ಕೆಎಸ್ಆರ್‌ಟಿಸಿ ಅಪ್ರೆಂಟಿಸ್ ತರಬೇತಿ; ನ. 4ರ ತನಕ ಅರ್ಜಿ ಹಾಕಿ

ಬೆಂಗಳೂರು, ಅಕ್ಟೋಬರ್ 11; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಪುತ್ತೂರು ವಿಭಾಗ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಸಂದರ್ಶನಕ್ಕಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಲು ನವೆಂಬರ್ 4 ಕೊನೆಯ ದಿನವಾಗಿದೆ.

ಶಿಶಿಕ್ಷು ಅಧಿನಿಯಮ 1961 ರನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿ, ಸದುಪಯೋಗ ಪಡೆದುಕೊಳ್ಳಬಹುದು.

ksrtc-apprenticeship-training

ಎಷ್ಟು ಹುದ್ದೆಗಳು?; ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರಗಳ ನೀಡಲಾಗಿದೆ. ಮೆಕ್ಯಾನಿಕ್ ಡೀಸೆಲ್ (40 ಸ್ಥಾನ), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (10 ಸ್ಥಾನ), ಎಲೆಕ್ಟ್ರೀಷಿಯನ್(18 ಸ್ಥಾನ), ಮೋಟಾರ್ ಮೆಕ್ಯಾನಿಕ್ ವೆಹಿಕಲ್ (19 ಸ್ಥಾನ), ವೆಲ್ಡರ್(5 ಸ್ಥಾನ), ಫಿಟ್ಟರ್ (5 ಸ್ಥಾನ), ಪಾಸಾ(10 ಸ್ಥಾನ). ತರಬೇತಿಯ ಅವಧಿ ಒಂದು ವರ್ಷ ಆಗಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರ. ಮೆಕ್ಯಾನಿಕ್ ಡೀಸೆಲ್ ಒಟ್ಟು 29 ಸ್ಥಾನ. ತರಬೇತಿ 2 ವರ್ಷ ಆಗಿರುತ್ತದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆಯೋಗದ ಅಂತರ್ಜಾhttp://xn--ww-2gk.apprenticeshippindia.org/ ಮೂಲಕ ನೋಂದಣಿ ಮಾಡುವುದು ಹಾಗೂ ನೋಂದಣಿ ಪ್ರತಿ ಸಲ್ಲಿಸುವುದು. ವಯೋಮಿತಿ 2023ರ ಅಕ್ಟೋಬರ್ 6ಕ್ಕೆ 18 ವರ್ಷ ತುಂಬಿರಬೇಕು.

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ 2, ಬ್ಯಾಂಕ್ ಪಾಸ್ ಬುಕ್ ಪ್ರತಿ 2, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‍ನಿಂದ ದೃಢೀಕರಣ ಪತ್ರ. ಇ-ಮೇಲ್ ಐಡಿ, ವಿದ್ಯಾರ್ಹತೆಯ ಮೂಲದಾಖಲಾತಿ ಮತ್ತು ಜೆರಾಕ್ಸ್ ಪ್ರತಿ ಹಾಗೂ ಜಾತಿ ಪ್ರಮಾಣದ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿಯನ್ನು ತರಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗೆ ಮಡಿಕೇರಿ ಕೆಎಸ್ಆರ್‌ಟಿಸಿ ಘಟಕದ ವ್ಯವಸ್ಥಾಪಕರು ಅಥವಾ ಪುತ್ತೂರಿನ ವಿಭಾಗೀಯ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ಇವರನ್ನು ಸಂಪರ್ಕಿಸಬಹುದು.

ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ; ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು), ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಈ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜೀ ಜನಸ್ನೇಹಿ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಹ ಫಲಾಪೇಕ್ಷಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇರುವುದಿಲ್ಲ. ಇನ್ನುಳಿದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 3 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ 080-22374832, 8050770005 ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+