ಕರ್ನಾಟಕ; ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಬದಲಾವಣೆ

ಬೆಂಗಳೂರು, ಸೆಪ್ಟೆಂಬರ್ 07: ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ 36,261 ಕಾನ್ಸ್‌ಟೇಬಲ್‌ಗಳ ನೇಮಕಾತಿ ನಡೆಯುತ್ತಿದೆ.

Recommended Video

      ಹೇಳೋರಿಲ್ಲ ಕೇಳೋರಿಲ್ಲ ಸುವರ್ಣಸೌಧವನ್ನ!! ಪಾಚಿ ಕಟ್ಟಿ ಅದ್ವಾನವಾಗಿ ಹೋಗಿದೆ | Oneindia Kannada

      ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ನಿಯಮಗಳನ್ನು ಬದಲಾವಣೆ ಮಾಡಿ ಸೆಪ್ಟೆಂಬರ್ 5ರಂದು ಆದೇಶ ಹೊರಡಿಸಲಾಗಿದೆ. ಹೊಸ ನೇಮಕಾತಿ ನಿಯಮದ ಅನ್ವಯ ಇಲಾಖಾ ಅಭ್ಯರ್ಥಿಗಳಿಗೆ ಶೇ 10ರಷ್ಟು ಮೀಸಲಾತಿ, 5 ವರ್ಷದ ವಯೋಮಿತಿ ಸಡಿಲಿಕೆ ಇರಲಿದೆ.

      ಕೆಎಸ್‌ಆರ್‌ಪಿ, ಸಿಎಎಆರ್, ಐಎಎಸ್‌ಎಫ್ ಸೇರಿದಂತೆ ಬೇರೆ ಕಡೆ ಪ್ರೊಬೆಷನರಿಯಾಗಿ 5 ವರ್ಷ ಕಾರ್ಯ ನಿರ್ವಹಣೆ ಮಾಡಿದವರಿಗೆ ಈ ಮೀಸಲಾತಿ ಸಿಗಲಿದೆ.

      Police Constables Recruitment Karnataka Changed Rule

      ಹೊಸ ನಿಯಮಗಳ ಪ್ರಕಾರ ಶೇ 67.5ರಷ್ಟು ಪುರುಷರು, ಶೇ 22.5ರಷ್ಟು ಮಹಿಳೆಯರ ನೇಮಕವಾಗಲಿದೆ. ಉಳಿದ ಶೇ 10ರಷ್ಟು ಹುದ್ದೆಗಳಿಗೆ ಇಲಾಖಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತಿದೆ.

      ಅಭ್ಯರ್ಥಿಗಳು ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ/ಎಸ್‌ಟಿ/ಒಬಿಸಿ ಅಭ್ಯರ್ಥಿಗಳಿಗೆ 27 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

      ಇಲಾಖಾ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದವರಿಗೆ 31, ಎಸ್‌ಸಿ/ಎಸ್‌ಟಿ/ಓಬಿಸಿ ಅಭ್ಯರ್ಥಿಗಳಿಗೆ 33 ವರ್ಷದ ವಯೋಮಿತಿ ನಿಗದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+