NHAI Recruitment 2023: ವಿವಿಧ 62 ಹುದ್ದೆಗಳು ಖಾಲಿ ಇವೆ, ವೇತನ, ಆಯ್ಕೆ ಬಗ್ಗೆ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 13: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಸದಾವಕಾಶವಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತನ್ನಲ್ಲಿ ಖಾಲಿ ಇರುವ 62 ವ್ಯವಸ್ಥಾಪಕರು, ಕಿರಿಯ ಹಿಂದಿ ಭಾಷಾನುವಾದಕರ (ಟ್ರಾನ್ಸ್ಲೇಟರ್) ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 27 ರೊಳಗೆ ಅರ್ಜಿ ಸಲ್ಲಿಸಬಹುದು.

ಇಂದಿನಿಂದ ಅಕ್ಟೋಬರ್ 13ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮೊದಲು ನೇಮಕಾತಿ ಪೂರ್ಣ ಮಾಹಿತಿ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಹಿತಿ
ಸಂಸ್ಥೆ- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಹುದ್ದೆಗಳ ಹೆಸರು - ಮ್ಯಾನೇಜರ್, ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್
ಖಾಲಿ ಹುದ್ದೆಗಳ ಸಂಖ್ಯೆ- 62
ಮಾಸಿಕ ವೇತನ- ₹1,23,100 ನಿಂದ 2,15,900 ರೂಪಾಯಿ
ಉದ್ಯೋಗದ ಸ್ಥಳ- ಭಾರತದಲ್ಲಿ ಎಲ್ಲಿ ಬೇಕಾದರು ಪೋಸ್ಟಿಂಗ್
ಹುದ್ದೆಯ ಇತರ ವಿವರ
ಉಪ ಪ್ರಧಾನ ವ್ಯವಸ್ಥಾಪಕ (ಟೆಕ್ನಿಕಲ್)- 20
ಪ್ರಧಾನ ವ್ಯವಸ್ಥಾಪಕ (ಟೆಕ್ನಿಕಲ್)- 10
ವ್ಯವಸ್ಥಾಪಕ (ಟೆಕ್ನಿಕಲ್)- 30
ಕಿರಿಯ ಹಿಂದಿ ಭಾಷಾನುವಾದಕ- 2

ಶೈಕ್ಷಣಿಕ ಅರ್ಹತೆ
ಪ್ರಧಾನ ವ್ಯವಸ್ಥಾಪಕ (ಟೆಕ್ನಿಕಲ್)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಉಪ ಪ್ರಧಾನ ವ್ಯವಸ್ಥಾಪಕ (ಟೆಕ್ನಿಕಲ್)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ವ್ಯವಸ್ಥಾಪಕ (ಟೆಕ್ನಿಕಲ್)- ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್- ಸ್ನಾತಕೋತ್ತರ ಪದವಿ
ವೇತನ ವಿವರ
ಪ್ರಧಾನ ವ್ಯವಸ್ಥಾಪಕ (ಟೆಕ್ನಿಕಲ್) ಹುದ್ದೆಗೆ ತಿಂಗಳಿಗೆ- ರೂ. 1,23,100 ನಿಂದ 2,15,900 ರೂ.
ಉಪ ಪ್ರಧಾನ ವ್ಯವಸ್ಥಾಪಕ (ಟೆಕ್ನಿಕಲ್)ಹುದ್ದೆಗೆ ತಿಂಗಳಿಗೆ- ರೂ.78,800 ನಿಂದ 2,09,200 ರೂ.
ವ್ಯವಸ್ಥಾಪಕ (ಟೆಕ್ನಿಕಲ್)ಹುದ್ದೆಗೆ ತಿಂಗಳಿಗೆ- ರೂ. 67,700 ನಿಂದ 2,08,700 ರೂ.
ಕಿರಿಯಾ ಹಿಂದಿ ಭಾಷಾನುವಾದಕರು ಹುದ್ದೆಗೆ ತಿಂಗಳಿಗೆ- ರೂ. 35,400 ನಿಂದ 1,12,400ರೂ.
ವಯೋಮಿತಿ- ವೇತನ
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವ ಅಭ್ಯರ್ಥಿಗಳಿಗೆ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಆಫ್ಲೈನ್ ಮೂಲಕ ಜನರಲ್ ಮ್ಯಾನೇಜರ್ (ತಾಂತ್ರಿಕ), ಡೆಪ್ಯುಟಿ ಜನರಲ್ ಮ್ಯಾನೇಜರ್ (ತಾಂತ್ರಿಕ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು DGM (HR & Admn-III)-NG, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ಲಾಟ್ ನಂ.G-5&6, ಸೆಕ್ಟರ್-10, ದ್ವಾರಕಾ, ನವದೆಹಲಿ-110075 ಇಲ್ಲಿಗೆ ಅರ್ಜಿ ಕಳುಹಿಸಬೇಕು.
ಇನ್ನೂ ಮ್ಯಾನೇಜರ್ (ತಾಂತ್ರಿಕ), ಜೂನಿಯರ್ ಹಿಂದಿ ಭಾಷಾಂತರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ DGM (HR & Admn-I)-SKM, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪ್ಲಾಟ್ ನಂ.G-5&6, ಸೆಕ್ಟರ್-10, ದ್ವಾರಕಾ, ನವದೆಹಲಿ-110075 ಇಲ್ಲಿಗೆ ಕಳುಹಿಸುವಂತೆ ಪ್ರಾಧಿಕಾರ ತಿಳಿಸಿದೆ.












Click it and Unblock the Notifications