Get Updates
Get notified of breaking news, exclusive insights, and must-see stories!

ಎಂಎಂಟಿಸಿಯಲ್ಲಿ 26 ಹುದ್ದೆಗಳಿವೆ, ಅರ್ಜಿ ಹಾಕಿ

ಬೆಂಗಳೂರು, ಆಗಸ್ಟ್ 14: ಸರ್ಕಾರಿ ಸ್ವಾಮ್ಯದ ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಂಎಂಟಿಸಿ)ದ 2018-19ರ ಅವಧಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. 26ಕ್ಕೂ ಅಧಿಕ ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 24ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: ಎಂಎಂಟಿಸಿ ಲಿಮಿಟೆಡ್
ಒಟ್ಟು ಹುದ್ದೆಗಳು: 26
ಹುದ್ದೆ ಹೆಸರು: ಡೆಪ್ಯುಟಿ ಮ್ಯಾನೇಜರ್
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24 ಆಗಸ್ಟ್ 2018.

ವಿದ್ಯಾರ್ಹತೆ:
ಡೆಪ್ಯುಟಿ ಮ್ಯಾನೇಜರ್ (ಮಾರ್ಕೆಟಿಂಗ್): ಎಕಾನಾಮಿಕ್ಸ್ / ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಬಿಎ, ವಾಣಿಜ್ಯ, ವಿಜ್ಞಾನ ವಿಷಯದಲ್ಲಿ ಪದವಿ.
ಅಥವಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್/ ಇಂಜಿನಿಯರಿಂಗ್ ಅಥವಾ 2 ವರ್ಷಗಳ ಪೂರ್ಣಾವಧಿ ಪಿಜಿ ಡಿಗ್ರಿ/ ಡಿಪ್ಲೋಮಾ/ ಎಂಬಿಎ/ ಎಂಎಂಎಸ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್/ ಮ್ಯಾನೇಜ್ಮೆಂಟ್/ ಮಾರ್ಕೆಂಟಿಂಗ್/

MMTC Limited recruitment 2018 apply for 26 Deputy Manager Post.

ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟ್ಸ್) : ಪದವಿ ಅಥವಾ ಚಾರ್ಟೆಡ್ ಅಕೌಂಟಂಟ್(ಸಿಎ) ಅಥವಾ ಸಿಡಬ್ಲ್ಯೂಎ(ಐಸಿಡಬ್ಲೂಎ)

ಡೆಪ್ಯುಟಿ ಮ್ಯಾನೇಜರ್ (ಕಾನೂನು) : ಕಾನೂನು ವಿಷಯದಲ್ಲಿ ಪದವಿ

ಡೆಪ್ಯುಟಿ ಮ್ಯಾನೇಜರ್ (ರಾಜ್ಯಭಾಷಾ): ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲೀಷ್ ಪ್ರಮುಖ ಭಾಷೆಯಾಗಿ ಪದವಿಯಲ್ಲಿ ಓದಿರಬೇಕು.

ವಯೋಮಿತಿ: 24 ಆಗಸ್ಟ್ 2018ರಂತೆ 30 ವರ್ಷ
ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ಹಾಗು ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ವಿನಾಯಿತಿ ಇದೆ.
ಸಂಬಳ ವಿವರ: 40,000 ರಿಂದ 14,0000 ಪ್ರತಿ ತಿಂಗಳು

ಅರ್ಜಿ ಶುಲ್ಕ: ಸಾಮಾನ್ಯ/ ಒಬಿಸಿ : 500 ರು, ಎಸ್ ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಗ್ರೂಪ್ ಚರ್ಚೆ ಹಾಗು ವೈಯಕ್ತಿಕ ಸಂದರ್ಶನ
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+