ರೈಲ್ವೆಯಲ್ಲಿ 62907 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Posted By: Gururaj
Subscribe to Oneindia Kannada

ಬೆಂಗಳೂರು, ಫೆಬ್ರವರಿ 13 : ರೈಲ್ವೆ ನೇಮಕಾತಿ ಮಂಡಳಿ ಆನ್‌ ಲೈನ್ ಮೂಲಕ 62907 ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12/3/2018.

ಕೇಂದ್ರೀಯ ವೇತನ ಆಯೋಗ (ಸಿಪಿಸಿ) ಯ ಲೆವಲ್ 1 ವೇತನ ಶ್ರೇಣಿಯ ವಿವಿಧ ಹುದ್ದೆಗಳನ್ನು ರೈಲ್ವೆ ಭರ್ತಿ ಮಾಡುತ್ತಿದೆ. ವೇತನ ಶ್ರೇಣಿ 18,000ರೂ.ಗಳು.

ಐಡಿಬಿಐ ಬ್ಯಾಂಕ್‌ನಲ್ಲಿ 760 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಎನ್‌ಸಿವಿಟಿ ನೀಡುವ ನ್ಯಾಷನಲ್ ಅಪ್ರೆಂಟಿಷಿಪ್ ಪ್ರಮಾಣ ಪತ್ರ ಪಡೆದಿರಬೇಕು. ಎನ್‌ಸಿವಿಟಿ/ಎಸ್‌ಸಿವಿಟಿ ಮಾನ್ಯತೆ ಪಡೆದಿರುವ ಐಟಿಐನಲ್ಲಿ ಕೋರ್ಸ್ ಮುಗಿಸಿರಬೇಕು.

RRB recruitment 2018 : Apply for 62907 Group D Posts

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 31 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. 1/7/2018ಕ್ಕೆ ಅನ್ವಯವಾಗುವಂತೆ.

ಪ್ರಮುಖ ಅಂಶಗಳು

ಒಟ್ಟು ಹುದ್ದೆಗಳು : 62907
ಕೆಲಸದ ಸ್ಥಳ : ದೇಶದ ಯಾವುದೇ ನಗರ

ಕೊನೆ ದಿನಾಂಕ : 12/3/2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ನೇಮಕಾತಿ ಮಂಡಳಿ 26502 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಮಾರ್ಚ್ 5, 2018 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Railway Recruitment Boards invite ONLINE applications from eligible candidates for the recruitment of various posts. Applications complete in all respect should be submitted ONLINE Only before 12th March 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