ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ 4.2 ಲಕ್ಷ ಹುದ್ದೆಗಳು ಖಾಲಿ
ನವದೆಹಲಿ, 21: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 4.2 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ಗುರುವಾರ ತಿಳಿಸಿದರು.
ವಿವಿಧ ಸಚಿವಾಲಯಗಳಿಗೆ ಮಂಜೂರಾಗಿರುವ 36,49,468 ಹುದ್ದೆಗಳ ಪೈಕಿ 4,20,547 ಹುದ್ದೆಗಳನ್ನು ಇನ್ನಷ್ಟೇ ಭರ್ತಿ ಮಾಡಬೇಕಿದೆ ಎಂದು ಅವರು ಹೇಳಿದರು.

ಮಾರ್ಚ್ 1, 2015 ರಂತೆ ಕೇಂದ್ರ ಸರ್ಕಾರ ನಾಗರಿಕ ಉದ್ಯೋಗಿಗಳ ವೇತನ ಮತ್ತು ಅನುಮತಿಗಳ ವಾರ್ಷಿಕ ವರದಿಯ ಪ್ರಕಾರ (2015-16) ಈ ಸಂಖ್ಯೆ ಎಂದು ಅವರು ತಿಳಿಸಿದರು.












Click it and Unblock the Notifications