RRB Recruiment: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ, 368 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಆಗಸ್ಟ್ 25: ಕೇಂದ್ರ ಸರ್ಕಾರಿ ವ್ಯಾಪ್ತಿಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹೊಂದಬೇಕೆಂಬ ಆಸಕ್ತರಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಗುಡ್‌ನ್ಯೂಸ್ ನೀಡಿದೆ. ನೂರಾರು ಸೆಕ್ಷನ್ ಕಂಟ್ರೋಲರ್ ಹುದ್ದೆಗಳನ್ನು ಭರ್ತಿಗೆ ಅರ್ಹರಿಂದ ಮಂಡಳಿಯು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಆರಂಭ, ಆನ್‌ಲೈನ್ ಲಿಂಕ್ ಹಾಗೂ ನೇಮಕಾತಿ ಇತರ ಪೂರ್ಣ ವಿವರ ಇಲ್ಲಿದೆ.
ಆಸಕ್ತರಿಗೆ ರೈಲ್ವೆ ನೇಮಕಾತಿ ಮಂಡಳಿ (RRB)ಯು ನೇಮಕಾತಿ ಅಧಿಸೂಚನೆ ಹೊರಡಿಸಿದೆ. ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅರ್ಜಿ ಸಲ್ಲಿಕೆಯ ಆರಂಭವು ಸೆಪ್ಟೆಂಬರ್ 15 ರಿಂದ ಶುರುವಾಗುತ್ತದೆ. ಕೇಂದ್ರ ಸರ್ಕಾರ ಉದ್ಯೋಗ ಪಡೆಯಲು ಇಚ್ಛಿಸುವವರು ಇಲಾಖೆ ಅಧಿಕೃತ ವೆಬ್‌ಸೈಟ್ rrbcdg.gov.in ಗೆ ಭೇಟಿ ನೀಡುವಂತೆ ರೈಲ್ವೆ ಮಂಡಳಿ ತಿಳಿಸಿದೆ. ಅರ್ಜಿ ಸಲ್ಲಿಕೆಗು ಮುನ್ನ ಇಲ್ಲಿನ ವಿವರ ತಿಳಿಯಿರಿ.

ನೇಮಕಾತಿ ಪೂರ್ಣ ಮಾಹಿತಿ
* ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಮಂಡಳಿ (RRB)
* ಹುದ್ದೆಗಳ ಹೆಸರು: ಸೆಕ್ಷನ್ ಕಂಟ್ರೋಲರ್
* ಒಟ್ಟು ಹುದ್ದೆಗಳು: 368
* ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 15
* ಗರಿಷ್ಠ ವಯಸ್ಸು: 33
ವಿದ್ಯಾರ್ಹತೆಗಳು ಏನಿರಬೇಕು?
ಆರ್‌ಆರ್‌ಬಿ ನೇಮಕಾತಿ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪದವಿ ಪಡೆದಿರಬೇಕು. ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ ವಯಸ್ಸು 33 ವರ್ಷ ಇರಬೇಕು. ಜಾತಿ ಮೀಸಲಾತಿ ಆಧಾರದಲ್ಲಿ ಆಯಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆ ಸಿಗಲಿದೆ.
368 ಹುದ್ದೆಗಳ ವಲಯವಾರು ಪಟ್ಟಿ, ವಿವರ
* ನೈಋತ್ಯ ರೈಲ್ವೆ: 24 ಹುದ್ದೆಗಳು
* ದಕ್ಷಿಣ ರೈಲ್ವೆ: 24 ಹುದ್ದೆಗಳು
* ದಕ್ಷಿಣ ಮಧ್ಯ ರೈಲ್ವೆ: 20 ಹುದ್ದೆಗಳು
*ಆಗ್ನೇಯ ಮಧ್ಯ ರೈಲ್ವೆ: 26 ಹುದ್ದೆಗಳು
*ಆಗ್ನೇಯ ರೈಲ್ವೆ: 12 ಹುದ್ದೆಗಳು
*ಕೇಂದ್ರ ರೈಲ್ವೆ: 25 ಹುದ್ದೆಗಳು
*ಪೂರ್ವ ಕರಾವಳಿ ರೈಲ್ವೆ: 24 ಹುದ್ದೆಗಳು
*ಪೂರ್ವ ಮಧ್ಯ ರೈಲ್ವೆ: 32 ಹುದ್ದೆಗಳು
*ಈಶಾನ್ಯ ಗಡಿನಾಡು ರೈಲ್ವೆ: 21 ಹುದ್ದೆಗಳು
*ಉತ್ತರ ರೈಲ್ವೆ: 24 ಹುದ್ದೆಗಳು
*ವಾಯುವ್ಯ ರೈಲ್ವೆ: 30 ಹುದ್ದೆಗಳು
*ಪೂರ್ವ ರೈಲ್ವೆ: 39 ಹುದ್ದೆಗಳು
*ಪಶ್ಚಿಮ ಮಧ್ಯ ರೈಲ್ವೆ: 7 ಹುದ್ದೆಗಳು
*ಪಶ್ಚಿಮ ರೈಲ್ವೆ: 35 ಹುದ್ದೆಗಳು
* ಉತ್ತರ ಮಧ್ಯ ರೈಲ್ವೆ: 16 ಹುದ್ದೆಗಳು
*ಈಶಾನ್ಯ ರೈಲ್ವೆ: 9 ಹುದ್ದೆಗಳು ಖಾಲಿ ಇವೆ
ಅರ್ಜಿ ಸಲ್ಲಿಸುವವರ ಗಮನಕ್ಕೆ
ಈ ಹುದ್ದೆಗಳ ಸೇರಬಯಸುವವರು ಮೊದಲು ಅಧಿಕೃತ ಜಾಲತಾಣ rrbapply.gov.in ಗೆ ಭೇಟಿ ನೀಡಬೇಕು. ಅಲ್ಲಿ ಹೊಸ ಅಕೌಂಟ್ ತೆರೆದು ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಅಗತ್ಯ ವಿವರ ನಮೂಸಿದಿ ಲಾಗಿನ್ ಆಗಬೇಕು. ಬಳಿಕ ಅಲ್ಲಿ ಕೇಳಲಾಗುವ ವಿವರಗಳನ್ನು ದಾಖಲಿಸಿ ಅರ್ಜಿ ಸಲ್ಲಿಸಬೇಕು. ಭರ್ತಿ ಬಳಿಕ ಅರ್ಜಿ ಪ್ರತಿ ತೆಗೆದಿಟ್ಟುಕೊಳ್ಳಬೇಕು.
ಅರ್ಜಿ ಭರ್ತಿ ಜೊತೆಗೆ ಆಯಾ ಜಾತಿ ವರ್ಗದ ಜನರಿಗೆ ನಿಗದಿತ ಶುಲ್ಕ ವಿಧಿಸಲಾಗಿದೆ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ಹಾಗೂ ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 250 ರೂ. ಶುಲ್ಕ ವಿಧಿಸಲಾಗಿದೆ. ಶುಲ್ಕವನ್ನು ಆಯಾ ದಿನಾಂಕದೊಳಗೆ ಪಾವತಿಸಬೇಕೆಂದು ತಿಳಿಸಲಾಗಿದೆ.












Click it and Unblock the Notifications