ಧಾರವಾಡ; ಅರೆಕಾಲಿಕ ಉಪನ್ಯಾಸಕರ ಹುದ್ದೆಗೆ ಸಂದರ್ಶನ
ಧಾರವಾಡ, ನವೆಂಬರ್ 22; ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಮೂರು ಅರೆಕಾಲಿಕ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ನವೆಂಬರ್ 23ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ತಾತ್ಕಾಲಿಕ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮೂರು ವರ್ಷಗಳ ಬೋಧನಾ ಅನುಭವದೊಂದಿಗೆ ಸಂಖ್ಯಾಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಪದವಿಯೊಂದಿಗೆ ವ್ಯಾಪಾರ ಅಂಕಿಅಂಶಗಳ ಜ್ಞಾನ ಹೊಂದಿರುವವರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಕೃಷಿ ಸಂಖ್ಯಾಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರುವ ಅಥವಾ ಸಂಖ್ಯಾಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಪದವಿಯೊಂದಿಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು.

ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ನವೆಂಬರ್ 23ರಂದು ಬೆಳಗ್ಗೆ 11 ಘಂಟೆಗೆ ಧಾರವಾಡದ ಕೃಷಿ ಮಹಾವಿದ್ಯಾಲಯ ಡೀನ್ (ಕೃಷಿ) ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಕೃವಿವಿಯ ವೆಬ್‌ಸೈಟ್ www.uasd.eduಕ್ಕೆ ಭೇಟಿ ನೀಡಬಹುದು.
ವಿದೇಶದಲ್ಲಿ ಉದ್ಯೋಗಕ್ಕೆ ನೋಂದಣಿ; ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಕುವೈತ್ ದೇಶದಲ್ಲಿ ಮನೆಕೆಲಸಕ್ಕೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದು, ಅರ್ಹ ಮಹಿಳೆಯರು ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ಬಳ್ಳಾರಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು https://kvtsdc.com ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು. ವಯಸ್ಸು 30 ರಿಂದ 45 ವರ್ಷದವಾಗಿರಬೇಕು. ಅನುಭವಿಗಳ ಮತ್ತು ಹೊಸಬರಿಗೆ ಅವಕಾಶವಿದೆ.
ವೇತನ 30 ಸಾವಿರದಿಂದ 32 ಸಾವಿರದವರೆಗೆ ಇರುತ್ತದೆ. 2 ವರ್ಷದ ಅವಧಿಯವರೆಗೆ ಒಪ್ಪಂದ ಇರುತ್ತದೆ. ವೀಸಾ, ವೀಸಾ ಸ್ಟಾಂಪಿಂಗ್, ವಿಮಾನ ಟಿಕೆಟ್, ಪಿಸಿಸಿ, ಪಿಡಿಓಟಿ, ಎಮಿಗ್ರೇಷನ್ ಕ್ಲಿಯರನ್ಸ್ ಹಾಗೂ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಎಸ್‍ಪಿ ಸರ್ಕಲ್ ಹತ್ತಿರದ ಪಾರ್ವತಿ ನಗರದ ಬಸವ ಭವನ ರಸ್ತೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸದ ಎದುರಿನ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 8073852104, 9964502514.












Click it and Unblock the Notifications