ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By: Ramesh
Subscribe to Oneindia Kannada

ಬೆಂಗಳೂರು, ಜನವರಿ. 20 : ರಾಷ್ಟ್ರೀಯ ತನಿಖಾ ಸಂಸ್ಥೆಯು ಖಾಲಿ ಇರುವ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಮತ್ತು ಅಸಿಸ್ಟೆಂಟ್ ಇನ್ಸ್ ಪೆಕ್ಟರ್ ಒಟ್ಟು 111 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಜನವರಿ 23ರೊಳಗೆ ಅರ್ಜಿ ಸಲ್ಲಿಸಬೇಕು.

nia-recruitment-2017-inspector-si-asi-111-vacancies

* 23 ಹುದ್ದೆಗಳು: ಇನ್ಸ್ ಪೆಕ್ಟರ್
ವೇತನ: Level-7 PB-2 ಜತೆಗೆ 4600.

* 54 ಹುದ್ದೆಗಳು: ಸಬ್ ಇನ್ಸ್ ಪೆಕ್ಟರ್
ವೇತನ: Level-6 PB-2 ಜತೆಗೆ 4200.

* 34 ಹುದ್ದೆಗಳು: ಅಸಿಸ್ಟೆಂಟ್ ಇನ್ಸ್ ಪೆಕ್ಟರ್
ವೇತನ: Level-5 PB-2 ಜತೆಗೆ 2800.

ಸ್ಥಳ: ದೆಹಲಿ, ಲಖನೌ, ಗುವಾಹಟ್ಟಿ, ಕೊಲ್ಕತ್ತ, ಮುಂಬೈ, ಹೈದರಬಾದ್, ಕೊಚ್ಚಿ, ಜಮ್ಮು ಮತ್ತು ರಾಯ್ ಪುರ

ಮೀಸಲು: ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವ ವಿಳಾಸ : DIG (Adm), NIA HQ, 7th Floor, NDCC-II Building, Jai Singh Road, New Delhi-110001.

ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
National Investigation Agency (NIA), New Delhi invites applications from eligible officials for recruitment of Inspector, Sub Inspector and Assistant Sub Inspector on deputation basis.
Please Wait while comments are loading...