ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SBI PO Admit Card 2022: ಡೌನ್‌ಲೋಡ್ ಮಾಡಲು ನೇರ ಲಿಂಕ್, ಪ್ರಿಲಿಮ್ಸ್ ಪರೀಕ್ಷೆಯ ದಿನಾಂಕ ತಿಳಿಯಿರಿ

|
Google Oneindia Kannada News

SBI PO 2022ರ ಪ್ರವೇಶ ಕಾರ್ಡ್ ಇದೀಗ ಪ್ರಕಟಗೊಂಡಿದೆ. ಎಸ್‌ಬಿಐ ಪಿಒ ಪ್ರಿಲಿಮ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಅಧಿಕೃತ ವೆಬ್‌ಸೈಟ್‌ನಿಂದ ತಮ್ಮ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

ಪ್ರೊಬೇಷನರಿ ಆಫೀಸರ್ ಹುದ್ದೆಗೆ ಎಸ್‌ಬಿಐ ಪಿಒ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಪ್ರಿಲಿಮ್ಸ್ ಪರೀಕ್ಷೆಯನ್ನು ಡಿಸೆಂಬರ್ 17, 18, 19 ಮತ್ತು 20, 2022 ರಂದು ನಡೆಸಲಾಗುವುದು.

SBI PO ಪ್ರಿಲಿಮ್ಸ್ ಪ್ರವೇಶ ಕಾರ್ಡ್ ಬಿಡುಗಡೆಯಾಗಿದೆ. ಈ ಕೆಳಗೆ ನೀಡಿರುವ ಲಿಂಕ್‌ ಅನ್ನು ಬಳಸಿ, ನೋಂದಾಯಿತ ಅಭ್ಯರ್ಥಿಗಳು ತಮ್ಮ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

ನೇರ ಲಿಂಕ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SBI PO 2022 Exam Date and Call Letter Out for Prelims Exam

ಅಧಿಕೃತ ವೆಬ್‌ಸೈಟ್ ಪ್ರಕಾರ, ಲಿಂಕ್ ಅನ್ನು ಶೀಘ್ರದಲ್ಲೇ ಸಕ್ರಿಯಗೊಳಿಸಲಾಗುತ್ತದೆ. 'ಕಾಲ್ ಲೆಟರ್ ಡೌನ್‌ಲೋಡ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ' ಎಂದು ಬರೆಯಲಾಗಿದೆ. ಅಭ್ಯರ್ಥಿಗಳು ಲಿಂಕ್ ಅನ್ನು ಸಕ್ರಿಯಗೊಳಿಸಲು ಕಾಯಬೇಕಾಗುತ್ತದೆ. SBI PO ಪರೀಕ್ಷೆ ಮೂಲಕ, ಒಟ್ಟು 1673 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಮೂರು ಹಂತದ ಪರೀಕ್ಷೆಗಳಲ್ಲಿ ಅರ್ಹತೆ ಪಡೆದರೆ ಮಾತ್ರ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಇದು ಮೂರು ಹಂತದ ಪರೀಕ್ಷೆಯಾಗಿದ್ದು, ಪ್ರಿಲಿಮ್ಸ್, ಮುಖ್ಯ ಮತ್ತು ಸೈಕೋಮೆಟ್ರಿಕ್ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಆಯ್ಕೆಯಾಗಲು ಅಭ್ಯರ್ಥಿಗಳು ಈ ಮೂರು ಪರೀಕ್ಷೆಗಳಿಗೆ ಅರ್ಹತೆ ಪಡೆಯಬೇಕು.

ಮೂರು ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಎಸ್‌ಬಿಐ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಮೊದಲ ಹಂತವೆಂದರೆ ಪ್ರಿಲಿಮ್ಸ್ ಪರೀಕ್ಷೆ. ಅಭ್ಯರ್ಥಿಯು ಪ್ರಿಲಿಮ್ಸ್‌ಗೆ ಅರ್ಹತೆ ಪಡೆದರೆ ಅವನು ಮುಖ್ಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಯ ಮೂರನೇ ಹಂತವು ಸೈಕೋಮೆಟ್ರಿಕ್ ಪರೀಕ್ಷೆಯಾಗಿದೆ. ಪ್ರಿಲಿಮ್ಸ್ ಪರೀಕ್ಷೆಗಳು 100 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಮುಖ್ಯ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಗೆ 200 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಮತ್ತು 50 ಅಂಕಗಳಿಗೆ ವಿವರಣಾತ್ಮಕ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.

SBI PO 2022 Exam Date and Call Letter Out for Prelims Exam

ಕೊನೆಯ ಹಂತವೆಂದರೆ ಸೈಕೋಮೆಟ್ರಿಕ್ ಪರೀಕ್ಷೆ. ಇದರಲ್ಲಿ ಸಂದರ್ಶನಗಳು ಹಾಗೂ ಗುಂಪು ಚರ್ಚೆಗಳು ಇರುತ್ತವೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟಿ ಮತ್ತು ಇಂಗ್ಲಿಷ್‌ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

English summary
SBI PO 2022 exam is to be conducted by the State Bank of India (SBI) to select eligible candidates for the 1673 Probationary Officers (PO) vacancies in different branches of the State Bank of India. SBI PO Notification 2022 has been released along with SBI PO Exam Dates. As mentioned, the SBI PO 2022 prelims exam is going to be conducted from 17th to 20th December 2022 and SBI PO Mains is to be conducted in January 2023 / February 2023,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X