Mozilla Layoffs: ಸಾವಿರಾರು ಉದ್ಯೋಗಿಗಳ ವಜಾ ಘೋಷಿಸಿದ 'ಮೊಜಿಲ್ಲಾ' ಕಂಪನಿ, ಕಾರಣವೇನು?
ಬೆಂಗಳೂರು, ನವೆಂಬರ್ 08: ಇಂಟರ್‌ನೆಟ್ ಸಂಬಂಧಿತ ಅಪ್ಲಿಕೇಶನ್ ಅಭಿವೃದ್ಧಿಪಡಿಸುವ ಮತ್ತು ಸಂಯೋಜಿಸುವ 'ಮೊಜಿಲ್ಲಾ' ಫೌಂಡೇಶನ್‌ನ ಅಂಗಸಂಸ್ಥೆಯಾಗಿರುವ 'ಮೊಜಿಲ್ಲಾ ಕಾರ್ಪೊರೇಶನ್' (Mozilla Layoffs) ನಲ್ಲಿ ಸಹ ನೌಕರರ ಉದ್ಯೋಗ ಕಡಿತ ಮಾಡಲಾಗುತ್ತದೆ. ಹಲವು ಕಾರಣಗಳಿಂದ ಪ್ರತಿಷ್ಠಿತ ಸಂಸ್ಥೆಯು ಉದ್ಯೋಗಿಗಳ ವಜಾ ನಿರ್ಧಾರಕ್ಕೆ ಬಂದಿದೆ. ಇದರಿಂದ ಸಾವಿರಾರು ನೌಕರರಿಗೆ ಭೀತಿ ಉಂಟಾಗಿದೆ.
ಮೂಲಗಳ ಪ್ರಕಾರ, ಮೊಜಿಲ್ಲಾ ಫೌಂಡೇಶನ್ ತನ್ನ ಪ್ರಸ್ತುತ ಉದ್ಯೋಗಿಗಳಲ್ಲಿ ಸುಮಾರು ಶೇಕಡಾ 30 ರಷ್ಟು ವಜಗೊಳಿಸಲು ನಿರ್ಧರಿಸಿದೆ. ಈ ಮೂಲಕ ಐಟಿ ವಲಯದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ಮುಂದುವರಿದಿದೆ ಎನ್ನಬಹುದಾಗಿದೆ. ಮೊಜಿಲ್ಲಾ ನೌಕರ ವಜಾ ಆಗುತ್ತಿದ್ದಂತೆ ಕಮ್ಯೂನಿಕೇಷನ್ ವಿಭಾಗದ ಬ್ರಾಂಡನ್ ಬೊರ್ರಮ್ಯಾನ್ ಅವರು ಪ್ರತಿಕ್ರಿಯಿಸಿದ್ದಾರೆ. ಸಂಸ್ಥೆಯಲ್ಲಿ ಇನ್ನಷ್ಟು ಸುಧಾರಣೆ, ಉದ್ಯೋಗಿ ವಲಯ ಮರು ಸಂಘಟನೆಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಲಾಗಿದೆ.

ಕಂಪನಿಯು ಮುಂದಿನ ಭವಿಷ್ಯದ ದೃಷ್ಟಿಯಿಂದ ಒಂದು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಸುಧಾರಣೆಯ ಕಾರ್ಯಚಟುವಟಿಕೆಯ ಭಾಗವಾಗಿ ಸಂಬಂಧಿಸಿದ ಹುದ್ದೆಗಳಲ್ಲಿರುವವರನ್ನು ತೆಗೆದು ಹಾಕುವ ಪ್ರಕ್ರಿಯೆ ಆರಂಭಿಸಿದ್ದೇವೆ. ಇದು ಅನಿವಾರ್ಯವು ಆಗಿದ್ದು, ಒಟ್ಟಾರೆ ಹುದ್ದೆಗಳ ಶೇಕಡಾ 30ರಷ್ಟು ನೌಕರರು ಈ ವಜಾ ಪ್ರಕ್ರಿಯೆಗೆ ಒಳಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ವಜಾ ಉದ್ದೇಶಿತ ನೌಕರರಿಗೆ ಸಂದೇಶ ರವಾನೆ
ಮೊಜಿಲ್ಲಾ ಫೌಂಡೇಶನ್‌ನ ಕಾರ್ಯ ನಿರ್ವಾಹಕ ನಿರ್ದೇಶಕಿ (Executive Director) ನಬಿಹಾ ಸೈಯದ್ ಅವರು ವಜಾ ಕುರಿತು ಈಗಾಗಲೇ ಉದ್ಯೋಗಿಗಳಿಗೆ ಮೇಲ್ ಮಾಡಿದ್ದಾರೆ. ಇನ್ನು ಮುಂದೆ ನೀವು ಈ ಕಂಪನಿಯ ಭಾಗವಲ್ಲ ಎಂದು ಮೇಲ್ ರವಾನಿಸಿದ್ದಾರೆ. ಇದರಿಂದ ಅನೇಕ ಉದ್ಯೋಗಿಗಳಿಗೆ ಢವ ಢವ ಶುರುವಾಗಿದೆ ಎಂದು 'ಟೆಕ್ ಕ್ರಂಚ್' ವರದಿ ಮಾಡಿದೆ.
