Microsoft Layoffs 2023: ಎರಡನೇ ಹಂತದಲ್ಲಿ ಇಷ್ಟು ಉದ್ಯೋಗಿಗಳು ಮೈಕ್ರೋಸಾಫ್ಟ್‌ನ ಕೆಲಸ ಕಳೆದುಕೊಳ್ಳಲಿದ್ದಾರೆ
ಬೆಂಗಳೂರು, ಮಾರ್ಚ್ 29: ಕೋರೊನಾ ಕಾಲದಲ್ಲಿ ಆದ ನಷ್ಟ ಸರಿದೂಗಿಸಲು, ಇಲ್ಲವೇ ಇತರ ಆರ್ಥಿಕ ಕಾರಣಗಳಿಂದ ಅನೇಕ ಖಾಸಗಿ ಮತ್ತು ಎಂನ್‌ಸಿ ಕಂಪನಿಗಳು, ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಕೊರೊನಾ ಬಳಿಕವು ಉದ್ಯೋಗಿಗಳ ವಜಾ ನಿರ್ಧಾರ ಸಾವಿರಾರು ನೌಕರರನ್ನು ಚಿಂತೆಗೀಡು ಮಾಡಿದೆ.
ವಿಂಡೋಸ್ ವ್ಯವಸ್ಥೆಯನ್ನು ಮೊದಲು ಬಾರಿಗೆ ಬಳಕೆಗೆ ತಂದ ಪ್ರಮುಖವಾದ 'ಮೈಕ್ರೋಸಾಫ್ಟ್' ಕಂಪನಿ ಸಹ ತನ್ನ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ತಿಳಿಸಿವೆ. ಈ ಮೂಲಕ ಪೈಪೋಟಿಗೆ ಬಿದ್ದವರಂತೆ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರಿದಿದೆ.
ಅನೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಆರ್ಥಿಕ ಬಿಕ್ಕಟ್ಟಿನ ಕಾರಣ ನೀಡಿ ವಜಾಗೊಳಿಸುತ್ತಿವೆ. ಇದಕ್ಕೆ ಮೈಕ್ರೋಸಾಫ್ಟ್ ಕಂಪನಿಯೇನು ಹೊರತಾಗಿಲ್ಲ. ಮೈಕ್ರೋಸಾಫ್ಟ್ ಕಂಪನಿಯು ಹೊಸದಾಗಿ ಮತ್ತೆ 559 ಉದ್ಯೋಗಿಗಳು ವಜಾಗೊಳಿಸಿರುವುದಾಗಿ ತಿಳಿಸಿದೆ.

ಉದ್ಯೋಗ ಕಳೆದುಕೊಂಡವರ ಸಂಖ್ಯೆ 2,743
ಮೈಕ್ರೋಸಾಫ್ಟ್ನಿಂದ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಮೈಕ್ರೋಸಾಫ್ಟ್‌ನ ಬೆಲ್ಲೆವ್ಯೂ ಮತ್ತು ರೆಡ್‌ಮಂಡ್‌ನಲ್ಲಿ ಕೆಲಸ ಮಾಡುತ್ತಿದ್ದ 559 ನೌಕರರನ್ನು ವಜಾ ಮಾಡಿದೆ. ಇದರೊಂದಿಗೆ, ಸಿಯಾಟಲ್ ಪ್ರದೇಶದಲ್ಲಿದ್ದ ಮೈಕ್ರೋಸಾಫ್ಟ್ ಕಂಪನಿಯಿಂದ ಇದುವರೆಗೆ ಒಟ್ಟು 2,743 ಉದ್ಯೋಗ ಕಡಿತಗೊಳಿಸಿದಂತಾಗಿದೆ. ಇದು ಈ ವರ್ಷದ ಆರಂಭದಲ್ಲಿ ದೈತ್ಯ ಐಟಿ ಕಂಪನಿಗಳಿಂದ ದೊಡ್ಡ ಘೋಷಣೆಯಾಗಿದೆ. ಇದೀಗ ಹೊಸದಾಗಿ ಈ ವರ್ಷ ಎರಡನೇ ಬಾರಿಗೆ 559ಮಂದಿಯನ್ನು ಮತ್ತೆ ಕೆಲಸದಿಂದ ತೆಗೆದುಹಾಕುತ್ತಿದೆ.
ಸೋಮವಾರವೇ ವಾಷಿಂಗ್ಟನ್ನಲ್ಲಿ ಉದ್ಯೋಗ ಭದ್ರತಾ ಇಲಾಖೆ ವಜಾಗೊಳಿಸುವ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಉದ್ಯೋಗ ಕಡಿತವು ಮೈಕ್ರೋಸಾಫ್ಟ್ ಭದ್ರತಾ ಕಾರ್ಯಾಚರಣೆಗಳ ಉದ್ಯೋಗಿಗಳನ್ನು ಗುರಿಯಾಗಿಸಿದೆ ಎಂಬ ವರದಿ ಮಾಡಲಾಗಿದೆ.
