Paytm lay off: ಉದ್ಯೋಗಿಗಳನ್ನು ವಜಾ ಮಾಡಿ, ಬೇರೆಡೆ ಕೆಲಸ ಕೊಡಿಸುತ್ತಂತೆ ಪೇಟಿಎಂ!
ನವದೆಹಲಿ, ಜೂನ್. 11: ಪೇಟಿಎಂ ಬ್ರ್ಯಾಂಡ್‌ನ ಮಾಲೀಕ ಫಿನ್‌ಟೆಕ್ ಸಂಸ್ಥೆ One97 ಕಮ್ಯುನಿಕೇಷನ್ಸ್, ಹಲವು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ವಜಾಗೊಳಿಸಿದ ಉದ್ಯೋಗಿಗಳಿಗೆ ಔಟ್‌ಪ್ಲೇಸ್‌ಮೆಂಟ್ ಬೆಂಬಲವನ್ನು ಒದಗಿಸುತ್ತಿದೆ ಎಂದು ಕಂಪನಿಯ ಹೇಳಿಕೆಯೊಂದು ತಿಳಿಸಿದೆ.
ಮಾರ್ಚ್ 2024 ತ್ರೈಮಾಸಿಕದಲ್ಲಿ ಪೇಟಿಎಂ ನ ಉದ್ಯೋಗಿಗಳ ಸಂಖ್ಯೆಯು ಸುಮಾರು 36,521 ಸಿಬ್ಬಂದಿಗೆ ತ್ರೈಮಾಸಿಕ ಆಧಾರದ ಮೇಲೆ ಕುಸಿದಿದೆ. ಅಂದರೆ ಬರೋಬ್ಬರಿ 3,500 ಉದ್ಯೋಗಿಗಳನ್ನು ವಜಾ ಮಾಡಿದೆ. ಮುಖ್ಯವಾಗಿ ಪೇಟಿಎಂ ಪಾವತಿಗಳ ಬ್ಯಾಂಕ್ ಸೇವೆಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧದ ಪ್ರಭಾವದಿಂದಾಗಿ ಈ ಎಲ್ಲಾ ವಜಾಗಳು ನಡೆಯುತ್ತಿವೆ.

"One97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL) ಕಂಪನಿಯ ಪುನರ್ರಚನೆಯ ಪ್ರಯತ್ನಗಳ ಭಾಗವಾಗಿ ರಾಜೀನಾಮೆ ನೀಡಿದ ಉದ್ಯೋಗಿಗಳಿಗೆ ಔಟ್‌ಪ್ಲೇಸ್‌ಮೆಂಟ್ ಬೆಂಬಲವನ್ನು ಒದಗಿಸುತ್ತಿದೆ. ಕಂಪನಿಯ ಮಾನವ ಸಂಪನ್ಮೂಲ ತಂಡಗಳು ಪ್ರಸ್ತುತ ನೇಮಕ ಮಾಡಿಕೊಳ್ಳುತ್ತಿರುವ 30 ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿವೆ. ತಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿದ ಉದ್ಯೋಗಿಗಳಿಗೆ ಸಹಾಯವನ್ನು ಒದಗಿಸುತ್ತಿವೆ. ತಕ್ಷಣ ಅವರಿಗೆ ಕೆಲಸ ಕೊಡಿಸುತ್ತಿದೆ" ಎಂದು ಕಂಪನಿ ಸೋಮವಾರ ತಿಳಿಸಿದೆ.
ಆದರೂ, ವಜಾ ಮಾಡಿದ ಉದ್ಯೋಗಿಗಳ ಸಂಖ್ಯೆಯನ್ನು ಪೇಟಿಎಂ ಬಹಿರಂಗಪಡಿಸಿಲ್ಲ. "ಪೇಟಿಎಂ ಸಹ ಉದ್ಯೋಗಿಗಳಿಗೆ ನೀಡಬೇಕಾದ ಬೋನಸ್‌ಗಳನ್ನು ವಿತರಿಸುತ್ತಿದೆ, ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಚ್ 15 ರಿಂದ ಪೇಟಿಎಂ ನ ಸಹವರ್ತಿಯಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL), ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಗ್ರಾಹಕ ಖಾತೆಗಳು, ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ, ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ನಿರ್ಬಂಧಿಸಿದೆ.
ಪೇಟಿಎಂ ತನ್ನ ಪಾವತಿಗಳ ಬ್ಯಾಂಕ್‌ಗೆ ಸಂಬಂಧಿಸಿದ ವಹಿವಾಟುಗಳ ಮೇಲೆ RBI ವಿಧಿಸಿದ ನಿಷೇಧದ ನಂತರ 2024 ರ ಜನವರಿ-ಮಾರ್ಚ್‌ನಲ್ಲಿ 550 ಕೋಟಿ ರೂಪಾಯಿಗಳನಷ್ಟವನ್ನು ವರದಿ ಮಾಡಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪನಿಯು 167.5 ಕೋಟಿ ರೂಪಾಯಿ ನಷ್ಟವನ್ನು ದಾಖಲಿಸಿತ್ತು.












Click it and Unblock the Notifications