RDWSD Karnataka Jobs 2023: ತಿಂಗಳಿಗೆ ₹75,000 ವೇತನದ ಸರ್ಕಾರಿ ಉದ್ಯೋಗ, ಅರ್ಜಿ ಸಲ್ಲಿಕೆ ವಿಧಾನದ ವಿವರ
ಬೆಂಗಳೂರು, ಅಕ್ಟೋಬರ್ 27: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ (RDWSD) ಸಂಸ್ಥೆ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ (RDWSD) ಸಂಸ್ಥೆಯಲ್ಲಿ ಒಟ್ಟು 155 ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಅಭ್ಯರ್ಥಿಗಳು ಮುಂದಿನ ನವೆಂಬರ್ 4 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಫ್‌ಲೈನ್/ ಪೋಸ್ಟ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಅರ್ಜಿ ಸಲ್ಲಿಕೆಗೂ ಮೊದಲು ಹುದ್ದೆಯ ನೇಮಕಾತಿಯ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ನೇಮಕಾತಿ ಪೂರ್ಣ ವಿವರ ಹೀಗಿದೆ
ಸಂಸ್ಥೆ ಹೆಸರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ
ಖಾಲಿ ಹುದ್ದೆ ಹೆಸರು: ಕನ್ಸಲ್ಟೆಂಟ್
ಒಟ್ಟು ಖಾಲಿ ಎಷ್ಟಿವೆ: 155
ಮಾಸಿಕ ಸಂಬಳ: 50,000 ನಿಂದ 75,000 ರೂಪಾಯಿ
ಉದ್ಯೋಗದ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 4
ಹುದ್ದೆಗಳ ಇನ್ನಿತರ ಮಾಹಿತಿ ನೋಡುವುದಾದರೆ, ಪ್ರೊಕ್ಯೂರ್ಮೆಂಟ್ ಕನ್ಸಲ್ಟೆಂಟ್, ಮಾನಿಟರಿಂಗ್ & ಇವಾಲ್ಯುಯೇಷನ್ ಕನ್ಸಲ್ಟೆಂಟ್ ಹುದ್ದೆ, ಎನ್ವಿರಾನ್ಮೆಂಟಲ್ ಕನ್ಸಲ್ಟೆಂಟ್, ಸೋಷಿಯಲ್ ಡೆವಲಪ್ಮೆಂಟ್ ಕನ್ಸಲ್ಟೆಂಟ್ ಮತ್ತು ಫೈನಾನ್ಸ್ ಕನ್ಸಲ್ಟೆಂಟ್ ತಲಾ 31 ಹುದ್ದೆಗಳು ಸೇರಿ ಒಟ್ಟು 155 ಹುದ್ದೆಗಳ ಖಾಲಿ ಇವೆ.
ಶೈಕ್ಷಣಕ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಲ್ಲಿ ಬಿಇ/ಬಿ.ಟೆಕ್, ಬಿಸಿಎ, ಎಂ.ಟೆಕ್, ಎಂಎಸ್‌ಡಬ್ಲು/ಎಂಎ, ಎಂಬಿಎ (ಫೈನಾನ್ಸ್) ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ಅಧಿಸೂಚನೆ ತಿಳಿಸಿದೆ.
ಅಲ್ಲದೇ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಪಡೆದಿರಬೇಕು ಎಂದು ಸೂಚಿಸಿದೆ.

ವಯೋಮಿತಿ ಮತ್ತು ಸಡಿಲಿಕೆ ವಿವರ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. ನೇರ ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆ ಆಗುವರಿಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಬೇರೆಡೆ ಪೊಸ್ಟಿಂಗ್ ಸಿಗಲಿದೆ.
ಆಫ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ ಎಂದು ನೋಡುವುದಾದರೆ, ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ''ನಿರ್ದೇಶಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ,2ನೇ ಮಹಡಿ,ಕೆಎಚ್‌ಬಿ ಕಟ್ಟಡ, ಕಾವೇರಿ ಭವನ,
ಕೆ.ಜಿ.ರಸ್ತೆ, ಬೆಂಗಳೂರು-09 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಿ ಸಂಪರ್ಕಿಸಬಹುದು.
ನೆನಪಿಡಬೇಕಾದ ದಿನಾಂಕಳು
ಅರ್ಜಿ ಸಲ್ಲಿಕೆ ಆರಂಭವಾಗಿದ್ದು- 19/04/2023
ಅರ್ಜಿ ಸಲ್ಲಿಕೆಗೆ ಇರುವ ಕೊನೆ ದಿನಾಂಕ- ನವೆಂಬರ್ 4












Click it and Unblock the Notifications