10ನೇ ತರಗತಿ ಪಾಸಾದವರು ಕೆಎಸ್‌ಐಎಸ್‌ಎಫ್‌ಗೆ ಅರ್ಜಿ ಹಾಕಿ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 29 : ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ದಳ (ಕೆಎಸ್‌ಐಎಸ್‌ಎಫ್)ದಲ್ಲಿ ಖಾಲಿ ಇರುವ 395 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 18.

10ನೇ ಕ್ಲಾಸ್ ಪಾಸಾದವರು ಕೆಎಸ್ಆರ್‌ಪಿ ನೇಮಕಾತಿಗೆ ಅರ್ಜಿ ಹಾಕಿ

ಕೆಎಸ್‌ಐಎಸ್‌ಎಫ್‌ನಲ್ಲಿ 395 (ಪುರುಷ/ಮಹಿಳಾ) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ನವೆಂಬರ್ 27ರಿಂದ ಡಿಸೆಂಬರ್ 18ರ ತನಕ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೆಪಿಎಸ್ಸಿಯಲ್ಲಿ 1543 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

KSP Recruitment 2017, Police Constable 395 Posts

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ-ಸಿಬಿಎಸ್‌ಇ, ಎಸ್‌ಎಸ್‌ಎಲ್‌ಸಿ-ಐಸಿಎಸ್‌ಇ, ಎಸ್‌ಎಸ್‌ಎಲ್‌ಸಿ-ಎಸ್‌ಎಸ್‌ಸಿ, ಎಸ್‌ಎಸ್‌ಎಲ್‌ಸಿ-ಸ್ಟೇಟ್ ಬೋರ್ಡ್, ಎಸ್‌ಎಸ್‌ಎಲ್‌ಸಿ-ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆರ್ ಬಿಐನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ

ವಯೋಮಿತಿ : 18 ರಿಂದ 25 ವರ್ಷದೊಳಗಿನ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್‌ಸಿ/ಎಸ್‌ಟಿ/ಒಬಿಸಿ ಅಭ್ಯರ್ಥಿಗಳಿಗೆ ಸರ್ಕಾರ ನಿಗದಿಪಡಿಸಿದ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 250 ರೂ., ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KSP has issued a notification for the recruitment of Police Constable (Man & Women) (KSISF) Vacancy at 395 posts. Interested candidates may apply by 18th December 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