SEBI Recruitment 2025: ಸೇಬಿಯಲ್ಲಿ ಪ್ರಮುಖ ಹುದ್ದೆಗಳ ನೇಮಕಾತಿ, ಗರಿಷ್ಠ ₹1.84 ಲಕ್ಷ ವೇತನ

ಬೆಂಗಳೂರು, ಅಕ್ಟೋಬರ್ 11: ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸೇಬಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು.ಅಭ್ಯರ್ಥಿಗಳು ನೇಮಕಾತಿ ಅರ್ಹತೆ, ಸಂಬಳ, ವಯಸ್ಸು ಮತ್ತು ಅರ್ಜಿ ಪ್ರಕ್ರಿಯೆ ವಿವರ ಇಲ್ಲಿ ತಿಳಿದುಕೊಳ್ಳಿ.

ಸೇಬಿ ನೀಡಿರುವ ಅಧಿಸೂಚನೆ ಪ್ರಕಾರ, ಆಫೀಸರ್ ಗ್ರೇಡ್ A ಸಹಾಯಕ ವ್ಯವಸ್ಥಾಪಕ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೂಡಲೇಸೂಕ್ತ ದಾಖಲೆಗಳ ಸಮೇತ ಆನ್‌ಲೈನ್ ಮೂಲಕ http://www.sebi.gov.in ಅರ್ಜಿ ಸಲ್ಲಿಸಬೇಕು.

SEBI Recruitment 2025 SEBI Invites Application for Grade A Assistant Manager

ನೇಮಕಾತಿ & ಹುದ್ದೆ ವಿವರಗಳು

* ನೇಮಕಾತಿ ಸಂಸ್ಥೆ: ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI)

* ಹುದ್ದೆ ಹೆಸರು: ಅಫೀಸರ್ ಗ್ರೇಡ್ A ಸಹಾಯಕ ವ್ಯವಸ್ಥಾಪಕ

* ಹುದ್ದೆಗಳ ಪ್ರಮಾಣ: ಅಧಿಕೃತ ವೆಬ್‌ಸೈಟ್‌ನಲ್ಲಿದೆ.

* ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 30

* ಗರಿಷ್ಠ ವಯಸ್ಸು: 30

* ಮಾಸಿಕ ವೇತನ: ಗರಿಷ್ಠ 1.84 ಲಕ್ಷ

ಶೈಕ್ಷಣಿಕ ಅರ್ಹತೆ

ಹುದ್ದೆಗಳು ವಿವಿಧ ಸ್ಟ್ರೀಮ್‌ಗಳಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಯಾವುದೇ ಒಂದರಲ್ಲಿ ಸ್ನಾತಕೋತ್ತರ ಪದವಿ / ಸ್ನಾತಕೋತ್ತರ ಡಿಪ್ಲೊಮಾ / ಕಾನೂನು ಪದವಿ / ಇಂಜಿನಿಯರಿಂಗ್ ಪದವಿ / ಚಾರ್ಟರ್ಡ್ ಅಕೌಂಟೆಂಟ್ / ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ / ಕಂಪನಿ ಕಾರ್ಯದರ್ಶಿ / ಖರ್ಚು ಅಕೌಂಟೆಂಟ್ / ಹಿಂದಿ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್ / ಸಿವಿಲ್ ಎಂಜಿನಿಯರಿಂಗ್ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಹತೆಯನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.

ವಯಸ್ಸಿನ ಮಿತಿ

* 2025 ಸೆಪ್ಟೆಂಬರ್ 30ಕ್ಕೆ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ಆಗಿರಬೇಕು.

* 1995 ಅಕ್ಟೋಬರ್ 1ನಂತರ ಜನಿಸಿದವರು ಅರ್ಹರಾಗುವುದಿಲ್ಲ.

ಆಯ್ಕೆ ಪ್ರಕ್ರಿಯೆ ಹೇಗೆ?

* ಹಂತ 1: ಲಿಖಿತ ಪರೀಕ್ಷೆ

* ಹಂತ 2: ಹಂತ II ಪರೀಕ್ಷೆ

* ಹಂತ 3: ಸಂದರ್ಶನ

* ಅಭ್ಯರ್ಥಿಗಳು ಲಿಖಿತ ಪರೀಕ್ಷೆ ತಯಾರಿಗೆ AI ಬಳಸಬಹುದು.

ಅರ್ಜಿ ಶುಲ್ಕ

* ಮೀಸಲಾತಿ ಇಲ್ಲದ ಓಬಿಸಿ/ ಇಡಬ್ಲುಎಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1,000 ಜೊಗೆಗೆ ಜಿಎಸ್‌ಟಿ ಸಹ ಇರುತ್ತದೆ.

* ಇನ್ನು ಮೀಸಲಾ ಇರುವ ಎಸ್‌ಸಿ, ಎಸ್‌ಟಿಪಿ, ಪಿಡಬ್ಲುಡಿ ಅಭ್ಯರ್ಥಿಗಳಿಗೆ 100 ರೂಪಾಯಿ ಜೊತೆಗೆ GST ಇರುತ್ತದೆ. ಹೆಚ್ಚಿನ ಮಾಹಿತಿಗೆ ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+