
ಹಾವೇರಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ: 62 ಅಪ್ರೆಂಟಿಸ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಹಾವೇರಿ, ಅಕ್ಟೋಬರ್ 05: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾವೇರಿಯು ಪ್ರಸಕ್ತ ಸಾಲಿನಲ್ಲಿ ಖಾಲಿ ಇರುವ 60ಕ್ಕೂ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಹಾವೇರಿ ವ್ಯಾಪ್ತಿಯಲ್ಲಿ ರಾಜ್ಯದ ಸರ್ಕಾರದ ವೃತ್ತಿ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಇದೇ ತಿಂಗಳ ಅಕ್ಟೋಬರ್ 17ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯು ನೇರವಾಗಿ ನಡೆಯಲಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಒಟ್ಟು 62 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.7,708 ರಿಂದ 8,093 ವೇತನ ನೀಡಲಾಗುವುದು. ಹಾವೇರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಇದೊಂದು ಸುವರ್ಣ ಅವಕಾಶವಾಗಿದೆ.
ನಿಗದಮದಲ್ಲಿ ಅಪ್ರೆಂಟಿಸ್ ಎಲೆಕ್ಟ್ರಿಷಿಯನ್ 15 ಖಾಲಿ ಹುದ್ದೆಗಳಿವೆ, ಅದೇ ರೀತಿ ಎಂವಿಬಿಬಿ 6, ಫಿಟ್ಟರ್ 10, ವೆಲ್ಡರ್ 2,
ಮೆಕ್ಯಾನಿಕ್ ಡೀಸೆಲ್ 10, ಪೇಂಟರ್ 4, ಎಲೆಕ್ಟ್ರಿಕ್ ಮೆಕ್ಯಾನಿಕ್ 10, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ 5 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಿಕೊಳ್ಳಲು ನಿಗಮ ಅಧಿಸೂಚನೆ ಹೊರಡಿಸಿದೆ.
ಶೈಕ್ಷನಿಕ ಅರ್ಹತೆ ಏನು?
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಐಟಿಐ ಪೂರ್ಣಗೊಳಿಸಿರಬೇಕು. ಆಯಾ ಹುದ್ದೆಗಳಿಗೆ ತಕ್ಕಂತೆ ಪ್ರತ್ಯೇಕ ಮಾನದಂಡಗಳು, ಅರ್ಹತೆಗಳನ್ನು ಅರ್ಜಿ ಸಲ್ಲಿಸುವವರು ಹೊಂದಿರಬೇಕಿದೆ. ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಹೇಗೆ ಅರ್ಜಿ ಸಲ್ಲಿಸಬೇಕು?
NWKRTC ಅಪ್ರೆಂಟಿಸ್ ಉದ್ಯೋಗ ಆಕಾಂಕ್ಷಿಗಳು ಮೊದಲು ಮೊದಲು ನಿಗಮದ ಅಧಿಕೃತ ವೆಬ್‌ಸೈಟ್ @nwkrtc.karnataka.gov.in ಗೆ ಭೇಟಿ ನೀಡಿ. ನೀವು ಅರ್ಜಿ ಸಲ್ಲಿಸಲಿರುವ NWKRTC ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ. ಅಪ್ರೆಂಟಿಸ್ ಉದ್ಯೋಗಗಳ ಅಧಿಸೂಚನೆಯನ್ನು ತೆರೆಯಿರಿ.
ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅಧಿಸೂಚನೆಯ ಪ್ರಕಾರ ನೀವು ಅರ್ಹರಾಗಿದ್ದರೆ, ಯಾವುದೇ ತಪ್ಪುಗಳಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ. ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ) ಮತ್ತು ಅಕ್ಟೋಬರ್ 17ರೊಳಗೆ ಸೂಕ್ತ ದಾಖಲಾತಿಗಳ ಜೊತೆಗೆ ಅರ್ಜಿಯನ್ನು ಸಲ್ಲಿಸಿ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ಕೊಡಿ ಎಂದು ಪ್ರಕಟಣೆ ತಿಳಿಸಿದೆ.