1353 ಗ್ರೂಪ್‌ ’ಸಿ‘ ಹುದ್ದೆಗಳಿಗೆ ಕೆಪಿಎಸ್ ಸಿ ಅರ್ಜಿ ಆಹ್ವಾನ

ಬೆಂಗಳೂರು, ಅಕ್ಟೋಬರ್, 05 : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಗ್ರೂಪ್ ಸಿ ವೃಂದದ ತಾಂತ್ರಿಕೇತರ ಸಹಾಯಕರು, ಶಿಕ್ಷಕರು, ನಿಲಯಪಾಲಕರು, ನಿರೀಕ್ಷಕರು ಹಾಗೂ ಮೇಲ್ವಿಚಾರಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಅಕ್ಟೋಬರ್ 7 ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 7,2016. ಸಹಾಯಕರ ಹುದ್ದೆಗಳು(06), ನಿರೀಕ್ಷಕರು(02), ಮುಖ್ಯಾಧಿಕಾರಿ ಶ್ರೇಣಿ-2( 07), ಮುರಾರ್ಜಿ ದೇಸಾಯಿ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರು(31), ಆಂಗ್ಲ ಭಾಷಾ ಶಿಕ್ಷಕರು(41), ಉರ್ದು ಶಿಕ್ಷಕರು(41), ಗಣಿತ ಶಿಕ್ಷಕರು(21), ಸಮಾನ್ಯ ವಿಜ್ಞಾನ ಶಿಕ್ಷಕರು(18), ದೈಹಿಕ ಶಿಕ್ಷಕರು(26), ಕಂಪ್ಯೂಟರ್ ಶಿಕ್ಷಕರು(24), ಉಪನೊಂದಣಾಧಿಕಾರಿ(63) ಸೇರಿದಂತೆ ಇನ್ನು ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.[ಕೆಪಿಎಸ್ ಸಿ ಅರ್ಜಿ ಆಹ್ವಾನ: ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ ಮಾಡಿ]

KPSC

ಒಟ್ಟು ಹುದ್ದೆ: 1353

ಅರ್ಜಿ ಸಲ್ಲಿಕೆ ಪ್ರಾರಂಭ: ಅಕ್ಟೋಬರ್ 7
ಅರ್ಜಿ ಸಲ್ಲಿಸಲು ಕೊನೇ ದಿನ: ನವೆಂಬರ್ 7
ಅರ್ಜಿ ಶುಲ್ಕ: ಸಾಮಾನ್ಯ /ಒಬಿಸಿ- 300 ರು, ಎಸ್ಸಿ/ಎಸ್ಟಿ 25 ರು
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 08-11-2016 (ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ)
ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 35
ವಿದ್ಯಾರ್ಹತೆ: ಪದವಿ/ಬಿಇಡಿ/ಪಿಯುಸಿ/ಎಸ್‌ಎಸ್‌ಎಲ್‌ಸಿ(ಹುದ್ದೆಗಳ ಅನುಸಾರ)
ಸಹಾಯವಾಣಿ : 7899617837 ಮತ್ತು 9901294490 ಮೂಲಕ ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 6-00 ಗಂಟೆಯವರೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಾಲತಾಣ: kpsc.kar.nic.in ಸಂಪರ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+