ಪುತ್ತೂರು : ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ

Posted By:
Subscribe to Oneindia Kannada

ಮಂಗಳೂರು, ಜುಲೈ 15 : ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ನೋಂದಣಿ ಮಾಡಲು ಆಗಸ್ಟ್ 1, 2016 ಕೊನೆಯ ದಿನ.

ಹಿರಿಯ ಅಧಿಕಾರಿ (ತಾಂತ್ರಿಕ) 1, ಹಿರಿಯ ಅಧಿಕಾರಿ 4, ಕಿರಿಯ ಅಧಿಕಾರಿ 12, ಗುಮಾಸ್ತ 18 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜುಲೈ 13 ರಿಂದ ಆಗಸ್ಟ್ 1ರ ತನಕ ಅರ್ಜಿ ಸಲ್ಲಿಸಲು ನೋಂದಣಿ ಮಾಡಿಕೊಳ್ಳಬಹುದು. ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಆಗಸ್ಟ್ 2, 2016. [ಬಳ್ಳಾರಿ ನ್ಯಾಯಾಲಯದಲ್ಲಿ ಕೆಲಸ ಖಾಲಿ ಇದೆ]

Shri saraswathi credit souharda sahakari ltd recruitment 2016

ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ. http://www.saraswathisahakari.com/ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪ್ರಕಟಿಸಲಾಗಿದೆ. [ಬೆಳಗಾವಿ : 90 ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ]

ಹಿರಿಯ ಅಧಿಕಾರಿ (ತಾಂತ್ರಿಕ) : 10+2 ವಿದ್ಯಾರ್ಹತೆಯೊಂದಿಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ನಲ್ಲಿ ಡಿಪ್ಲೋಮಾ/ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಈ ಕ್ಷೇತ್ರದಲ್ಲಿ ಕನಿಷ್ಟ ಎರಡು ವರ್ಷ ಕೆಲಸ ಮಾಡಿದ ಅನುಭವ ಕಡ್ಡಾಯ. ಕನ್ನಡ ಭಾಷಾ ಜ್ಞಾನ ಕಡ್ಡಾಯ.

ಹಿರಿಯ ಅಧಿಕಾರಿ : ಅಂಗೀಕೃತ ವಿವಿಯಿಂದ ಬಿಕಾಂ, ಬಿಬಿಎಂ, ಬಿಸಿಎ ಪದವಿ ಪಡೆದವರಿಗೆ ಆದ್ಯತೆ. ಬ್ಯಾಂಕ್ ಅಥವ ಕ್ರೆಡಿಟ್ ಸಹಕಾರಿ ಸಂಸ್ಥೆಯಲ್ಲಿ ಕನಿಷ್ಠ ಮೂರು ವರ್ಷ ದುಡಿದ ಅನುಭವ ಕಡ್ಡಾಯ. ಕನ್ನಡ ಭಾಷಾ ಜ್ಞಾನ ಕಡ್ಡಾಯ.

job

ಕಿರಿಯ ಅಧಿಕಾರಿ/ಗುಮಾಸ್ತ : ಅಂಗೀಕೃತ ವಿವಿಯಿಂದ ಬಿಕಾಂ, ಬಿಬಿಎಂ, ಬಿಸಿಎ ಪದವಿ ಪಡೆದವರಿಗೆ ಆದ್ಯತೆ. ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಬಹುದು. ಆದರೆ, ಸಂದರ್ಶನಕ್ಕೆ ಬರುವಾಗ ಉತ್ತೀರ್ಣ ಹೊಂದಿದ ಬಗ್ಗೆ ದಾಖಲೆಗಳನ್ನು ತರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

mangaluru

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು 7022288005, 7022284004 (ಸೋಮವಾರದಿಂದ-ಶುಕ್ರವಾರದ ತನಕ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯ ತನಕ ಕರೆ ಮಾಡಬಹುದು).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shri Saraswathi Credit Souharda Sahakari Ltd invited application sfor various post. August 1, 2016 last date for submit applications. Head Office is situated in Puttur, Dakshina Kannada.
Please Wait while comments are loading...