ಕರ್ನಾಟಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಜೂನ್ 13 : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 227 ಸಬ್ ಇನ್ಸ್ ಪೆಕ್ಟರ್ ಹುದ್ದೆ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

184 ಸಿವಿಲ್ ಹಾಗೂ 84 ಗುಪ್ತಚರ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿ ದಿನಾಂಕ 2017, ಜೂನ್ 28 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಪಾವತಿಸಲು ಜೂನ್ 29ಕೊನೆ ದಿನವಾಗಿದೆ.

ಕರ್ನಾಟಕ ಪೊಲೀಸ್ ಪೇದೆ ಹುದ್ದೆ : ಮಹಿಳೆಯರಿಗೂ ಅವಕಾಶ

KSP Recruitment 2017 Apply for 227 Police Sub Inspector Posts

ಹುದ್ದೆ: ಇನ್ಸ್ ಪೆಕ್ಟರ್
ಹುದ್ದೆ ಎಲ್ಲಿ?: ಕರ್ನಾಟಕ
ವೇತನ ಶ್ರೇಣಿ: 20000 ರಿಂದ 36300 ರು. ತಿಂಗಳಿಗೆ.
ವಯೋಮಿತಿ: 28/06/2017ಕ್ಕೆ ಅನ್ವಯವಾಗುವಂತೆ ಎಸ್ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ 21ರಿಂದ 30 ಹಾಗೂ ಇತರೆ ಸಾಮಾನ್ಯ ಅಭ್ಯರ್ಥಿಗಳಿಗೆ 21ರಿಂದ 28 ವಯಸ್ಸನ್ನು ನಿಗದಿ ಪಡಿಸಲಾಗಿದೆ.

ಸಿಆರ್ ಪಿಎಫ್ ನಲ್ಲಿ ವಿವಿಧ ಹುದ್ದೆ ಖಾಲಿ ಇವೆ, ಅರ್ಜಿ

ವಿದ್ಯಾರ್ಹತೆ: ಪೊಲೀಸ್ ಸಬ್ ಇನ್​ ಸ್ಪೆಕ್ಟರ್ ಹುದ್ದೆಗೆ ಅರ್ಜಿ ಅಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದಿರಬೇಕು.

ಆಯ್ಕೆ ವಿಧಾನ: ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆ, ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Police released new notification on their official website for the recruitment of 227 (two hundred and twenty seven) vacancies for Police Sub Inspector. Job seekers should apply from 09th June 2017 and before 28th June 2017.
Please Wait while comments are loading...