ಕಳೆದ ತಿಂಗಳು ಫೆಬ್ರವರಿಯಲ್ಲಿ ಮೈಕ್ರೋಸಾಫ್ಟ್ ಕಂಪನಿ ಮೊದಲ ಸುತ್ತಿನಲ್ಲಿ ಹಲವು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿತ್ತು. ಇದರಲ್ಲಿ ರೆಡ್‌ಮಂಡ್, ಬೆಲ್ಲೆವ್ಯೂ ಮತ್ತು ಇಸಾಕ್ವಾದಲ್ಲಿ 617 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಮೈಕ್ರೋಸಾಫ್ಟ್ ಕಂಪನಿಗೆ 2021ರಲ್ಲಿ ಸೇರಿದ್ದ ಮಾಜಿ ಅಮೆಜಾನ್ ವೆಬ್ ಸೇವೆಗಳ ಕಾರ್ಯನಿರ್ವಾಹಕ ಚಾರ್ಲಿ ಬೆಲ್ ಅವರ ನೇತೃತ್ವದಲ್ಲಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಐಎಎನ್‌ಎಸ್ ವರದಿ ಮಾಡಿದೆ. ಇಸ್ರೇಲ್‌ನಲ್ಲಿನ ಮೈಕ್ರೋಸಾಫ್ಟ್ ಕಾರ್ಯಾಚರಣೆಗಳಿಂದ ಸೈಬರ್ ಸೆಕ್ಯುರಿಟಿಯಲ್ಲಿ ಕೆಲಸ ಮಾಡುತ್ತಿರುವ 100ಕ್ಕೂ ಹೆಚ್ಚು ಮಂದಿ ನೌಕರರನ್ನು ಉದ್ಯೋಗದಿಂದ ಕಡಿತಗೊಳಿಸಲಾಗಿದೆ ಎಂದು ಕ್ಯಾಲ್ಕಲಿಸ್ಟ್ ವರದಿ ತಿಳಿಸಿದೆ.
ಅಮೆಜಾನ್‌ನಿಂದಲೂ ಉದ್ಯೋಗಿ ವಜಾ ಘೋಷಣೆ
ಇನ್ನೂ ಇತ್ತೀಚೆಗಷ್ಟೇ ಇ-ಕಾಮರ್ಸ್ ಕ್ಷೇತ್ರದ ಬೃಹತ್ ಕಂಪನಿಯಾಗಿರುವ ಅಮೆಜಾನ್ (Amazon) ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಉದ್ಯೋಗಿಗಳ ವಜಾಗೆ ನಿರ್ಧರಿಸಿದೆ. ಆರ್ಥಿಕ ಅನಿಶ್ಚಿತತೆಯಿಂದಾಗಿ ಮತ್ತೆ ಸುಮಾರು 9,000 ತನ್ನ ನೌಕರರನ್ನು ಕಡಿತಗೊಳಿಸುವುದಾಗಿ ಸೋಮವಾರ ಅಧಿಕೃತವಾಗಿ ಅಮೆಜಾನ್ ಘೋಷಣೆ ಮಾಡಿದೆ.
ಅಮೆಜಾನ್‌ಗೆ ಭವಿಷ್ಯದ ಸಂಭವನೀಯ ಆರ್ಥಿಕ ಹಿನ್ನೆಡೆಯಾಗುವ ಕುರಿತು ಆತಂಕ ಇದೆ ಎನ್ನಲಾಗಿದೆ. ತಂತ್ರಜ್ಞಾನ ಕ್ಷೇತ್ರದ ಸಮಸ್ಯೆಗಳ ನಡುವೆ ಉದ್ಯೋಗ ಕಡಿತದ ಎರಡನೇ ಹಂತದ ಪ್ರಕ್ರಿಯೆ ಕೈಗೊಳ್ಳುತ್ತಿರುವ ಪ್ರಮುಖ ಕಂಪನಿಗಳ ಸಾಲಿಗೆ ಇದೀಗ ಅಮೆಜಾನ್ ಸೇರಿದೆ.
ಅಮೆಜಾನ್ ಇತ್ತೀಚಿನ ತಿಂಗಳುಗಳಲ್ಲಿ 27,000 ಉದ್ಯೋಗಿಗಳನ್ನು ಅಥವಾ ಅದರ ಸರಿಸುಮಾರು 3,00,000 ಕಾರ್ಪೊರೇಟ್ ಉದ್ಯೋಗಿಗಳ ಶೇಕಡಾ 9 ಪ್ರತಿಶತ ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿತ್ತು. ಇದೀಗ ಮತ್ತೆ 9,000 ಉದ್ಯೋಗ ಕಡಿತಗೊಳಿಸುವುದಾಗಿ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ನಿರ್ಧಾರ ಪ್ರಕಟಿಸಿದ್ದಾರೆ.












Click it and Unblock the Notifications