SBI Recruitment 2022: 5008ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಸೆ. 7: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2022ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 27, 2022ರೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆ ಹೆಸರು: ಜ್ಯೂನಿಯರ್ ಅಸೋಸಿಯೇಟ್ (Customer Support & Sales)
ಒಟ್ಟು ಹುದ್ದೆ: 5008
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 27, 2022
ಸಂಬಳ ವಿವರ: 17900-47920/- ರು ಪ್ರತಿ ತಿಂಗಳು
ರಾಜ್ಯಗಳು-ಒಟ್ಟು ಹುದ್ದೆಗಳ ಸಂಖ್ಯೆ
- ಗುಜರಾತ್- 353
- ದಮನ್ ಅಂಡ್ ದಿಯು- 4
- ಕರ್ನಾಟಕ-316
- ಮಧ್ಯಪ್ರದೇಶ- 389
- ಛತ್ತೀಸ್ ಗಢ-92
- ಪಶ್ಚಿಮ ಬಂಗಾಳ-340
- ಅಂಡಮಾನ್ ಅಂಡ್ ನಿಕೋಬಾರ್ ದ್ವೀಪ-10
- ಸಿಕ್ಕಿಂ-26
- ಒಡಿಶಾ-170
- ಜಮ್ಮು ಮತ್ತು ಕಾಶ್ಮೀರ- 35
- ಹರ್ಯಾಣ-5
- ಹಿಮಾಚಲ ಪ್ರದೇಶ-55
- ಪಂಜಾಬ್-130
- ತಮಿಳುನಾಡು- 355
- ಪಾಂಡಿಚೇರಿ-7
- ದೆಹಲಿ-32
- ಉತ್ತರಾಖಂಡ್- 120
- ತೆಲಂಗಾಣ-225
- ರಾಜಸ್ಥಾನ-284
- ಕೇರಳ-270
- ಲಕ್ಷದೀಪ-3
- ಉತ್ತರಪ್ರದೇಶ- 631
- ಮಹಾರಾಷ್ಟ್ರ-747
- ಗೋವಾ-50
- ಅಸ್ಸಾಂ-258
- ಅರುಣಾಚಲ ಪ್ರದೇಶ-15
- ಮಣಿಪುರ- 28
- ಮೇಘಾಲಯ-23
- ಮಿಜೋರಾಂ-10
- ನಾಗಾಲ್ಯಾಂಡ್-15
- ತ್ರಿಪುರಾ-10
ವಿದ್ಯಾರ್ಹತೆ: ಎಸ್ ಬಿ ಐ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯೋಮಿತಿ: ಸಾಮಾನ್ಯ ಹಾಗೂ ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಗರಿಷ್ಠ 28 ವರ್ಷ (ಆಗಸ್ಟ್ 1, 2022ರಂತೆ). ದಿವ್ಯಾಂಗರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ10 ವರ್ಷ, ಎಸ್ ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಮಾಜಿ ಯೋಧ 05, ಹಿಂದುಳಿದ ವರ್ಗ 03 ವರ್ಷಗಳ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ/ಆರ್ಥಿಕವಾಗಿ ಹಿಂದುಳಿದ ವರ್ಗ: 750 ರು
ಎಸ್‌ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ
ಶುಲ್ಕಪಾವತಿ ವಿಧಾನ: ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್
ನೇಮಕಾತಿ ಪ್ರಕ್ರಿಯೆ: ಪ್ರಾಥಮಿಕ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ, ಸಂದರ್ಶನ. ಕರ್ನಾಟಕದಲ್ಲಿ ಕನ್ನಡ ಅಲ್ಲದೆ ಇಂಗ್ಲೀಷ್, ಹಿಂದಿ ಭಾಷೆಯಲ್ಲೂ ಪರೀಕ್ಷೆ ಬರೆಯಲು ಅವಕಾಶ ಇರಲಿದೆ. 10 ಅಥವಾ 12ನೇ ತರಗತಿಯಲ್ಲಿ ಪ್ರಾದೇಶಿಕ ಭಾಷೆ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಭಾಷಾ ಪರೀಕ್ಷೆ ಅಗತ್ಯವಿರುವುದಿಲ್ಲ. ಮಿಕ್ಕ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಪರೀಕ್ಷೆಯಲ್ಲಿ ಪಾಸಾದರೆ ಪೂರ್ವಭಾವಿ ಪರೀಕ್ಷೆಗೆ ಅರ್ಹತೆ ಸಿಗಲಿದೆ.

ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸಲು ಆರಂಭ ದಿನಾಂಕ : 07/09/2022
ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27/09/2022
ಆನ್‌ಲೈನ್‌ನಲ್ಲಿ ಪರೀಕ್ಷೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಸದ್ಯದ ಮಾಹಿತಿಯಂತೆ ನವೆಂಬರ್ 2022ರಲ್ಲಿ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ಡಿಸೆಂಬರ್ 2022 ಅಥವಾ ಜನವರಿ 2023ರಲ್ಲಿ ನಡೆಸುವ ಸಾಧ್ಯತೆಯಿದೆ.
ಅರ್ಜಿ ಸಲ್ಲಿಸುವ ವಿಧಾನ:
* ಎಸ್‌ಬಿಐ ನೇಮಕಾತಿ ಅಧಿಸೂಚನೆ 2022ರಲ್ಲಿ ನೀಡಿರುವಂಥ ಅರ್ಹತೆ ಇದ್ದ ಅಭ್ಯರ್ಥಿಗಳು ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಐಬಿಪಿಎಸ್ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ.
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ
* ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
* SBI JA (Customer Support and Sales) ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ











Click it and Unblock the Notifications