ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 15ರಿಂದ ರೈಲ್ವೆ ನೇಮಕಾತಿ; ಅಭ್ಯರ್ಥಿಗಳಿಗೆ ಸೂಚನೆ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 02: ಭಾರತೀಯ ರೈಲ್ವೆ 1.4 ಲಕ್ಷ ಹುದ್ದೆಗಳ ಭರ್ತಿಗೆ ಡಿಸೆಂಬರ್ 15ರಿಂದ ಪರೀಕ್ಷೆಗಳನ್ನು ಆರಂಭಿಸಲಿದೆ. ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುವವರಿಂದ ಎಚ್ಚರವಾಗಿರಿ ಎಂದು ಅಭ್ಯರ್ಥಿಗಳಿಗೆ ಮನವಿ ಮಾಡಲಾಗಿದೆ.

ರೈಲ್ವೆ ಇಲಾಖೆ ನೇಮಕಾತಿ ಸಂಪೂರ್ಣ ಕಂಪ್ಯೂಟರೀಕೃತವಾಗಿದೆ. ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ಜನರು ಅಭ್ಯರ್ಥಿಗಳಿಂದ ಹಣ ಪಡೆದು ವಂಚನೆ ಮಾಡುವ ಸಾಧ್ಯತೆ ಇದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

UPSC ನೇಮಕಾತಿ 2020: 36 ವಿವಿಧ ಹುದ್ದೆಗೆ ಅರ್ಜಿ ಅಹ್ವಾನ UPSC ನೇಮಕಾತಿ 2020: 36 ವಿವಿಧ ಹುದ್ದೆಗೆ ಅರ್ಜಿ ಅಹ್ವಾನ

ಹಣ ನೀಡಿ, ಪ್ರಭಾವ ಬೀರಿ, ಸುಳ್ಳು ಆಮಿಷಗಳನ್ನು ವೊಡ್ಡಿ ಕೆಲಸ ಕೊಡಿಸುವ ಬಗ್ಗೆ ಅಭ್ಯರ್ಥಿಗಳನ್ನು ವಂಚಿಸಬಹುದು. ಕೆಲಸ ಪಡೆಯಲು ನಿಯಮ ಬಾಹಿರ ಕೃತ್ಯಗಳಲ್ಲಿ ತೊಡಗುವ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ; ಬೆಂಗಳೂರಲ್ಲಿ ಕೆಲಸ ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ; ಬೆಂಗಳೂರಲ್ಲಿ ಕೆಲಸ

Railway Jobs Exam From December 15 Direction To Aspirants

ಯಾರಾದರೂ ಕೆಲಸ ಕೊಡಿಸುವ ಆಮಿಷ ವೊಡ್ಡಿದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಯಾವುದೇ ಸಮಯದಲ್ಲಿ ಗೊಂದಲಗಳು ಉಂಟಾದರೆ 080-233300378 ಸಂಖ್ಯೆಗೆ ಕರೆ ಮಾಡಿ ಎಂದು ನೈಋತ್ಯ ರೈಲ್ವೆ ಮನವಿ ಮಾಡಿದೆ.

ಕೆಪಿಟಿಸಿಎಲ್ ನೇಮಕಾತಿ ರದ್ದು; ಅಭ್ಯರ್ಥಿಗಳ ಪ್ರತಿಭಟನೆ ಕೆಪಿಟಿಸಿಎಲ್ ನೇಮಕಾತಿ ರದ್ದು; ಅಭ್ಯರ್ಥಿಗಳ ಪ್ರತಿಭಟನೆ

2019ರ ಫೆಬ್ರವರಿಯಲ್ಲಿ ಭಾರತೀಯ ರೈಲ್ವೆ ಮೂರು ವಿಧದ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಆದೇಶವನ್ನು ಹೊರಡಿಸಿತ್ತು. ತಾಂತ್ರಿಕೇತರ ಹುದ್ದೆಗಳು 35,208. 1,663 ಐಸೋಲೇಟೆಡ್ & ಮಿನಿಸ್ಟ್ರಿಯಲ್ ವಿಭಾಗ. 1,03,769 ಲೆವೆಲ್ 1ರ ಹುದ್ದೆಗಳ ನೇಮಕಾತಿ ಆದೇಶ ಪ್ರಕಟಿಸಿತ್ತು.

ಡಿಸೆಂಬರ್ 15ರಿಂದ ಈ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗಳು ಆರಂಭವಾಗಲಿದೆ. ಸಂಪೂರ್ಣ ಕಂಪ್ಯೂಟರೀಕೃತವಾಗಿ, ಪಾರದರ್ಶಕವಾಗಿ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಆಮಿಷಗಳಿಗೆ ಬಲಿಯಾಗಬಾರದು ಎ ಎಂದು ಮನವಿ ಮಾಡಲಾಗಿದೆ.

English summary
South western railway advises job aspirants not to fall prey for false promises from unscrupulous individuals of getting job in railways. Railway conducting exam from December 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X