ಹಾವೇರಿ; ಹಿರೇಕೆರೂರಿನಲ್ಲಿ ಮಾರ್ಚ್‌5ರಂದು ಉದ್ಯೋಗ ಮೇಳ

ಮಾರ್ಚ್ 5ರಂದು ಹಾವೇರಿ ಜಿಲ್ಲೆಯ ಕೆ. ಎಚ್. ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯ ಆವರಣ, ಹಿರೇಕೆರೂರು ಇಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.

ಹಾವೇರಿ, ಫೆಬ್ರವರಿ 20; ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಮಾರ್ಚ್ 5ರಂದು ಆಯೋಜನೆ ಮಾಡಲಾಗಿದೆ. ಸುಮಾರು 100 ಪ್ರತಿಷ್ಠತ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

ಕೌರವ ಶಿಕ್ಷಣ ಸಂಸ್ಥೆ (ರಿ), ಸನ್ಮಾನ್ಯ ಶ್ರೀ ಬಿ. ಸಿ. ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ಉದ್ಯೋಗ ಆಕಾಂಕ್ಷಿಗಳಿಗೆ ಸಹಾಯಕವಾಗಲು ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.

ದಿನಾಂಕ 5/3/2023 ರಂದು ಈ ಉದ್ಯೋಗ ಮೇಳ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಅಂದರೆ 4/3/2023ರ ಶನಿವಾರ ಬೆಳಗ್ಗೆ 10 ಗಂಟೆಗೆ ಕೌಶಲ್ಯ ಕೈಪಿಡಿ ಬಿಡುಗಡೆ ಕಾರ್ಯಕ್ರಮ, ಉದ್ಯೋಗ ಆಕಾಂಕ್ಷಿಗಳಿಗೆ ಸಂದರ್ಶನದ ಕುರಿತು ಪೂರ್ವಭಾಗಿ ತರಬೇತಿ ನಡೆಯಲಿದೆ.

Mega Job Fair In Haveri Hirekerur On March 5th

5/3/2023ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರವನ್ನು ನೀಡಲಾಗುತ್ತದೆ.

ಈ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಕಾಂ, ಬಿಎಸ್‌ಸಿ, ಬಿಬಿಎ, ಎಂಬಿಎ, ಎಂಸಿಎ, ಡಿಪ್ಲೊಮಾ (ಎಲ್ಲಾ ಬ್ರಾಂಚ್), ಐಟಿಐ, ಬಿಇ (ಎಲ್ಲಾ ಬ್ರಾಂಚ್), ಕಂಪ್ಯೂಟರ್ ಕೋರ್ಸ್‌ ಮತ್ತು ಎಲ್ಲಾ ಪದವಿ, ಸ್ನಾತಕೋತ್ತರ ಪದವೀಧರರು ಪಾಲ್ಗೊಳ್ಳಬಹುದಾಗಿದೆ.

ಉದ್ಯೋಗ ಮೇಳಕ್ಕೆ ಬರುವಾಗ ರೆಸ್ಯೂಮ್ 10 ಕಾಪಿ ತರಬೇಕು ಎಂದು ಮನವಿ ಮಾಡಲಾಗಿದೆ. ಆಸಕ್ತರು https://forms.gle/Fiqaiy18UCxPeC7LA ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

Mega Job Fair In Haveri Hirekerur On March 5th

ಆಸಕ್ತ ಮತ್ತು ಅರ್ಹರು ಹೆಚ್ಚಿನ ಮಾಹಿತಿಗಾಗಿ ನಾಗರಾಜ ಬಣಕಾರ 9739310272,
ಮನೋಜ್ ಹಾರ್ನಳ್ಳಿ 9164704080, ಮಂಜುನಾಥ ವಂಟಕರ 7204138486 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಉದ್ಯೋಗ ಮೇಳ ನಡೆಯುವ ಸ್ಥಳ; ಹಿರೇಕೆರೂರ ಪಟ್ಟಣ. C.E.S.ಕೆ. ಎಚ್. ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯ ಆವರಣ, ಹಿರೇಕೆರೂರು.

ಸಂದರ್ಶನದ ದಿನಾಂಕ ಬದಲು; ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ ಇಲ್ಲಿ ಖಾಲಿ ಇರುವ ಕಿರಿಯ ಸಹಾಯಕರು/ ನಗದು ಗುಮಾಸ್ತರು/ ಕ್ಷೇತ್ರಾಧಿಕಾರಿಗಳು, ಅಟೆಂಡರ್ ವಾಹನ ಚಾಲಕರ ಹಾಗೂ ಜಲಗಾರರ ಹುದ್ದೆಗಳಿಗೆ ಸಂದರ್ಶನ ದಿನಾಂಕವನ್ನು ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಿದೆ.

ಫೆಬ್ರವರಿ 25ಕ್ಕೆ ನಡೆಯಬೇಕಿದ್ದ ಸಂದರ್ಶನವನ್ನು ಫೆಬ್ರವರಿ 28ಕ್ಕೆ ಹಾಗೂ ಫೆಬ್ರವರಿ 26ರಂದು ನಡೆಯಬೇಕಿದ್ದ ಸಂದರ್ಶನವನ್ನು ಮಾರ್ಚ್ 1ರಂದು ನಡೆಸಲು ತೀರ್ಮಾನಿಸಲಾಗಿದೆ. ಸಂಬಂಧಿಸಿದ ಅಭ್ಯರ್ಥಿಗಳಿಗೆ ಸಂದರ್ಶನ ಕರೆಯೋಲೆ ಕಳುಹಿಸಲಾಗಿದೆ. ಇನ್ನುಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+