ಮಂಡ್ಯದಲ್ಲಿ ಕಾನೂನು ಸಲಹೆಗಾರ ಹುದ್ದೆ ಖಾಲಿ ಇದೆ
ಬೆಂಗಳೂರು, ಸೆಪ್ಟೆಂಬರ್ 08 : ಕಾನೂನು ಸಲಹೆಗಾರ ಹುದ್ದೆಗಳನ್ನು ಭರ್ತಿ ಮಾಡಲು ಕಂದಾಯ ಇಲಾಖೆಯ ಮಂಡ್ಯ ಘಟಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 20, 2018 ಕೊನೆಯ ದಿನವಾಗಿದೆ.
ಕಂದಾಯ ಇಲಾಖೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಭೂ ಸ್ವಾಧೀನ ಹಾಗೂ ಇತರೆ ಪ್ರಕರಣದಲ್ಲಿ ಕಾನೂನಿನ ಸಲಹೆ ನೀಡಲು ಕಾನೂನು ಸಲಹೆಗಾರ ಹುದ್ದೆಗಳನ್ನು ಸೃಜಿಸಲಾಗಿದೆ. 1 ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು.
ಕಾನೂನು ಪದವೀಧರರು, ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ, ನಿವೃತ್ತ ತಹಶೀಲ್ದಾರ್, ನಿವೃತ್ತ ಉಪ ತಹಶೀಲ್ದಾರ್, ನಿವೃತ್ತ ಸಿವಿಲ್ ನ್ಯಾಯಾಧೀಶರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಕಾನೂನು ಪದವೀಧರರು, ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ, ನಿವೃತ್ತ ತಹಶೀಲ್ದಾರ್, ನಿವೃತ್ತ ಉಪ ತಹಶೀಲ್ದಾರ್, ನಿವೃತ್ತ ಸಿವಿಲ್ ನ್ಯಾಯಾಧೀಶರು ಕೆಳಕಂಡ ದಾಖಲೆಗಳ ಜೊತೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ದಾಖಲೆಗಳು : ಅಧಿಕಾರಿ/ನೌಕರರು ಕರ್ತವ್ಯದಿಂದ ನಿವೃತ್ತಿ ಹೊಂದಿದ ಆದೇಶದ ದೃಢೀಕೃತ ಪ್ರತಿ, ವಿದ್ಯಾರ್ಹತೆಯ ಬಗ್ಗೆ ದೃಢೀಕೃತ ದಾಖಲೆ, ವೈದ್ಯಕೀಯ ದೃಢೀಕರಣ ಪತ್ರ, ವಾಸ ಸ್ಥಳದ ವಿಳಾಸ.
ಮೇಲ್ಕಂಡ ದಾಖಲಾತಿಗಳೊಂದಿಗೆ ಅರ್ಜಿಯನ್ನು ದಿನಾಂಕ 20/9/2018ರೊಳಗೆ ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ ಇವರಿಗೆ ಸಲ್ಲಿಸಬೇಕು.












Click it and Unblock the Notifications