ಪಾವತಿಸಲು ಬಾಕಿಯಿರುವ ನೀರಿನ ಬಿಲ್ಲಿನ ಸಂಬಂಧ ಈ ಕೆಳಕಂಡ ಅಂಶಗಳನ್ನೊಳಗೊAಡ "ಏಕಕಾಲಿಕ ಸೆಟಲ್ಮೆಂಟ್ (One Time Settlement) ಯೋಜನೆಯನ್ನು ಅನುಷ್ಠಾನಗೊಳಿಸಲು ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ಬಾಕಿಯಿರುವ ನೀರಿನ ಬಿಲ್ಲಿನ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದಲ್ಲಿ ಬಡ್ಡಿ ದಂಡ ಮತ್ತು ಇತರೆ ಶುಲ್ಕಗಳನ್ನು ಶೇಕಡಾ 100 ರಷ್ಟು ಮನ್ನಾ ಮಾಡಲು ಏಕಕಾಲಿಕ ಸೆಟಲ್ಮೆಂಟ್ (One Time Settlement) ಯೋಜನೆಯನ್ನು 03 ತಿಂಗಳ ಅವಧಿಗೆ ಸೀಮತಗೊಳಿಸಿ ಜಾರಿಗೊಳಿಸಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಮೊತ್ತಗಳನ್ನು ಲೆಕ್ಕ ಪತ್ರದಲ್ಲಿ ಸಮನ್ವಯಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಘನತ್ಯಾಜ್ಯ ಸಮರ್ಪಕ ನಿರ್ವಹಣೆಗಾಗಿ (Operation and Maintenance of Landfill Sites" ಪ್ಯಾಕೇಜಿನ ಕಾಮಗಾರಿಗಳನ್ನು ರೂ.100.00 ಕೋಟಿಗಳ ಅಂದಾಜು ಮೊತ್ತದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಮೂಲಕ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು "ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ" ಎಂದು ಮರುನಾಮಕರಣಗೊಳಿಸಲು; ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳು (ಎರಡನೇ ತಿದ್ದುಪಡಿ) ವಿಧೇಯಕ, 2025"ಕ್ಕೆ ಸಚಿವ ಸಂಪುಟ ಅನುಮೋದಿಸಿದೆ.

ರಾಜ್ಯದ 10 ಕಿರು ಬಂದರುಗಳಿಂದ ಕಭ್ಭಿಣದ ಅದಿರು ರಪ್ತು ಮಾಡುವುದನ್ನು ನಿಷೇದಿಸಿ ಆದೇಶಿಸಿರುವ ಸರ್ಕಾರದ ಆದೇಶ ಸಂರ್ಖಯೆ: ಲೋಇ 186 ಪಿಎಸ್ಪಿ 2010 ದಿನಾಂಕ: 26.07.2010 ನ್ನು ಹಿಂಪಡೆಯಲು ಮತ್ತು "ಕರ್ನಾಟಕ ಕಿರು ಬಂದರುಗಳ್ಲಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ-2025" Standard Operating Procedure for Export and Import and Trade of Iron Ore from the Non Major Ports of Karnataka Namely- Karnataka Non - Major Ports Iron Ore Handling Policy-2025 ಜಾರಿಗೆ ತರಲು ಸಚಿವ ಸಂಪುಟ ನಿರ್ಣಯಿಸಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಹೊರವಲಯದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನೂತನ ಸ್ಯಾಟ್ಲೈಟ್ ಬಸ್ ನಿಲ್ದಾಣದ ಕಾಮಗಾರಿಯನ್ನು ಆರ್ಥಿಕ ಪರಿಣಾಮದಲ್ಲಿ ತಿಳಿಸಿರುವಂತೆ ಒಟ್ಟು ಅಂದಾಜು ವೆಚ್ಚ ರೂ.17.50 ಕೋಟಿಗಳಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು." ಸಚಿವ ಸಂಪುಟ ಅನುಮೋದನೆ ನೀಡಿದೆ. ಕಬಿನಿ ಎಡದಂಡೆ ನಾಲೆಯ ಡೀಪ್ಕಟ್ ಭಾಗಕ್ಕೆ ಕಟ್ ಆಂಡ್ ಕವರ್ ಹಾಗೂ ಅಡ್ಡಮೋರಿಗಳ ನಿರ್ಮಾಣ ಕಾಮಗಾರಿ ಮತ್ತು ಕಬಿನಿ ಎಡದಂಡೆ ನಾಲೆಯ ವಿತರಣಾ ಕಾಲುವೆ-1ರಿಂದ 19ರ ವರೆಗಿನ ಅಭಿವೃದ್ಧಿ ಕಾಮಗಾರಿಯ ರೂ. 50.00 ಕೋಟಿ ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದಿಸಿದೆ.

ಬೀದರ್ ಜಿಲ್ಲೆಯ ಕಮಠಾಣಾ ಗ್ರಾಮ ಪಂಚಾಯತಿ, ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿ, ಹುಲಸೂರು ಗ್ರಾಮ ಪಂಚಾಯತಿ, ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮ ಪಂಚಾಯತಿ, ಮೈಸೂರು ಜಿಲ್ಲೆಯ ಸಾಲಿಗ್ರಾಮ ಗ್ರಾಮ ಪಂಚಾಯತಿ, ಬೆಂಗಳೂರು ಗ್ರಾ.ಜಿಲ್ಲೆಯ ತ್ಯಾಮಗೊಂಡ್ಲು ಗ್ರಾಮ ಪಂಚಾಯತಿ, ಬೆಳಗಾವಿ ಜಿಲ್ಲೆಯ ಸುರೇಬಾನ ಮತ್ತು ಮನಿಹಾಳ ಗ್ರಾಮ ಪಂಚಾಯತಿ, ಕಟಕೋಳ ಗ್ರಾಮ ಪಂಚಾಯತಿ, ಉತ್ತರ ಕನ್ನಡ ಜಿಲ್ಲೆಯ ಮಾವಳ್ಳಿ-1 &2ಗಳನ್ನು, ಯಾದಗಿರಿ ಜಿಲ್ಲೆಯ ವಡಗೇರಾ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ, ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆ ಇನ್ನು ಮುಂದೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+