ಪವರ್‌ಗ್ರಿಡ್ ನೇಮಕಾತಿ 2022: 211 ಡಿಪ್ಲೊಮಾ ಟ್ರೈನಿ ಹುದ್ದೆ ಖಾಲಿ- ಅರ್ಜಿ ಸಲ್ಲಿಕೆ ವಿಧಾನ, ಸಂಬಳದ ಮಾಹಿತಿ
ನವದೆಹಲಿ, ಡಿಸೆಂಬರ್ 14: ಎಲೆಕ್ಟ್ರಿಕಲ್, ಸಿವಿಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಡಿಪ್ಲೊಮಾ ಟ್ರೈನಿ ಹುದ್ದೆಗೆ ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ಅಧಿಸೂಚನೆಯನ್ನು ಪ್ರಕಟಿಸಿದೆ.
ಅಭ್ಯರ್ಥಿಗಳು 2022, ಡಿಸೆಂಬರ್ 9ರಿಂದ 31 ರ ವರೆಗೆ ನಮೂದಿಸಿದ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಪಟ್ಟ ಕ್ಷೇತ್ರದಲ್ಲಿ ಡಿಪ್ಲೊಮಾವನ್ನು ಹೊಂದಿರಬೇಕು. ಅಂತಹ ಅಭ್ಯರ್ಥಿಗಳ ವಯಸ್ಸಿನ ಮಿತಿ 27 ವರ್ಷಗಳಾಗಿರಬೇಕು. ಬಿ.ಟೆಕ್‌ನಂತಹ ಉನ್ನತ ತಾಂತ್ರಿಕ ಅರ್ಹತೆ / ಬಿಇ / ಎಂ.ಟೆಕ್/ ME ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ. ದೂರ ಶಿಕ್ಷಣದ ಮೂಲಕ ಪಡೆದ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ.

ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ವಲಯ ಮತ್ತು ದೆಹಲಿ ಕಾರ್ಪೊರೇಟ್ ಪ್ರದೇಶದಲ್ಲಿ ಖಾಲಿ ಹುದ್ದೆಗಳು ಲಭ್ಯವಿವೆ.
ಪವರ್‌ಗ್ರಿಡ್ PGCIL ಡಿಪ್ಲೊಮಾ ಟ್ರೈನಿ ನೇಮಕಾತಿ 2022 ಗಾಗಿ ಅರ್ಹತಾ ಮಾನದಂಡ
ಶೈಕ್ಷಣಿಕ ಅರ್ಹತೆ
ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್) - ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಡಿಪ್ಲೊಮಾ ಟ್ರೈನಿ (ಸಿವಿಲ್) - ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಾನಿಕ್ಸ್) - ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
PGCIL ಡಿಪ್ಲೋಮಾ ಟ್ರೈನಿ ಸಂಬಳ
ಸ್ಟೈಪೆಂಡ್ - ತಿಂಗಳಿಗೆ 27,500 ರೂಪಾಯಿ
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳು ಜೂನಿಯರ್ ಇಂಜಿನಿಯರ್ Gr-IV (S1) ಆಗಿ ಸೇರಿಕೊಳ್ಳುತ್ತಾರೆ. ವೇತನ ಶ್ರೇಣಿಯಲ್ಲಿ ಮೇಲ್ವಿಚಾರಣಾ ವರ್ಗ ರೂ. 25,000 -3%- 1,17,500 (IDA)
PGCIL ಡಿಪ್ಲೊಮಾ ಟ್ರೈನಿ ನೇಮಕಾತಿ 2022 ಗಾಗಿ ಆಯ್ಕೆ ಮಾನದಂಡಗಳು
ಲಿಖಿತ ಪರೀಕ್ಷೆಯ (ಕಂಪ್ಯೂಟರ್ ಪರೀಕ್ಷೆ) ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.

ಭಾಗ-I ತಾಂತ್ರಿಕ ಜ್ಞಾನ ಪರೀಕ್ಷೆಯನ್ನು (TKT) ಒಳಗೊಂಡಿರುತ್ತದೆ. ಜೊತೆಗೆ 120 ಪ್ರಶ್ನೆಗಳು ಇರುತ್ತವೆ. ಆಯಾ ವಿಭಾಗದಿಂದ ನಿರ್ದಿಷ್ಟ ಪ್ರಶ್ನೆಗಳನ್ನು ಹೊಂದಿರುತ್ತವೆ.
ಭಾಗ-II vocabulary, verbal comprehension, quantitative aptitude, reasoning ability, data sufficiency and interpretation, numerical ability, ಇತ್ಯಾದಿಗಳ ಮೇಲೆ 50 ಪ್ರಶ್ನೆಗಳೊಂದಿಗೆ ಸೂಪರ್‌ವೈಸರಿ ಆಪ್ಟಿಟ್ಯೂಡ್ ಟೆಸ್ಟ್ (SAT) ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
POWERGRIG PGCIL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ- @powergrid.in
Go to → Careers Section → Job Opportunities → Openings and then "Recruitment of Diploma Trainee (Electrical/Civil/Electronics) for Regions and Corporate Centre".
ಹುದ್ದೆಗೆ ನೋಂದಾಯಿಸಿ
ನಿಮ್ಮ ವಿವರಗಳನ್ನು ಭರ್ತಿ ಮಾಡಿ
ನಿಮ್ಮ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಶುಲ್ಕ: ರೂ. 300












Click it and Unblock the Notifications