ಈ ಮೊಜಿಲ್ಲಾ ಕಂಪನಿಯು ಇಂಟರ್‌ನೆಟ್ ಯುಗ ಆರಂಭವಾದಾಗಿನಿಂದ ತನ್ನದೇ ಆದ ಕಾರ್ಯಾಚರಣೆಯಿಂದ ಗಮನ ಸೆಳೆದಿದೆ. ಮೊಜಿಲ್ಲಾ ಫೈರ್‌ಫಾಕ್ಸ್ ಬ್ರೌಸರ್ ರಚಿಸಿದ್ದ ಮೊಜಿಲ್ಲಾ ಸೇರಿದಂತೆ ಸಾಫ್ಟ್‌ವೇರ್ ವ್ಯವಹಾರ ಐದು ಕಂಪನಿಗಳನ್ನು ಈ ಮೊಜಿಲ್ಲಾ ಫೌಂಡೇಶನ್ ಒಳಗೊಂಡಿದೆ.
ಮೊಜಿಲ್ಲಾ ಐದು ಅಂಗಸಂಸ್ಥೆಗಳು
ಅದರಲ್ಲಿ ಮೊಜಿಲ್ಲಾ ವೆಂಚರ್ಸ್, ತಂತ್ರಜ್ಞಾನಕ್ಕಾಗಿ ಉತ್ತಮ ಹೂಡಿಕೆ ನಿಧಿ: ಮೊಜಿಲ್ಲಾ ಎಐ, ಕೃತಕ ಬುದ್ಧಿಮತ್ತೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ; ಮೊಜಿಲ್ಲಾ ಕಾರ್ಪೊರೇಷನ್, ಗ್ರಾಹಕ ಉತ್ಪನ್ನ ಅಭಿವೃದ್ಧಿ ಕಾರ್ಯಾಚರಣೆಯ MZLA ಮತ್ತು ಓಪನ್ ಸೋರ್ಸ್ ಸಾಫ್ಟ್‌ವೇರ್ ಪ್ರಾಜೆಕ್ಟ್ (Thunderbird) ರಚನೆಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಪ್ರಸಕ್ತ 2024ರ ಆರಂಭದಲ್ಲಿ ಮೊಜಿಲ್ಲಾ ಆಥಿರ್ಕವಾಗಿ ಉತ್ತಮ ಸ್ಥಿತಿಗೆ ತಲುಪಿದರೂ ಸಹಿತ ನಂತರದ ದಿನಗಳಲ್ಲಿ ಆಥಿರ್ಕ ಕಾರಣಗಳಿಂದ ಹಾಗೂ ನೌಕರರ ಮರು ಸಂಘಟನೆಯ ಕಾರಣ ನೀಡಿ ಉದ್ಯೋಗಿಗಳ ವಜಾಗೊಳಿಸಲು ಮುಂದಾಗಿದೆ. ಈವರೆಗೆ ಎಷ್ಟು ಮಂದಿಯನ್ನು ವಜಾಗೆ ಮುಂದಾಗಿದೆ ಎಂಬ ನಿಖರ ಅಂಕಿ ಸಂಖ್ಯೆ ಕಂಪನಿಯು ತಿಳಿಸಿಲ್ಲ ಎಂದು ವರದಿ ಆಗಿದೆ.












Click it and Unblock the Notifications